ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ಶಾಕ್ – ರೆಸ್ಟ್ ತಗೊಂಡು ತಪ್ಪು ಮಾಡಿದ್ರಾ ಆಟಗಾರರು?

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ಶಾಕ್ – ರೆಸ್ಟ್ ತಗೊಂಡು ತಪ್ಪು ಮಾಡಿದ್ರಾ ಆಟಗಾರರು?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಇಬ್ಬರ ಟಿ-20 ಕ್ರಿಕೆಟ್ ಭವಿಷ್ಯದ ಬಗ್ಗೆ ಇನ್ನೂ ಕೂಡ ಯಾವುದೇ ಕ್ಲ್ಯಾರಿಟಿ ಸಿಗ್ತಾ ಇಲ್ಲ. 2024ರ ಟಿ-20 ವರ್ಲ್ಡ್​​ಕಪ್​ನಲ್ಲಿ ಇಬ್ಬರು ಆಡ್ತಾರೆ ಅನ್ನೋದು ಇನ್ನೂ ಗ್ಯಾರಂಟಿ ಇಲ್ಲ. ಇತ್ತೀಚೆಗಷ್ಟೇ ನಡೆದ ಬಿಸಿಸಿಐ ಮೀಟಿಂಗ್​ನಲ್ಲಿ ರೋಹಿತ್​ ಶರ್ಮಾ ಟಿ20 ವಿಶ್ವಕಪ್​ನಲ್ಲಿ ಆಡಲೇಬೇಕು. ರೋಹಿತ್​ ಶರ್ಮಾರೆ ಕ್ಯಾಪ್ಟನ್ ಆಗಬಹುದು ಅನ್ನೋ ಧಾಟಿಯಲ್ಲಿ ಚರ್ಚೆಯಾಗಿತ್ತು. ಆದ್ರೆ ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಯಾವುದೇ ಫೈನಲ್ ಡಿಸೀಶನ್​ ತೆಗೆದುಕೊಂಡಿರಲಿಲ್ಲ. ಆದ್ರೆ, ಈಗ ನೋಡಿದ್ರೆ ರೋಹಿತ್​ ಶರ್ಮಾ ಕೂಡ ಟಿ-20 ವರ್ಲ್ಡ್​​ಕಪ್​​ನಲ್ಲಿ ಆಡಿಯೇ ಆಡ್ತಾರೆ ಅನ್ನೋದು ಗ್ಯಾರಂಟಿ ಇಲ್ಲ.

ಇದನ್ನೂ ಓದಿ:

