ಸೂರ್ಯವಂಶಿ DEBUT ಫೀವರ್ – ಐರ್ಲೆಂಡ್ ಬೇಟೆಗೆ ಯಂಗ್ ಸ್ಟರ್ಸ್ ರೆಡಿ
T-20Iನಲ್ಲಿ ಇನ್ಮುಂದೆ ಹೊಸ ಜಮಾನ!

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ಟಿ-20ಐ ತಂಡದ ಹೊಸ ಯುಗಾರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಇವತ್ತು ಭಾರತ ಮತ್ತು ಐರ್ಲೆಂಡ್ ತಂಡಗಳು ಮುಖಾಮುಖಿ ಆಗಲಿದೆ. ಟಿ-20 ವಿಶ್ವಕಪ್ ಬಳಿಕ ಮೊದಲ ಬಾರಿಗೆ ಭಾರತ ಟಿ-20ಐ ಮ್ಯಾಚ್ ಆಡಲಿದ್ದು ಈ ಪಂದ್ಯ ಹಲವು ಕಾರಣಗಳಿಂದ ವಿಶೇಷವಾಗಲಿದೆ. ಹಾಗೇ ಮೂವರು ಯಂಗ್ಸ್ಟರ್ಸ್ ಭಾರತದ ಪರ ಡೆಬ್ಯೂ ಮಾಡೋ ಐತಿಹಾಸಿಕ ಗಳಿಗೆಗೂ ಸಾಕ್ಷಿಯಾಗಲಿದೆ.
ಇದನ್ನೂ ಓದಿ : ಸೂರ್ಯವಂಶಿ ವಯಸ್ಸು 15 ಅಲ್ಲ 22 – RO-KO ಅಲ್ಲ KL ಟಫ್ ಬ್ಯಾಟ್ಸಮನ್
ಐರ್ಲೆಂಡ್ನ ಬೆಲ್‌ಫಾಸ್ಟ್ ಮೈದಾನದಲ್ಲಿ ಇವತ್ತು ಭಾರತ ಮತ್ತು ಐರ್ಲೆಂಡ್ ತಂಡಗಳು ಸರಣಿಯ ಮೊದಲ ಟಿ-20ಐ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಈ ಸರಣಿಯಲ್ಲಿ ಮೂವರು ಆಟಗಾರರು ಭಾರತದ ಪರವಾಗಿ T20I ಡೆಬ್ಯೂ ಮಾಡುವ ಸಾಧ್ಯತೆ ಇದೆ.
ಕನಸು ನನಸಾಗುವ ಸುದಿನ!
- 15 ವರ್ಷದ ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿ ಡೆಬ್ಯೂ ನಿರೀಕ್ಷೆ
- ಫಾಸ್ಟ್ ಬೌಲರ್ ಪ್ರಿನ್ಸ್ ಯಾದವ್ ಬೌಲಿಂಗ್ ಬೇಟೆಗೆ ಅಖಾಡಕ್ಕಿಳಿಯೋ ಚಾನ್ಸ್
- 23 ವರ್ಷದ ಆಲ್ ರೌಂಡರ್ ಸೂರ್ಯಾನ್ಶ್ ಶೆಡ್ಗೆಗೆ ಒಲಿಯುತ್ತಾ ಭಾರತದ ಕ್ಯಾಪ್?
ಇನ್ನು ಪಂದ್ಯಕ್ಕೆ ಕೆಲವೇ ಕೆಲ ಗಂಟೆಗಳು ಇರುವಾಗ ಪಂದ್ಯ ಆರಂಭದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಮಹಿಳಾ T20 ವಿಶ್ವಕಪ್ ಕಾರಣದಿಂದ ಪಂದ್ಯಗಳ ಆರಂಭಿಕ ಸಮಯವನ್ನು ಸಂಜೆ 7 ರಿಂದ 6 ಗಂಟೆಗೆ ಬದಲಾಯಿಸಲಾಗಿದೆ. ಜೂನ್ 26 ಮತ್ತು 28 ರಂದು ಪಂದ್ಯಗಳು ನಡೆಯಲಿದ್ದು ಪಂದ್ಯಗಳು 6 ಗಂಟೆಗೆ ಸ್ಟಾರ್ಟ್ ಆಗಲಿವೆ. ಮೊದಲ 7ಗಂಟೆಗೆ ಆರಂಭ ಅಂದಿದ್ರೂ ಕೂಡ ಟಿ-20 ವಿಶ್ವಕಪ್ ಪಂದ್ಯಗಳ ಜೊತೆ ಕ್ಲಾಶ್ ಆಗೋದ್ರಿಂದ ಸಮಯ ಬದಲಾವಣೆ ಮಾಡಲಾಗಿದೆ. ಒಟ್ನಲ್ಲಿ ಭಾರತ-ಐರ್ಲೆಂಡ್ ಸರಣಿಗಾಗಿ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ದಾರೆ. ಟಿ-20ಐ ಪವರ್ ಶೋಗಾಗಿ ಫುಲ್ ಎಕ್ಸೈಟ್ ಆಗಿದ್ದಾರೆ.

ನೋಡಿರಿ

