5 ವಾರ.. 15 ಮೈದಾನ.. 69 ಪ್ಲೇಯರ್ಸ್ – ಐವರು ನಾಯಕರಿಗೆ BCCI ಅಗ್ನಿಪರೀಕ್ಷೆ
ಬೆಂಚ್ ಸ್ಟ್ರೆಂಥ್.. ಯಾವ ಟೀಂ ಸ್ಟ್ರಾಂಗ್?

ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಥ್ ಅದೆಷ್ಟರ ಮಟ್ಟಿಗಿದೆ ಅನ್ನೋದನ್ನ ಇಡೀ ಜಗತ್ತಿಗೇ ತೋರಿಸೋಕೆ ಬಿಸಿಸಿಐ ಸಿದ್ಧವಾಗಿದೆ. ಒಂದೇ ಟೈಮಲ್ಲಿ ODI, T20I, ಏಷ್ಯನ್ ಗೇಮ್ಸ್, India A ಮತ್ತು ದೇಶೀಯ First-Class ಕ್ರಿಕೆಟ್ ಹೀಗೆ ಎಲ್ಲವನ್ನೂ ನಿಭಾಯಿಸಬೇಕಿದೆ. ಭಾರತ ಕ್ರಿಕೆಟ್ಗೆ ಫುಲ್ ಪ್ಯಾಕ್ಡ್ ಶೆಡ್ಯೂಲ್ ಇದೆ.
ಇದನ್ನೂ ಓದಿ : 3ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಸರಣಿ ಕ್ಲೀನ್ಸ್ವೀಪ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ಕಂಪ್ಲೀಟ್ ಬ್ಯುಸಿ. ಇದಕ್ಕೆ ಕಾರಣವೇ ಮುಂದಿನ ಐದು ವಾರಗಳ ಕಾಲ ಇರುವ ನಾನ್ಸ್ಟಾಪ್ ಮ್ಯಾಚಸ್. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 17ವರೆಗೆ ಐದು ಬೇರೆ ಬೇರೆ ತಂಡಗಳು ಅಖಾಡಕ್ಕಿಳಿಲಿದ್ದಾರೆ. ಒಟ್ಟಾರೆ 69 ಭಾರತೀಯ ಪುರುಷ ಕ್ರಿಕೆಟಿಗರು 15 ಸ್ಥಳಗಳಲ್ಲಿ ವಿವಿಧ ತಂಡಗಳಾಗಿ ಕಣಕ್ಕಿಳಿಯಲಿದ್ದಾರೆ. ಒಂದೇ ಸಮಯದಲ್ಲಿ ಟೂರ್ನಮೆಂಟ್ಸ್ ಹಾಗೇ ಸರಣಿಗಳು ನಡೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಿದ್ರೂ ಬಿಸಿಸಿಐ ಎಲ್ಲವನ್ನೂ ಪರ್ಫೆಕ್ಸ್ ಆಗಿ ನಿಭಾಯಿಸಲು ಆಟಗಾರರನ್ನ ಡಿವೈಡ್ ಮಾಡಿ ಟೀಂ ರೆಡಿ ಮಾಡಿದೆ. ಐದು ವಾರ, ಐದು ತಂಡ ಹಾಗೂ 69 ಆಟಗಾರರು.
ನಂಬರ್-1 : ಏಕದಿನ ಸರಣಿ!