ಒಂದು ವಿಚಾರವಂತೂ ಸ್ಪಷ್ಟ. ಕಳೆದ ಒಂದು ವರ್ಷಗಳಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಒಂದೇ ಒಂದು ಟಿ-20 ಮ್ಯಾಚ್​​ನ್ನ ಆಡದೆ ಇರೋದು ಈಗ ಇಬ್ಬರ ಕೆರಿಯರ್​ಗೂ ಎಫೆಕ್ಟ್ ಆಗ್ತಿದೆ. ಯಾಕಂದ್ರೆ ಟ20 ಫಾರ್ಮೆಟ್​​ನಲ್ಲಿ ಇಬ್ಬರೂ ಯಾವ ಫಾರ್ಮ್​​​ನಲ್ಲಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ. ವಂಡೇ ವರ್ಲ್ಡ್​ಕಪ್​ನಲ್ಲಿ ನೀಡಿದ ಪರ್ಫಾಮೆನ್ಸ್ ಆಧಾರದ ಮೇಲೆ ಟಿ20ಗೆ ಯಾರನ್ನ ಕೂಡ ಸೆಲೆಕ್ಟ್ ಮಾಡೋದಿಲ್ಲ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸೀರಿಸ್​​ನಲ್ಲೂ ರೋಹಿತ್ ಮತ್ತು ಕೊಹ್ಲಿ ಅಡ್ತಾ ಇಲ್ಲ. ಆ್ಯಕ್ಚುವಲಿ ಈಗ ಸೌತ್​ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​​ನಲ್ಲಿ ಟೀಂ ಇಂಡಿಯಾವನ್ನ ಲೀಡ್ ಮಾಡುವಂತೆ ಬಿಸಿಸಿಐ ರೋಹಿತ್​ ಶರ್ಮಾರನ್ನ ಕೇಳಿಕೊಂಡಿತ್ತು. ಆದ್ರೆ, ರೋಹಿತ್​ ರೆಸ್ಟ್ ಪಡೆಯೋಕೆ ತೀರ್ಮಾನಿಸಿದ್ರಿಂದ ಈಗ ಟಿ-20 ವರ್ಲ್ಡ್​​ಕಪ್​​ಗೆ ಸೆಲೆಕ್ಟ್ ಮಾಡೋ ವಿಚಾರದಲ್ಲೂ ರೋಹಿತ್​ ಬಗ್ಗೆಯೂ ಬಿಸಿಸಿಐ ಸ್ವಲ್ಪ ಯೋಚನೆ ಮಾಡ್ತಿದೆ. ಸೌತ್ ಆಫ್ರಿಕಾ ಸೀರಿಸ್​ ಬಳಿಕ ವರ್ಲ್ಡ್​ಕಪ್​ಗೂ ಮುನ್ನ ಟೀಂ ಇಂಡಿಯಾ ಆಡಲಿರೋ ಏಕೈಕ ಟಿ-20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ. ಅಲ್ಲೂ ರೋಹಿತ್ ಮತ್ತು ಕೊಹ್ಲಿ ಆಡ್ತಾರಾ ಗೊತ್ತಿಲ್ಲ. ಜನವರಿಯಲ್ಲಿ ಅಫ್ಘಾನ್ ಸೀರಿಸ್​​ಗೆ ಸ್ಕ್ವಾಡ್​ ಅನೌನ್ಸ್​ಮೆಂಟ್ ಆಗಲಿದೆ. ಹೀಗಾಗಿಯೇ ಇಬ್ಬರೂ ಸೀನಿಯರ್​​ ಕ್ರಿಕೆಟರ್ಸ್​ಗಳ ವಿಚಾರವಾಗಿ ಬಿಸಿಸಿಐ ಗಂಭೀರ ಚಿಂತನೆ ನಡೆಸ್ತಿದೆ.

ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಟಿ-20 ವರ್ಲ್ಡ್​ಕಪ್​​ಗೆ ಸೆಲೆಕ್ಟ್ ಮಾಡೋ ಬಗ್ಗೆ ಬಿಸಿಸಿಐ ಪ್ಲ್ಯಾನ್-ಬಿ ಕೂಡ ರೆಡಿ ಮಾಡಿಕೊಂಡಿದೆ. ವಿಶ್ವಕಪ್​ಗೂ ಮುನ್ನ ಐಪಿಎಲ್​ ಟೂರ್ನಿ ನಡೆಯುತ್ತೆ. ಹೀಗಾಗಿ ಐಪಿಎಲ್​ ಪರ್ಫಾಮೆನ್ಸ್​ನ್ನ ಕೂಡ ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿದೆ. ಟಿ-20 ವರ್ಲ್ಡ್​​ಕಪ್​​ಗೆ ತಂಡಕ್ಕೆ ಸೇರ್ಪಡೆಯಾಗಲು ರೇಸ್​ನಲ್ಲಿರುವ ಪ್ಲೇಯರ್ಸ್​ಗಳ ಪರ್ಫಾಮೆನ್ಸ್​ನ್ನ ಬಿಸಿಸಿಐ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಲಿದೆ. ಎಸ್ಪೆಷಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾವ ರೀತಿ ಬ್ಯಾಟಿಂಗ್ ಮಾಡ್ತಾರೆ ಅನ್ನೋದ್ರ ಮೇಲೆಯೇ ಬಿಸಿಸಿಐ ನಿಗಾ ಇರುತ್ತೆ. ಹೀಗಾಗಿ ಟಿ20 ವರ್ಲ್ಡ್​​ಕಪ್​ನಲ್ಲಿ ಆಡಬೇಕು ಅಂತಾ ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಂಟೆನ್ಷನ್ ಇಟ್ಟುಕೊಂಡಿದ್ರೆ, ಇಬ್ಬರೂ ಐಪಿಎಲ್​​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್​ ನೀಡಲೇಬೇಕು. ಒಂದು ವೇಳೆ ಐಪಿಎಲ್​​ನಲ್ಲಿ ಫೇಲ್ ಆದ್ರೆ, ವರ್ಲ್ಡ್​​ಕಪ್​​ ರೇಸ್​ನಿಂದ ರೋಹಿತ್ ಮತ್ತು ಕೊಹ್ಲಿ ಔಟಾಗುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಹಲವು ಮಾಜಿ ಕ್ರಿಕೆಟರ್ಸ್ ಮತ್ತು ಕ್ರಿಕೆಟ್ ಎಕ್ಸ್​​ಪರ್ಟ್​ಗಳೆಲ್ಲಾ ಟಿ-20 ವರ್ಲ್ಡ್​​ಕಪ್​ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಡಲೇಬೇಕು. ತಂಡ ಬ್ಯಾಲೆನ್ಸ್ ಆಗಬೇಕು ಅನ್ನೋದಾದ್ರೆ ಇವರಿಬ್ಬರೂ ಸೀನಿಯರ್​ ಕ್ರಿಕೆಟರ್ಸ್ ಇರಲೇಬೇಕು ಅಂತಾ ಹೇಳ್ತಾ ಇದ್ದಾರೆ. ಆದ್ರೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಒಂದು ಇಂಪಾರ್ಟೆಂಟ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಗಂಭೀರ್ ಪ್ರಕಾರವೂ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಟಿ-20 ವರ್ಲ್ಡ್​​ಕಪ್​ ಪಿಕ್ ಮಾಡಬೇಕು. ಬಟ್..ಫಾರ್ಮ್​​ನಲ್ಲಿ ಇದ್ರೆ ಮಾತ್ರ. ಗಂಭೀರ್ ಹೇಳೋ ಪ್ರಕಾರ ಇಲ್ಲಿ ಎಕ್ಸ್​ಪೀರಿಯನ್ಸ್​ ಮತ್ತು ಈ ಹಿಂದಿನ ಟ್ರ್ಯಾಕ್ ರೆಕಾರ್ಡ್​​ಗಿಂತ ಹೆಚ್ಚಾಗಿ ಕರೆಂಟ್ ಫಾರ್ಮ್ ತುಂಬಾ ಮುಖ್ಯ. ರೋಹಿತ್ ಮತ್ತು ಕೊಹ್ಲಿ ಐಪಿಎಲ್​​ನಲ್ಲಿ ಒಳ್ಳೆಯ ಪರ್ಫಾಮೆನ್ಸ್​ ನೀಡಿದ್ರು ಅಂದ್ರೆ. ಫುಲ್​ ಫಾರ್ಮ್​​ನಲ್ಲಿ ಇದ್ದಾರೆ ಅಂದ್ರೆ ಇಬ್ಬರನ್ನೂ ಟಿ20 ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಮಾಡಲೇಬೇಕು ಅಂತಾ ಗೌತಮ್ ಗಂಭೀರ್ ಹೇಳಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಕಥೆ ಒಂದ್ಕಡೆಯಾದ್ರೆ, ಇನ್ನು ಇಂಜ್ಯೂರಿಗೆ ಒಳಗಾಗಿರೋ ಹಾರ್ದಿಕ್ ಪಾಂಡ್ಯ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್​ಗೆ ಕಮ್​​ಬ್ಯಾಕ್ ಮಾಡುವ ಸಾಧ್ಯತೆ ಇದೆ ಅಂತಾ ಬಿಸಿಸಿಐ ಮಾಹಿತಿ ನೀಡಿದೆ. ಹೀಗಾಗಿ ಹಾರ್ದಿಕ್ ಕಮ್​ಬ್ಯಾಕ್​ ಕೂಡ ಟೀಂ ಇಂಡಿಯಾಗೆ ತುಂಬಾ ಕ್ರೂಶಿಯಲ್ ಆಗಲಿದೆ. ಯಾಕಂದ್ರೆ, ಒಂದು ವೇಳೆ ರೋಹಿತ್ ಶರ್ಮಾ ಟಿ-20 ವರ್ಲ್ಡ್​ಕಪ್​​ನಲ್ಲಿ ಆಡಲ್ಲ ಅಂದ್ರೆ ಹಾರ್ದಿಕ್ ಪಾಂಡ್ಯಾ ಟೀಂನ್ನ ಲೀಡ್ ಮಾಡಬೇಕಾಗಬಹುದು.

Sulekha