T-20I ತಂಡಕ್ಕೆ ಸೂರ್ಯ ವಾಪಸ್ – BCCIನಿಂದಲೇ ಸಿಕ್ಕಿದೆ ಗ್ರೀನ್ ಸಿಗ್ನಲ್?
ಬಾಗಿಲು ಓಪನ್ ಗೆ ಕಂಡೀಷನ್ಸ್ ಅಪ್ಲೈ!

ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಒಂದೇ ಒಂದು ಸರಣಿ ಸೋಲದ ಭಾರತ ಈಗ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ಮೇಲೆ ಸರಣಿ ಗೆಲ್ಲೋದಿರ್ಲಿ ಒಂದೇ ಒಂದು ಪಂದ್ಯನೂ ಗೆಲ್ಲೋಕಾಗಿಲ್ಲ. ಅದೂ ಕೂಡ ಐತಿಹಾಸಿಕ ಸೋಲುಗಳು. ಸೋ ಟೀಂ ಮತ್ತೆ ಟ್ರ್ಯಾಕ್ಗೆ ಬರ್ಬೇಕು ಅಂದ್ರೆ ಈಗಲೇ ಅಲರ್ಟ್ ಆಗ್ಬೇಕಿದೆ. ಈ ಬಗ್ಗೆ ಬಿಸಿಸಿಐ ಮಟ್ಟದಲ್ಲೂ ಚರ್ಚೆಗಳಾಗ್ತಿವೆ. ಇದೀಗ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ಗೆ ಮತ್ತೆ ತಂಡದ ಬಾಗಿಲು ಓಪನ್ ಆಗೋ ಚಾನ್ಸಸ್ ಇದೆ. ಬಟ್ ಕಂಡೀಷನ್ ಅಪ್ಲೈ.
ಇದನ್ನೂ ಓದಿ : RO-KO ಫೈಯರ್.. ಬುಮ್ರಾ ಪವರ್ – ENGನಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು
ಟಿ-20ಐ ಫಾರ್ಮೆಟ್ನಲ್ಲಿ ಟೀಂ ಇಂಡಿಯಾವನ್ನ ಕಳೆದ ಎರಡೂವರೆ ವರ್ಷಗಳಿಂದ ಯಾರೂ ಟಚ್ ಮಾಡೋಕೂ ಆಗಿರಲಿಲ್ಲ. ಸೂರ್ಯಕುಮಾರ್ ನಾಯಕತ್ವದಲ್ಲಿ ಎಕ್ಟ್ರಾರ್ಡಿನರಿ ಜರ್ನಿ ಇದೆ. 2026ರ ಟಿ-20 ವಿಶ್ವಕಪ್ ಚಾಂಪಿಯನ್ಸ್. ಹೀಗಿದ್ರು ಸೂರ್ಯನ ಇಂಡಿವಿಶ್ಯುಯಲ್ ಪರ್ಫಾಮೆನ್ಸ್ ಚೆನ್ನಾಗಿಲ್ಲ ಅಂತಾ ಬಿಸಿಸಿಐ ಸೂರ್ಯನನ್ನ ತಂಡದಿಂದಲೇ ಹೊರಗಿಟ್ಟು ಶ್ರೇಯಸ್ ಅಯ್ಯರ್ ಗೆ ನಾಯಕತ್ವ ನೀಡಿದೆ. ಆದ್ರೆ ಶ್ರೇಯಸ್ ನಾಯಕರಾದ ಮೇಲೆ ತಂಡ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಌಂಡ್ ಟಿ-20ಐ ರ್ಯಾಂಕಿಂಗ್ನಲ್ಲೂ ಜಾರಿದೆ. ಹೀಗಾಗಿ ಸೂರ್ಯನಿಗೆ ಮತ್ತೊಂದು ಚಾನ್ಸ್ ಕೊಡೋ ಪ್ಲ್ಯಾನ್ ಕೂಡ ನಡೀತಿದೆ.
ಡೊಮೆಸ್ಟಿಕ್ ನಲ್ಲಿ ಅಬ್ಬರಿಸಿದ್ರೆ ಸೂರ್ಯನಿಗೆ ಮತ್ತೆ ಟಿ-20ಐ ಚಾನ್ಸ್?