ವಿಂಡೀಸ್ ವಿರುದ್ಧ ಏಕದಿನ ಸರಣಿ.. ನಾಯಕ- ಶುಭ್ಮನ್ ಗಿಲ್
ತವರಿನಲ್ಲಿ ಸೆ. 27 ರಿಂದ ಅ. 3ರವರೆಗೆ ನಡೆಯಲಿರುವ 3 ಪಂದ್ಯಗಳ ಸರಣಿ
ರೋಹಿತ್, ಕೊಹ್ಲಿ, ರಾಹುಲ್, ಜಡೇಜಾ, ಸಿರಾಜ್ ಸೇರಿ ಪ್ರಮುಖರು ಭಾಗಿ
ನಂಬರ್-2 : ಟಿ-20ಐ ಸರಣಿ
ವಿಂಡೀಸ್ ವಿರುದ್ಧ ಟಿ-20ಐ ಸರಣಿ.. ನಾಯಕ-ಶ್ರೇಯಸ್ ಅಯ್ಯರ್
ತವರಿನಲ್ಲಿ ಅ. 6 ರಿಂದ ಅ.17 ರವರೆಗೆ ನಡೆಯಲಿರುವ 5 ಪಂದ್ಯಗಳ ಸರಣಿ
ಸಂಜು, ಕಿಶನ್, ಅಭಿಷೇಕ್, ಸೂರ್ಯವಂಶಿ, ತಿಲಕ್ ಸೇರಿ ಪ್ರಮುಖರು ಭಾಗಿ
ನಂಬರ್-3 : ಏಷ್ಯನ್ ಗೇಮ್ಸ್
ಜಪಾನ್ ನಲ್ಲಿ ಏಷ್ಯನ್ ಗೇಮ್ಸ್.. ನಾಯಕ – ಶ್ರೇಯಸ್ ಅಯ್ಯರ್
ಸೆ. 22 ರಂದು ಜಪಾನ್ ವಿರುದ್ಧ ಏಕೈಕ ಟಿ20, ಸೆ. 28 ರಿಂದ ಅಭಿಯಾನ
ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿರುವ ಟೀಂ ಇಂಡಿಯಾ
ಸಂಜು, ಕಿಶನ್, ಅಭಿಷೇಕ್, ಸೂರ್ಯವಂಶಿ, ತಿಲಕ್ ಸೇರಿ ಪ್ರಮುಖರು ಭಾಗಿ
ನಂಬರ್-4 : ಇರಾನಿ ಕಪ್
ಶ್ರೀನಗರದಲ್ಲಿ ಇರಾನಿ ಕಪ್.. ನಾಯಕ – ರಿಷಭ್ ಪಂತ್
ಅ.1 ರಿಂದ 5 ರವರೆಗೆ ನಡೆಯಲಿರುವ ಪ್ರತಿಷ್ಠಿತ ಇರಾನಿ ಕಪ್ ದೇಶಿ ಟೂರ್ನಿ
ರಣಜಿ ಚಾಂಪಿಯನ್ ಜಮ್ಮು ಕಾಶ್ಮೀರ ವಿರುದ್ಧ ರೆಸ್ಟ್ ಆಫ್ ಇಂಡಿಯಾ ಕಣಕ್ಕೆ
ವಿವಿಧ ರಾಜ್ಯಗಳ ಪ್ರಮುಖ ಆಟಗಾರರನ್ನು ಸೇರಿಸಿ ಆಯ್ಕೆ ಮಾಡಿರುವ ಬಿಸಿಸಿಐ
ಸರ್ಫರಾಜ್ ಖಾನ್, ಮುಕೇಶ್ ಕುಮಾರ್, ಆಕಾಶ್ ದೀಪ್ ರಂತಹ ಟೆಸ್ಟ್ ಸ್ಟಾರ್ಸ್
ನಂಬರ್-5 : ಎ ತಂಡಗಳ ಕದನ!
ಪುದುಚೇರಿಯಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ಭಾರತದ 2 ಸರಣಿಗಳು
4 ದಿನಗಳ ಟೆಸ್ಟ್ ಗೆ ಪಡಿಕ್ಕಲ್, ಏಕದಿನ ತಂಡಕ್ಕೆ ಗಾಯಕ್ವಾಡ್ ನಾಯಕ
ಸೆ. 22 ರಿಂದ ಅ.11 ರವರೆಗೆ ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಪಂದ್ಯಗಳು
ಹಾರ್ದಿಕ್, ಪಾಟಿದಾರ್, ಪಡಿಕ್ಕಲ್, ಸುದರ್ಶನ್ ಸೇರಿ ಹಲವರು ಭಾಗಿ
ಹೀಗೆ ಮುಂದಿನ 5 ವಾರಗಳ ಕಾಲ ಕಂಪ್ಲೀಟ್ ಬ್ಯುಸಿ ಶೆಡ್ಯೂಲ್ ಹೊಂದಿದೆ. ಆರು ಮಾದರಿಯ ಪಂದ್ಯಗಳಿಗೆ ಐದು ತಂಡಗಳು ಐವರ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿಯಲಿವೆ. ಅಂದ್ರೆ ಇಲ್ಲಿ ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಐ ಸರಣಿಗೆ ಒಂದೇ ಟೀಂ ಇದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲೇ ಎರಡೂ ಕಡೆ ತಂಡ ಕಣಕ್ಕಿಳಿಯಲಿದೆ. ಒಟ್ನಲ್ಲಿ ಭಾರತದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟರ್ಸ್ ಇದ್ದು ಈಗ ಹಲವು ಮಾದರಿಯ ಪಂದ್ಯಗಳು ನಡೆಯುತ್ತಿರೋದ್ರಿಂದ ಅವಕಾಶಗಳು ಸಿಕ್ಕಿರೋದು ಖುಷಿಯ ವಿಚಾರವೇ.

ನೋಡಿರಿ

