ಚಿನ್ನಸ್ವಾಮಿ ಸ್ಪೇಡಿಯಂ ತಪ್ಪೇನು? – ಮ್ಯಾಚ್ ಶಿಫ್ಟ್, KSCAಗೆ ಪೆಟ್ಟು
ಕರ್ನಾಟಕದ ಮೇಲೆ BCCI ಕೆಂಗಣ್ಣು!

ಚಿನ್ನಸ್ವಾಮಿ ಸ್ಪೇಡಿಯಂ ತಪ್ಪೇನು? –  ಮ್ಯಾಚ್ ಶಿಫ್ಟ್, KSCAಗೆ ಪೆಟ್ಟುಕರ್ನಾಟಕದ ಮೇಲೆ BCCI ಕೆಂಗಣ್ಣು!

ಆರ್​ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ದುರಂತ ಕ್ರಿಕೆಟ್‌ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಹಾಗೇ ಆರ್‌ಸಿಬಿಗೆ ಇದು ಒಂದು ರೀತಿಯ ಕಳಂಕವನ್ನ ತಂದಿದೆ. ಅಷ್ಟೇ ಅಲ್ಲ ಬೆಂಗಳೂರು ಕಾಲ್ತುಳಿತ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅನೇಕ ಕ್ರೀಡಾಪಟುಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ರು. ಜೀವಕ್ಕಿಂತ ಯಾವುದು ದೊಡ್ಡದಲ್ಲ. ವಿಜಯೋತ್ಸವದ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ರು. ಇನ್ನೂ ಕೇಲವರ ಆರ್‌ಸಿಬಿ ಕಪ್ ಗೆಲ್ಲೋದೆ ಬೇಡವಿತ್ತು. ಕಪ್ ಗೆದ್ದಿಲ್ಲ ಅಂದಿದ್ರೆ 11 ಜನರ ಪ್ರಾಣ ಉಳಿಯುತ್ತಿತ್ತು ಅನ್ನೋ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕ್ರೀಡಾಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಶಿಫ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ.

 ಬೆಂಗಳೂರಿನಿಂದ ಪಂದ್ಯಗಳು ಬೇರೆ ಕಡೆ ಶಿಫ್ಟ್

ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತದ ಎಫೆಕ್ಟ್​​, ಕೇವರ ಆರ್‌ಸಿಬಿ ಫ್ಯಾನ್ಸ್ ಖುಷಿಯಲ್ಲಿ ಕಿತ್ತು ಕೊಂಡಿಲ್ಲ. ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಮುಂಬವರು  ಪಂದ್ಯಾವಳಿ ಮೇಲೂ ಆಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕ್ರಿಕೆಟ್​​ ಪಂದ್ಯಗಳನ್ನು ಬಿಸಿಸಿಐ ಸ್ಥಳಾಂತರ ಮಾಡಿದೆ ಅನ್ನೋ ಸುದ್ದಿ ಹೊರಬಿದ್ದಿದೆ. ಕಾಲ್ತುಳಿತದ ಘಟನೆ ಬಳಿಕ ಬಿಸಿಸಿಐ ಪಂದ್ಯ ಸ್ಥಳಾಂತರಕ್ಕೆ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ.


  ಬೆಂಗಳೂರಿನಿಂದ ರಾಜ್ ಕೋಟ್​ಗೆ ಪಂದ್ಯಗಳು ಶಿಫ್ಟ್​

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಸೌತ್​ ಆಫ್ರಿಕಾ ನಡುವಿನ ಪಂದ್ಯಗಳನ್ನು ನಡೆಸಲು ಈ ಮೊದಲು ಬಿಸಿಸಿಐ ನಿರ್ಧಾರ ಮಾಡಿತ್ತು. ಇದೀಗ ಆರ್​ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆ ಬೆಂಗಳೂರಿನಿಂದ ರಾಜ್ ಕೋಟ್ ಗೆ ಪಂದ್ಯಗಳನ್ನ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗ್ತಿದೆ.

ಭಾರತ ಹಾಗೂ ಸೌತ್​ ಆಫ್ರಿಕಾ ಮ್ಯಾಚ್​

ಭಾರತ ಹಾಗೂ ಸೌತ್​ ಆಫ್ರಿಕಾ ನಡುವೆ ನವೆಂಬರ್ 13 ರಿಂದ 19ರ ವರೆಗೆ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್​ಕೋಟ್​ಗೆ ಪಂದ್ಯಗಳು ಸ್ಥಳಾಂತರಗೊಂಡಿದೆ. ಆದ್ರೆ ಪಂದ್ಯ ಸ್ಥಳಾಂತರ ಬಗ್ಗೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ ಎನ್ನಲಾಗ್ತಿದೆ. ಒಂದ್ಕಡೆ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಬಿಸಿಯ ನಡುವೆಯೇ ಚಿನ್ನಸ್ವಾಮಿಯ ಪಂದ್ಯಗಳ ಸ್ಥಳಾಂತರ ನಡಿತಿದೆ. ಇದಕ್ಕೆ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗ್ತಿದೆ. ಕೆಎಸ್​ಸಿಎ ಅಧ್ಯಕ್ಷ ರಘುರಾಮ್​ ಭಟ್​, ಇದಕ್ಕೆ ಬೇರೆಯದ್ದೇ ಹೇಳಿದ್ದಾರೆ.

