IPLಗೆ 2 ಸಲ ಶೆಡ್ಯೂಲ್ ಅನೌನ್ಸ್ ಏಕೆ? – 2026ರ ಐಪಿಎಲ್ ಕಂಪ್ಲೀಟ್ ಚೇಂಜ್
ರಿವೇಂಜ್ ರೌಂಡ್ ನ ವಿಶೇಷವೇನು?

IPLಗೆ 2 ಸಲ ಶೆಡ್ಯೂಲ್ ಅನೌನ್ಸ್ ಏಕೆ? – 2026ರ ಐಪಿಎಲ್ ಕಂಪ್ಲೀಟ್ ಚೇಂಜ್ರಿವೇಂಜ್ ರೌಂಡ್ ನ ವಿಶೇಷವೇನು?

ಟಿ-20 ವಿಶ್ವಕಪ್ ಹಬ್ಬ, ಅಬ್ಬರ ಎಲ್ಲವೂ ಮುಗೀತು. ಇನ್ನೇನಿದ್ರೂ ಐಪಿಎಲ್ ಫೀವರ್ ಸ್ಟಾರ್ಟ್ ಆಗೋ ಟೈಮ್. 2026ರ ಇಂಡಿಯನ್ ಪ್ರೀಮಿಯರ್​ ಲೀಗ್ ಶೆಡ್ಯೂಲ್​ ಅನೌನ್ಸ್​ಗೆ ಕೌಂಟ್​ಡೌನ್ ಶುರುವಾಗಿದೆ. ಈ ಸಲ ಟೂರ್ನಿ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಹಾಗೇ ಟ್ವಿಸ್ಟ್ ಇರುತ್ತೆ. ಐಪಿಎಲ್.. ಜಗತ್ತಿನ ಶ್ರೀಮಂತ ಲೀಗ್. ಬರೋಬ್ಬರಿ 2 ತಿಂಗಳು ಬರೀ ಭಾರತೀಯರು ಅಷ್ಟೇ ಅಲ್ದೇ ಇಡೀ ಕ್ರಿಕೆಟ್ ಜಗತ್ತಿನ ಫ್ಯಾನ್ಸ್ ಎಲ್ರೂ ಎಂಜಾಯ್ ಮಾಡೋ ಕ್ರಿಕೆಟ್ ಕಾರ್ನಿವಲ್. ಮಾರ್ಚ್ 28ರಿಂದ ಟೂರ್ನಿ ಆರಂಭವಾಗಲಿದ್ದು ಮೇ 31ರಂದು ಕ್ಲೋಸಿಂಗ್ ಸೆರೆಮನಿ ಮೂಲಕ 19ನೇ ಆವೃತ್ತಿಗೆ ಅದ್ಧೂರಿ ತೆರೆ ಬೀಳಲಿದೆ. ಹಾಗೆ ನೋಡಿದ್ರೆ ಟೂರ್ನಿ ಆರಂಭಕ್ಕೆ ಉಳಿದಿರೋದೇ ಇನ್ನೆರಡು ವಾರ. ಹೀಗಿದ್ರೂ ಶೆಡ್ಯೂಲ್ ಅನೌನ್ಸ್ ಆಗಿಲ್ಲ. ಯಾಕೆ ಅಂದ್ರೆ ಅದಕ್ಕೆ ಒಂದಷ್ಟು ರೀಸನ್ಸ್ ಇದೆ. ಈ ಬಗ್ಗೆ ಖುದ್ದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್‌ ಗ್ಯಾರಿ ಕಿರ್ಸ್ಟನ್  ಹೆಚ್‌ ಕೋಚ್ ಆಗಿ ಆಯ್ಕೆ

ಫಸ್ಟ್ ಆಫ್ ನಲ್ಲಿ 20 ದಿನಗಳ ಶೆಡ್ಯೂಲ್ ಮಾತ್ರ ರಿಲೀಸ್!

