ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ಕಣಕ್ಕಿಳಿಯುವುದನ್ನು ಇನ್ನೂ ಸಹ ಖಚಿತಪಡಿಸಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿಗೆ ಬಿಸಿಸಿಐ ತಿಳಿಸಿದೆ. ಜನವರಿ 27 ರೊಳಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಹೋಮ್ ಗ್ರೌಂಡ್ ಯಾವುದೆಂದು ತಿಳಿಸಬೇಕೆಂದು ಬಿಸಿಸಿಐ ಗಡುವು ವಿಧಿಸಿದೆ.
ಐಪಿಎಲ್ 2025ರ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಆರ್ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರ್ಘಟನೆಯ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ನಿಷೇಧಕ್ಕೊಳಪಡಿಸಲಾಗಿದೆ. ಇದೀಗ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಾಡಲು ಕರ್ನಾಟಕ ಸರ್ಕಾರ ಕೆಲ ಷರತ್ತುಗಳೊಂದಿಗೆ ಗ್ರೀನ್ ಸಿಗ್ನಲ್ ನೀಡಿದೆ.ಇದಾಗ್ಯೂ ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ಕಣಕ್ಕಿಳಿಯುವುದನ್ನು ಇನ್ನೂ ಸಹ ಖಚಿತಪಡಿಸಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿಗೆ ಬಿಸಿಸಿಐ ತಿಳಿಸಿದೆ. ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸುವುದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಹೋಮ್ ಗ್ರೌಂಡ್ ಕ್ರಿಕೆಟ್ ಮಂಡಳಿಗಳ ಎನ್ಒಸಿ ಪಡೆಯಬೇಕು.
ಇದನ್ನೂ ಓದಿ: ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೂ ಸಹಾಯಕ್ಕೆ ಬಾರದ ಜನ! – ಶ*ವದ ಪಕ್ಕ ಬಿದ್ದಿದ್ದ ಈರುಳ್ಳಿ ಹೊತ್ತೊಯ್ದ ಸ್ಥಳೀಯರು!
ಆದರೆ ಆರ್ಸಿಬಿ ಫ್ರಾಂಚೈಸಿಯು ಇನ್ನೂ ಸಹ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವುದನ್ನು ದೃಢಪಡಿಸಿಲ್ಲ. ಹೀಗಾಗಿ ಜನವರಿ 27 ರೊಳಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಹೋಮ್ ಗ್ರೌಂಡ್ ಯಾವುದೆಂದು ತಿಳಿಸಬೇಕೆಂದು ಬಿಸಿಸಿಐ ಗಡುವು ವಿಧಿಸಿದೆ. ಅಂದರೆ ಮುಂದಿನ ಮಂಗಳವಾರದೊಳಗೆ ಆರ್ಸಿಬಿ ತನ್ನ ಹೋಮ್ ಗ್ರೌಂಡ್ ಅನ್ನು ಖಚಿತಪಡಿಸಲೇಬೇಕು. ಈ ಹಿಂದೆ ಆರ್ಸಿಬಿ ಫ್ರಾಂಚೈಸಿಯು ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯವಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತನ್ನ ತವರು ಪಂದ್ಯಗಳನ್ನು ಆಡಲು ಚಿಂತಿಸಿದೆ ಎಂದು ವರದಿಯಾಗಿತ್ತು.