ಕಾಲ್ತುಳಿತ ಪ್ರಕರಣಕ್ಕೂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಪಂದ್ಯಗಳ ಸ್ಥಳಾಂತರಕ್ಕೂ ಸಂಬಂಧ ಇಲ್ಲ. ಈ ಪ್ರಕರಣ ನಡೆದ ಸಮಯದಲ್ಲೇ ಕಾರಣಕ್ಕೆ ಸಂಬಂಧ ಕಲ್ಪಿಸಲಾಗ್ತಿದೆ ಅಷ್ಟೇ ಹೊರತು ಪಂದ್ಯಗಳ ಸ್ಥಳಾಂತರಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು  KSCA ಅಧ್ಯಕ್ಷ ರಘುರಾಮ್​ ಭಟ್​ ಹೇಳಿದ್ದಾರೆ.

ಇನ್ನೂ ಮಾಜಿ ಕ್ರಿಕೆಟಿಗ ಶಾಂತಾ ರಂಗಸ್ವಾಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.  50 ವರ್ಷಗಳಿಂದ ಅಭಿಮಾನಿಗಳಿಗೆ ಸಂತಸ ನೀಡಿದ ಕ್ರೀಡಾಂಗಣದಲ್ಲಿ ದುರಂತ ನಡೆದಿದ್ದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಿಳಾ ವಿಶ್ವಕಪ್ ಪಂದ್ಯಗಳನ್ನ ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಿದರೆ, ಅದು ರಾಜ್ಯ ಕ್ರಿಕೆಟ್‌ಗೆ ದೊಡ್ಡ ಹೊಡೆತವಾಗುತ್ತದ ಎಂದು ಹೇಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳ ಮೇಲೆ ಕರಿಛಾಯೆ..?

  ಭಾರತ ಎ, ಸೌತ್ ಆಫ್ರಿಕಾ ಎ ನಡುವಿನ ಪಂದ್ಯಗಳು ಮಾತ್ರವಲ್ಲ. ಇದೇ ವರ್ಷ ಭಾರತ ಹಾಗೂ ಶ್ರೀಲಂಕಾ ಸಹಯೋಗದಲ್ಲಿ ಮಹಿಳಾ ಟಿ-20 ವಿಶ್ವಕಪ್ ನಡೆಯಲಿದೆ. 12 ವರ್ಷಗಳ ಬಳಿಕ ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಚಿನ್ನಸ್ವಾಮಿಯೇ ವೇದಿಕೆಯಾಗಿದೆ. ಉದ್ಘಟನಾ ಪಂದ್ಯಕ್ಕೆ ಮಾತ್ರವಲ್ಲ. ಅಕ್ಟೋಬರ್​ 30ರಂದು ನಡೆಯಲಿರುವ ಸೆಮಿಫೈನಲ್​-2 ಹಾಗೂ ಫೈನಲ್​ ಪಂದ್ಯವೂ ಚಿನ್ನಸ್ವಾಮಿಯಲ್ಲೇ ಆಯೋಜಿಸಲಾಗಿದೆ. ಆದ್ರೀಗ ಕಾಲ್ತುಳಿತದ ಪ್ರಕರಣದಿಂದ ಈ ಪಂದ್ಯಗಳು ಸಹ ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ವಲಯದಲ್ಲಿ ಚರ್ಚೆಗಳು ನಡೆದಿವೆ.

18 ವರ್ಷಗಳ ಬಳಿಕ ಆರ್​ಸಿಬಿ ಕಪ್ ಗೆದ್ದ ಖುಷಿ ಒಂದೇ ಒಂದು ದಿನ ಕೂಡ ಉಳಿದಿಲ್ಲ.  ಆರ್‌ಸಿಬಿ ಹಾಗೂ ಕರ್ನಾಟಕ ಕ್ರಿಕೆಟ್​ಗೂ ಈ ಒಂದು ಘಟನೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಈಗ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮ್ಯಾಚ್​ ಶಿಫ್ಟ್​ ಆಗೋ ಹಂತಕ್ಕೂ ತಲುಪಿದ್ದು, ಇದರ ನಡುವೆ ಸ್ಟೇಡಿಯಂನೇ ಶಿಫ್ಟ್​ ಮಾಡ್ತೀವಿ ಅಂತಾ ಸರ್ಕಾರ ಹೇಳ್ತಿದೆ.

 

Kishor KV