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋತಿರೋ ಭಾರತ ನೆಕ್ಸ್ಟ್ ಇದೇ ತಿಂಗಳ ಎಂಡಲ್ಲಿ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಟಿ-20ಐ ಸರಣಿ ಆಡಲಿದೆ. ಒಂದು ವೇಳೆ ಇಲ್ಲಿಯೂ ನಿರೀಕ್ಷಿತ ಪ್ರದರ್ಶನ ಬಾರದೆ ತಂಡ ಸೋಲ್ತು ಅಂದ್ರೆ ಆಗ ಬಿಸಿಸಿಐ ಒನ್ಸ್ ಅಗೇನ್ ಸೂರ್ಯಕುಮಾರ್ ಯಾದವ್ ಕಡೆಯೇ ನೋಡುವ ಸಾಧ್ಯತೆಗಳು ಜಾಸ್ತಿ ಇದೆ. ಬಟ್ ಬಿಸಿಸಿಐ ಇಲ್ಲಿ ಇನ್ನೊಂದು ಟ್ವಿಸ್ಟ್ ಇಟ್ಟಿದೆ. ಸೂರ್ಯನ ಪ್ರದರ್ಶನ ಚೆನ್ನಾಗಿಲ್ಲ ಅಂತಾನೇ ತಂಡದಿಂದ ಹೊರಗೆ ಇಟ್ಟಿರೋದು. ಆದ್ರೆ ಮತ್ತೆ ಮೈದಾನದಲ್ಲಿ ಬ್ಯಾಟಿಂಗ್ ಖದರ್ ತೋರಿಸಿದ್ರೆ ಎಂಟ್ರಿ ಟಿಕೆಟ್ ಕೊಡಬಹುದು. ಅಂದ್ರೆ ಡೊಮೆಸ್ಟಿಕ್ ಟೂರ್ನಿಗಳಲ್ಲಿ ರನ್ಸ್ ಗಳಿಸಿದ್ರೆ ಅವಕಾಶ ಸಿಗಬಹುದು ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳಿಂದಲೇ ಮಾಹಿತಿ ಹೊರಬಿದ್ದಿದೆ. ಅಂದ್ರೆ ಸೂರ್ಯನನ್ನ ಟಿ-20ಐನಿಂದ ಪರ್ಮನೆಂಟ್ ಆಗಿ ಹೊರಗೆ ಇಟ್ಟಿಲ್ಲ. ಅವಶ್ಯಕತೆ ಬಿದ್ರೆ ಆತನ ಪರ್ಫಾಮೆನ್ಸ್ ಚೆನ್ನಾಗಿದ್ರೆ ಮತ್ತೆ ಚಾನ್ಸ್ ಸಿಗಬಹುದು ಎಂದಿದ್ದಾರೆ. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೂರ್ಯನ ಬ್ಯಾಟ್ ಸದ್ದು ಮಾಡಿದ್ರೆ ಮತ್ತೊಮ್ಮೆ ಮೆನ್ ಇನ್ ಬ್ಲ್ಯೂ ಜೆರ್ಸಿ ಹಾಕುವ ಚಾನ್ಸಸ್ ಇದೆ. ಬಟ್ ಕ್ಯಾಪ್ಟನ್ ಆಗಿ ಅವಕಾಶ ಸಿಗೋದು ಕಷ್ಟ. ಈವನ್ ರವಿಚಂದ್ರನ್ ಅಶ್ವಿನ್ ಕೂಡ ಇದನ್ನೇ ಹೇಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚೆನ್ನಾಗಿ ಆಡಿದ್ರೆ ಖಂಡಿತ ತಂಡಕ್ಕೆ ಬರ್ತಾರೆ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಸೂರ್ಯನ ಬಗ್ಗೆಯೇ ಇಲ್ಲಿ ಚರ್ಚೆಯಾಗ್ತಿರೋದಕ್ಕೆ ಕಾರಣ ಟಿ-20ಐ ತಂಡದ ಹೀನಾಯ ಪ್ರದರ್ಶನ. ಪ್ರೆಸೆಂಟ್ ಸಿಚುಯೇಷನ್.
ಭಾರತಕ್ಕೆ ಸೂರ್ಯ ಕಂ ಬ್ಯಾಕ್!
ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ತಂಡದ ಪ್ರದರ್ಶನ ಕಳಪೆ
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಇತಿಹಾಸದಲ್ಲೇ ಮೊದಲ ಸೋಲು
ಹಲವು ಕೆಟ್ಟ ದಾಖಲೆಗಳನ್ನ ಬರೆದಿರುವ ಎರಡೂ ಸರಣಿಗಳ ಸೋಲುಗಳು
ತಂಡದಲ್ಲಿ ಬ್ಯಾಟಿಂಗ್, ಬೌಲಿಂಗ್ ನಲ್ಲೂ ಕಳಪೆಯಾಗಿರುವ ಪ್ಲೇಯರ್ಸ್
ಟಿ-20ಐ ಶ್ರೇಯಾಂಕದಲ್ಲಿ ನಂ.1 ಪಟ್ಟದಿಂದ ಜಾರಿರುವ ಭಾರತ
2022ರ ನವೆಂಬರ್ 1 ರಿಂದ ನಂ.1 ಸ್ಥಾನ.. 1,605 ದಿನಗಳ ಬಳಿಕ ಕುಸಿತ

ನೋಡಿರಿ