ಐಪಿಎಲ್ ಪಂದ್ಯಗಳ ಶೆಡ್ಯೂಲ್ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಗ್ ಅಪ್​ಡೇಟ್ ನೀಡಿದೆ. ಮಾರ್ಚ್ 12 ರೊಳಗೆ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಮೊದಲ 20 ದಿನಗಳ ವೇಳಾಪಟ್ಟಿ ರಿಲೀಸ್ ಮಾಡೋದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ. ಮೊದಲಿಗೆ ಮಾರ್ಚ್ 26 ರಿಂದ ಮೇ 30 ರವರೆಗೆ ಟೂರ್ನಿ ಆಯೋಜನೆಗೆ ಪ್ಲ್ಯಾನ್ ಮಾಡಿದ್ರು. ಆದ್ರೆ ಆ ನಂತರದಲ್ಲಿ ಡೇಟ್ ಬದಲಾವಣೆಯಾಗಿದ್ದು ಮಾರ್ಚ್ 28 ರಿಂದ ಮೇ 31 ರವರೆಗೆ ಫಿಕ್ಸ್ ಮಾಡಲಾಗಿದೆ. ಮಾರ್ಚ್ 12 ರೊಳಗೆ ಐಪಿಎಲ್ 2026 ವೇಳಾಪಟ್ಟಿಯನ್ನು ಘೋಷಿಸಲು ತೀರ್ಮಾನ ಮಾಡಿದ್ದೇವೆ. ಈ ಘೋಷಣೆಯಲ್ಲಿ ಮೊದಲ 20 ದಿನಗಳ ಐಪಿಎಲ್ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಿದ್ದೇವೆ ಎಂದು ಸೈಕಿಯಾ ಹೇಳಿದ್ದಾರೆ. ಅದಕ್ಕೆ ಕಾರಣ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಇರೋದ್ರಿಂದ ಯಾವುದೇ ರೀತಿಯ ಕ್ಲ್ಯಾಶ್ ಆಗದಂತೆ ತಡೆಯಲು ಬಿಸಿಸಿಐ ಈ ಪ್ಲ್ಯಾನ್ ಮಾಡಿದೆ. ಸೋ ಲೀಗ್​ನ ಉಳಿದ ಪಂದ್ಯಗಳನ್ನ ನಂತರದ ದಿನಗಳಲ್ಲಿ ರಿಲೀಸ್ ಮಾಡಲಾಗುತ್ತೆ.  ಮೂರು ರಾಜ್ಯಗಳ ಚುನಾವಣೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿದ್ದು, ಈ ವೇಳೆ ಐಪಿಎಲ್ ಪಂದ್ಯಗಳೂ ಇರುತ್ವೆ. ಪಶ್ಚಿಮ ಬಂಗಾಳ ರಾಜ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹಾಗೇ ಈಡನ್ ಗಾರ್ಡನ್ಸ್‌ನ ತವರು ಮೈದಾನವಾಗಿದೆ.  ತಮಿಳುನಾಡು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಂದಿದ್ದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹೋಂ ಮ್ಯಾಚಸ್ ಆಗುತ್ತೆ. ಇನ್ನು ಅಸ್ಸಾಂನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಬರ್ಸಪರ ಕ್ರೀಡಾಂಗಣದಲ್ಲಿ ಕೆಲವು ಪಂದ್ಯಗಳನ್ನು ಆಯೋಜಿಸುತ್ತದೆ.

ಈ ಬಾರಿ 74 ಅಲ್ಲ 84 ಪಂದ್ಯಗಳನ್ನ ನಡೆಸಲು ತೀರ್ಮಾನ!

