ಜೀವಮಾನ ಸಾಧಕ ದ್ರಾವಿಡ್ – ಭಾರತಕ್ಕೆ ‘ದಿ ವಾಲ್’ ಆಗಿದ್ದೇಗೆ?
T-20Iನಿಂದ ಹೊರಬಿದ್ದ ಗಿಲ್ ಗೂ ಗಿಫ್ಟ್!

ಜೀವಮಾನ ಸಾಧಕ ದ್ರಾವಿಡ್ – ಭಾರತಕ್ಕೆ ‘ದಿ ವಾಲ್’ ಆಗಿದ್ದೇಗೆ?T-20Iನಿಂದ ಹೊರಬಿದ್ದ ಗಿಲ್ ಗೂ ಗಿಫ್ಟ್!

ರಾಹುಲ್ ದ್ರಾವಿಡ್. ಟೀಂ ಇಂಡಿಯಾದಲ್ಲಿ ದಿ ವಾಲ್ ಅಂತಾನೇ ಕರೆಸಿಕೊಂಡ ಲೆಜೆಂಡರಿ ಕ್ರಿಕೆಟರ್. ಆಟಗಾರನಾಗಿ, ಕ್ಯಾಪ್ಟನ್ ಆಗಿ ಕೊನೆಗೆ ಕೋಚ್ ಆಗಿಯೂ ಭಾರತದ ಕ್ರಿಕೆಟ್​ನಲ್ಲಿ ತಮ್ಮದೇ ಆದ ಮೈಲುಗಲ್ಲು ಬರೆದವರು. ಕೂಲ್ & ಕಾಮ್ ಆಗಿ, ಪ್ಲೇಯರ್ಸ್ ಜೊತೆ ಫ್ರೆಂಡ್ಲಿಯಾಗಿ ಇರೋ ಕನ್ನಡಿಗ ರಾಹುಲ್ ದ್ರಾವಿಡ್​ಗೆ ಈಗ ಬಿಸಿಸಿಐನ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ. ಌಂಡ್ ಶುಭ್​ಮನ್ ಗಿಲ್​ಗೂ ಲಾಟರಿ ಹೊಡೆದಿದೆ.

ಇದನ್ನೂ ಓದಿ : SRHಗೆ ಪಾಕ್ ಆಟಗಾರ ಎಂಟ್ರಿ- ಸನ್‌ರೈಸರ್ಸ್‌ ತಂಡ ಬಾಯ್ಕಟ್‌ಗೆ ಫ್ಯಾನ್ಸ್ ಆಗ್ರಹ

ಭಾರತದ ದಂತಕತೆಗಳ ಸಾಲಿನಲ್ಲಿ ನಿಲ್ಲೋ ಕನ್ನಡಿಗ ರಾಹುಲ್ ದ್ರಾವಿಡ್ ಅವ್ರಿಗೆ ಭಾರತೀಯ ಕ್ರಿಕೆಟ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಕ್ರಿಕೆಟ್ ಕ್ಷೇತ್ರಕ್ಕೆ ಅವ್ರು ನೀಡಿರೋ ಅಮೂಲ್ಯ ಸೇವೆಗಾಗಿ ಈ ಪ್ರಶಸ್ತಿ ಸಿಕ್ಕಿದೆ. ಮಾರ್ಚ್ 15ಕ್ಕೆ ಡೆಲ್ಲಿಯಲ್ಲಿ ನಡೆಯಲಿರೋ ಬಿಸಿಸಿಐನ ವಾರ್ಷಿಕ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ.

ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ದ್ರಾವಿಡ್!

