ವೈಭವ್ ಸೂರ್ಯವಂಶಿಗೆ ಬಿಸಿಸಿಐ ವಿಶೇಷ ವಿನಾಯಿತಿ – ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಪೋಷಕರಿಗೂ ಅನುಮತಿ

ಭಾರತ ಟಿ20 ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಕಡೆಯಿಂದ ಗುಡ್‌ನ್ಯೂಸ್ ಸಿಕ್ಕಿದೆ. 15ರ ಹರೆಯದ ವೈಭವ್ ಸೂರ್ಯವಂಶಿ ಜೊತೆ ಪೋಷಕರು ಇರಲು ಬಿಸಿಸಿಐ ಅನುಮತಿ ನೀಡಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತರ ವೈಭವ್ ಸೂರ್ಯವಂಶಿಗೆ ಈ ವಿಶೇಷ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:RCBಯಲ್ಲಿ ರಜತ್ ವಿಜಯಯಾತ್ರೆ 2 ವರ್ಷ.. ಗೆದ್ದೇ ಇಲ್ಲ CSK, MI, KKR
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ವೈಭವ್‌ಗೆ ಬಿಸಿಸಿಐ ವಿಶೇಷ ವಿನಾಯಿತಿ ನೀಡಿದೆ. ಮಾನಸಿಕ ಸ್ಥಿರತೆ ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು, ಅವರ ಪೋಷಕರನ್ನು ಜೊತೆ ಕರೆದೊಯ್ಯಲು ಅನುಮತಿ ನೀಡಿದೆ. ಪೋಷಕರ ಖರ್ಚು ವೆಚ್ಚವನ್ನು ಬಿಸಿಸಿಐ ಭರಿಸಲಿದೆ. ಇದೇ ಮೊದಲ ಬಾರಿಗೆ ಭಾರತದ ಹಿರಿಯರ ತಂಡದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 15ನೇ ವರ್ಷಕ್ಕೆ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 16 ವರ್ಷಕ್ಕೆ ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಸಚಿನ್ ದಾಖಲೆಯನ್ನು ಮುರಿದಿರುವ ವೈಭವ್‌ಗೆ ಬಿಸಿಸಿಐ, ಸಚಿನ್ಗೆ ನೀಡಿದ್ದ ವಿಶೇಷ ವಿನಾಯಿತಿಯನ್ನು ವೈಭವ್ಗೂ ನೀಡಿದೆ.
ವೈಭವ್‌ಗೆ ವಿಶೇಷ ವಿನಾಯಿತಿ ಅತಿ ಕಿರಿಯ ವಯಸ್ಸಿಗೆ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್‌ಗೆ ಹಠಾತ್ ಜನಪ್ರಿಯತೆ, ಮಾಧ್ಯಮ ಗಮನ ಮತ್ತು ಅಪಾರ ಒತ್ತಡವನ್ನು ನಿಭಾಯಿಸುವುದು ಮಾನಸಿಕವಾಗಿ ಸವಾಲಿನ ಸಂಗತಿಯಾಗಿದೆ. ಹೀಗಾಗಿ ಇದನ್ನು ಮುಂಗಡವಾಗಿಯೇ ಯೋಚಿಸಿರುವ ಬಿಸಿಸಿಐ, ವೈಭವ್ ತಮ್ಮ ಪೋಷಕರನ್ನು ತಮ್ಮ ಜೊತೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ಗೆ ಕರೆದುಕೊಂಡು ಹೋಗಲು ಅನುಮತಿ ನೀಡಿದೆ. ಈ ವಿದೇಶ ಪ್ರವಾಸದಲ್ಲಿ ಅವರ ಪೋಷಕರ ಉಪಸ್ಥಿತಿಯು ವೈಭವ್‌ಗೆ ಮನೆಯ ವಾತಾವರಣವನ್ನು ಸೃಷ್ಟಿಸುವುದಲ್ಲದೆ, ಒಂಟಿತನ ಕಾಡುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಲ್ಲದೆ ವಿದೇಶದಲ್ಲಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಕೂಡ ಮಾಡುತ್ತದೆ. ವಾಸ್ತವವಾಗಿ ಮೇಲೆ ಹೇಳಿದಂತೆ ಸಚಿನ್ ತೆಂಡೂಲ್ಕರ್ ಅವರಿಗೂ ಬಿಸಿಸಿಐ ಈ ರೀತಿಯ ವ್ಯವಸ್ಥೆ ಮಾಡಿತ್ತು. 1989 ರಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ವಿದೇಶಿ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದಾಗ, ಸಚಿನ್ ಅವರೊಂದಿಗೆ ಹಿರಿಯ ಸಹೋದರ ಅಜಿತ್ ಕೂಡ ಅವರೊಂದಿಗೆ ಇದ್ದರು. ಆ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೇವಲ 16 ವರ್ಷ ವಯಸ್ಸಿನವರಾಗಿದ್ದರು. ಈ ಬಗ್ಗೆ ಸ್ಪೋರ್ಟ್ಸ್‌ಸ್ಟಾರ್ ಜೊತೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ಅವನು ಇನ್ನೂ ಮಗು, ಆದ್ದರಿಂದ ಅವನ ಹೆತ್ತವರು ಅವನೊಂದಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅವಕಾಶ ನೀಡಲು ನಾವು ನಿರ್ಧರಿಸಿದ್ದೇವೆ. ಇದರಿಂದ ಅವರು ಅವನೊಂದಿಗೆ ಇರಲು ಮತ್ತು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಬಹುದು. ಮಂಡಳಿಯು ಅವರ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ’ ಎಂದಿದ್ದಾರೆ.

ನೋಡಿರಿ

