T20 ವಿಶ್ವಕಪ್‌ ಗೆದ್ದ ಭಾರತಕ್ಕೆ ಬಂಪರ್!‌ – ಟೀಮ್ ಇಂಡಿಯಾಗೆ 131 ಕೋಟಿ ರೂ. ಬಹುಮಾನ ಘೋಷಿಸಿದ BCCI!

T20 ವಿಶ್ವಕಪ್‌ ಗೆದ್ದ ಭಾರತಕ್ಕೆ ಬಂಪರ್!‌ – ಟೀಮ್ ಇಂಡಿಯಾಗೆ 131 ಕೋಟಿ ರೂ. ಬಹುಮಾನ ಘೋಷಿಸಿದ BCCI!

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಗೆದ್ದು ಬೀಗಿದೆ. ಇದೀಗ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ತಂಡಕ್ಕೆ 131 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನದೇ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ:‌ ವರ್ಗಾವಣೆಗಾಗಿ ಗಿಳಿ ಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿ! – ಅಯ್ಯೋ.. 194 ಗ್ರಾಂ ಚಿನ್ನಾಭರಣ, 1.3 ಕೆಜಿ ಬೆಳ್ಳಿ ಮಾಯ!

2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆದ್ದ ಬೆನ್ನಲ್ಲೇ  ಬಿಸಿಸಿಐ ತಂಡಕ್ಕೆ 131 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಟ್ರೋಫಿಯನ್ನು ಎತ್ತಿಹಿಡಿಯಿತು. ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಸತತ 2ನೇ ಬಾರಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಉಳಿಸಿಕೊಂಡ ಮೊದಲ ತಂಡವಾಯಿತು. ಈ ಗೆಲುವಿನೊಂದಿಗೆ, ಭಾರತವು ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಮೊದಲ ತಂಡವಾಯಿತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಐತಿಹಾಸಿಕ ಸಾಧನೆಗಾಗಿ ಮಂಡಳಿಯು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರನ್ನು ಮತ್ತೊಮ್ಮೆ ಅಭಿನಂದಿಸುತ್ತದೆ. ಭವಿಷ್ಯದಲ್ಲಿ ಅವರಿಗೆ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತಾರೆ ಎಂದು ಹೇಳಿದೆ.

ಅಂದ್ಹಾಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಬಾರ್ಬಡೋಸ್‌ನಲ್ಲಿ 2024ರ ಟಿ20 ವಿಶ್ವಕಪ್ ಗೆದ್ದಾಗ, ಮಂಡಳಿಯು 125 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತ್ತು. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಅಹಮದಾಬಾದ್‌ನಲ್ಲಿ ಇತಿಹಾಸ ಬರೆದು, ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ತಂಡವಾಗಿ ಮಾರ್ಪಟ್ಟಾಗ ಬಿಸಿಸಿಐ ಇನ್ನೂ ದೊಡ್ಡ ಬಹುಮಾನವನ್ನು ಘೋಷಿಸಿದೆ.

Shwetha M

Leave a Reply

Your email address will not be published. Required fields are marked *