ಟೆಸ್ಟ್ ಫಾರ್ಮೆಟ್ ಅಂತಾ ಬಂದಾಗ ದ್ರಾವಿಡ್ ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವೇ ಆಗಿದ್ರು. ಇವ್ರ ವಿಕೆಟ್ ತೆಗೆಯೋದೇ ಬೌಲರ್​ಗಳ ದೊಡ್ಡ ಸಾಹಸವಾಗಿರ್ತಿತ್ತು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಜೊತೆ ಬ್ಯಾಟಿಂಗ್​ ಶಕ್ತಿಯಾಗಿದ್ದ ದ್ರಾವಿಡ್ ಟೆಸ್ಟ್ ಕ್ರಿಕೆಟ್ ನಲ್ಲಿ ದಿ ವಾಲ್ ಅಂತಾನೇ ಕರೆಸಿಕೊಳ್ತಿದ್ರು. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ 13,288 ರನ್ ಗಳಿಸಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2012ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ದ್ರಾವಿಡ್ ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅವರ ಮಾರ್ಗದರ್ಶನದಲ್ಲಿ ಭಾರತ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಗಳಿಸಿತ್ತು. ನಂತರ ಹಿರಿಯ ತಂಡದ ಮುಖ್ಯ ತರಬೇತುದಾರರಾಗಿ 2023ರ ಏಕದಿನ ವಿಶ್ವಕಪ್ ಅಂತಿಮ ಪಂದ್ಯಕ್ಕೆ ಮುನ್ನಡೆಸಿದರು. ಅಲ್ಲದೆ 2024ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆಟಗಾರ, ಕ್ಯಾಪ್ಟನ್ ಹಾಗೇ ಕೋಚ್ ಆಗಿ ಅವ್ರ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಇನ್ನು ದ್ರಾವಿಡ್ ಜೊತೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಜೀವಮಾನ ಸಾಧನೆ ಪ್ರಶಸ್ತಿ ಸಿಕ್ಕಿದೆ. ಹಾಗೇ ಭಾರತ ತಂಡದ ಕ್ಯಾಪ್ಟನ್ ಗಿಲ್​ಗೂ ಬಂಪರ್ ಲಾಟರಿ ಹೊಡೆದಿದೆ.

ಶುಭ್ ಮನ್ ಗಿಲ್ ಗೂ ಒಲಿದ ವರ್ಷದ ಕ್ರಿಕೆಟಿಗ ಪ್ರಶಸ್ತಿ!

ಇನ್ನು 2025ರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ಏಕದಿನ ಮತ್ತು ಟೆಸ್ಟ್ ತಂಡದ ಕ್ಯಾಪ್ಟನ್ ಶುಭ್​ಮನ್ ಗಿಲ್ ಸೆಲೆಕ್ಟ್ ಆಗಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಸದ್ದು ಮಾಡದಿದ್ರೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಶೈನ್ ಆಗಿದ್ದಾರೆ. 2025ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 983 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯೊಂದರಲ್ಲೇ 70ರ ಸರಾಸರಿಯಲ್ಲಿ 754 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಗಿಲ್, 490 ರನ್ ಗಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ 188 ರನ್ ಗಳಿಸಿ ಭಾರತ ಚಾಂಪಿಯನ್ ಆಗುವಲ್ಲಿ ಇವ್ರೂ ಕಾರಣರಾಗಿದ್ರು. ಇನ್ನು 2025ರಲ್ಲಿ ಎಲ್ಲಾ ಮಾದರಿಗಳಿಂದ ಗಿಲ್, 49ರ ಸರಾಸರಿಯಲ್ಲಿ 1,764 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.   ಮಾರ್ಚ್ 15ಕ್ಕೆ ನಡೆಯಲಿರೋ ಸಮಾರಂಭದಲ್ಲಿ ಈ ಎಲ್ಲರನ್ನೂ ಸನ್ಮಾನಿಸಲಾಗುತ್ತೆ. ಈ ಇವೆಂಟ್​ನಲ್ಲಿ ಟಿ-20 ವಿಶ್ವಕಪ್ ಚಾಂಪಿಯನ್ ತಂಡವನ್ನು ಗೌರವಿಸಲಿದೆ.

Shantha Kumari

Leave a Reply

Your email address will not be published. Required fields are marked *