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳಿವೆ. ಕಳೆದ ಆವೃತ್ತಿವರೆಗೆ ಟೋಟಲ್ ಆಗಿ 74 ಪಂದ್ಯಗಳನ್ನ ಆಡಿಸಲಾಗ್ತಿತ್ತು. 2022 ರಲ್ಲಿ 10 ತಂಡಗಳ ಸ್ವರೂಪವನ್ನು ಪರಿಚಯಿಸಿದಾಗಿನಿಂದ, ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿನ ಸಮಯದ ನಿರ್ಬಂಧಗಳಿಂದಾಗಿ ಪಂದ್ಯಾವಳಿಯನ್ನು 74 ಪಂದ್ಯಗಳಿಗೆ ಸೀಮಿತಗೊಳಿಸಲಾಗಿತ್ತು. ಹಾಗೇ ಪ್ರತೀ ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನ ಆಡ್ತಿತ್ತು. ಇದ್ರಿಂದಾಗಿ ಎಲ್ಲಾ ತಂಡಗಳಿಗೆ ರಿವೇಂಜ್ ಮ್ಯಾಚ್ ಸಿಗ್ತಾ ಇರ್ಲಿಲ್ಲ. ಬಟ್ 2026ರ ಐಪಿಎಲ್​ನ ಬಿಗ್ ಅಪ್​ಡೇಟ್ ಅಂದ್ರೆ ಟೂರ್ನಿಯಲ್ಲಿ 84 ಪಂದ್ಯಗಳನ್ನ ಆಡಿಸಲಾಗುತ್ತೆ. ಹೆಚ್ಚುವರಿಯಾಗಿ 10 ಪಂದ್ಯಗಳು ಌಡ್ ಆಗುತ್ತೆ. 2026 ರ ಆವೃತ್ತಿಯಲ್ಲಿ 80 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಇದ್ರಿಂದಾಗಿ ಪ್ರತೀ ತಂಡಕ್ಕೂ ರಿವೇಂಜ್ ಮ್ಯಾಚ್ ಸಿಗುತ್ತೆ. ಅಂದ್ರೆ 10 ತಂಡಗಳು ‘ಡಬಲ್ ರೌಂಡ್-ರಾಬಿನ್’ ಸ್ವರೂಪದಲ್ಲಿ ಆಡಲಿವೆ. ಪ್ರತಿ ತಂಡವು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. ಒಮ್ಮೆ ತವರಿನಲ್ಲಿ, ಮತ್ತೊಮ್ಮೆ ಬೇರೆ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಚಿನ್ನಸ್ವಾಮಿಯಲ್ಲೇ ಉದ್ಘಾಟನಾ ಮತ್ತು ಫೈನಲ್ ಪಂದ್ಯ!

ಇನ್ನು ಟೂರ್ನಿಯ ಹಾಲಿ ಚಾಂಪಿಯನ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾಗಿರೋ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯೋದು ಕನ್ಫರ್ಮ್ ಆಗಿದೆ. ಹಾಗೇ ಫೈನಲ್ ಪಂದ್ಯವನ್ನೂ ಇದೇ ಮೈದಾನದಲ್ಲಿ ನಡೆಸೋ ಸಾಧ್ಯತೆಗಳಿವೆ. ಇನ್ನು ಆರ್​ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಐದು ಪಂದ್ಯಗಳನ್ನು ಆಡಲಿದ್ದು, ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಇನ್ನು ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಆಡೋದು ಕನ್ಫರ್ಮ್ ಇದ್ದು ಎದುರಾಳಿ ಯಾರು ಅನ್ನೋ ಬಗ್ಗೆ ಇನ್ನಷ್ಟೇ ಅಪ್​ಟೇಟ್ಸ್ ಬರ್ಬೇಕು. ಫೈನಲಿಸ್ಟ್​​ಗಳೇ ಮುಖಾಮುಖಿ ಆಗೋದ್ರಲ್ಲಿ ಬೆಂಗಳೂರು ವರ್ಸಸ್ ಪಂಜಾಬ್ ಕಣಕ್ಕಿಳಿಯಬಹುದು. ಒಟ್ನಲ್ಲಿ ಐಪಿಎಲ್​ ಅಬ್ಬರಕ್ಕೆ ವೇದಿಕೆ ಸಿದ್ಧವಾಗ್ತಿದೆ. ಆಲ್ರೆಡಿ ಫ್ರಾಂಚೈಸಿಗಳಲ್ಲಿ ಪ್ರಾಕ್ಟಿಸ್ ಕೂಡ ಆರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಶೆಡ್ಯೂಲ್ ಅನೌನ್ಸ್ ಆಗಲಿದ್ದು ಐಪಿಎಲ್​ ಅನ್ನೋ ರಂಗುರಂಗಿನ ಹಬ್ಬಕ್ಕೆ ರಣಕಹಳೆಯೂ ಮೊಳಗಲಿದೆ.

Shantha Kumari

Leave a Reply

Your email address will not be published. Required fields are marked *