ಕೊಹ್ಲಿ ನಿವೃತ್ತಿ ಕೊಡಿಸಿದ್ದೇ ಗಂಭೀರ್? – ಡಬಲ್ ಗೇಮ್ ಆಡಿತಾ BCCI?
ಯಂಗ್ ಸ್ಟರ್ಸ್ ಗಾಗಿ ಲೆಜೆಂಡರ್ಸ್ OUT?

ಕೊಹ್ಲಿ ನಿವೃತ್ತಿ ಕೊಡಿಸಿದ್ದೇ ಗಂಭೀರ್? – ಡಬಲ್ ಗೇಮ್ ಆಡಿತಾ BCCI?ಯಂಗ್ ಸ್ಟರ್ಸ್ ಗಾಗಿ ಲೆಜೆಂಡರ್ಸ್ OUT?

ವಿರಾಟ್ ಕೊಹ್ಲಿಯವ್ರ ಟೆಸ್ಟ್ ಕ್ರಿಕೆಟ್ ವಿದಾಯಕ್ಕೆ ಲೆಜೆಂಡರಿ ಕ್ರಿಕೆಟರ್ಸ್, ಎಕ್ಸ್​ಪರ್ಟ್ಸ್, ಮಾಜಿ ಪ್ಲೇಯರ್ಸ್ ಸೇರಿದಂತೆ ವಿಶ್ವಕ್ರಿಕೆಟ್ಟೇ ಬಿಗ್ ಶಾಕ್​ನಲ್ಲಿದ್ದಾರೆ. ಯಾರೂ ಕೂಡ ಇಷ್ಟು ಬೇಗ ವಿರಾಟ್ ವೈಟ್ ಜೆರ್ಸಿ ಪ್ರಯಾಣ ಮುಗಿಯುತ್ತೆ ಅಂತಾ ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ವಿಶ್ವಕ್ರಿಕೆಟ್​ನ ಮೂರೂ ಮಾದರಿಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ವಿರಾಟ್ ಇಂದಿಗೂ ಮೈದಾನದಲ್ಲಿ ಓಡೋ ಕುದುರೆಯೇ. ಯುವಕರೂ ಕೂಡ ಅವ್ರ ಸರಿ ಸಮಾನಕ್ಕೆ ಓಡಲು ನಾಚುತ್ತಿದ್ರು. ಅಂಥಾ ಫಿಟ್​ನೆಸ್ ಅವ್ರದ್ದು. ಆದ್ರೆ ಬಿಸಿಸಿಐಗೆ ಓಡೋ ಕುದುರೆಗಿಂತ ವಯಸ್ಸಿನ ಕುದುರೆಯೇ ಹೆಚ್ಚಾದಂತಿದೆ. ಸಲ್ಲದ ನೆಪವೊಡ್ಡಿ ಒತ್ತಾಯಪೂರ್ವಕವಾಗಿ ನಿವೃತ್ತಿ ಕೊಡಿಸಿರೋ ಗಂಭೀರ ಆರೋಪ ಕೇಳಿ ಬರ್ತಿದೆ.

ಇದನ್ನೂ ಓದಿ : RCB ಪಂದ್ಯಗಳಿಗಿಲ್ಲ ಹೇಜಲ್ ವುಡ್? – ಪ್ಲೇಆಫ್ಸ್ ಹಂತದಲ್ಲೇ ತವರಿಗೆ ವಾಪಸ್

ಬೇಕಂತಲೇ ನಿವೃತ್ತಿ ಕೊಡಿಸಿದ್ದಾ?

ಟಿ-20ಗೆ ವಿದಾಯ ಹೇಳಿ ವರ್ಷದೊಳಗೆ ಟೆಸ್ಟ್ ಫಾರ್ಮೆಟ್​ ವಿದಾಯ

ಕಳೆದ ಏಪ್ರಿಲ್​ನಲ್ಲಿ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಸರಣಿಗೆ ಸಿದ್ಧತೆ

ಕೊಹ್ಲಿ ಕೂಡ ತಮ್ಮ ಟೆಸ್ಟ್ ಕೆರಿಯರ್ ಅಂತ್ಯಗೊಳಿಸೋ ಯೋಚನೆ ಇರ್ಲಿಲ್ಲ

ವಿದಾಯದ ಪಂದ್ಯವಿಲ್ಲದೇ ನಿವೃತ್ತಿ ಘೋಷಿಸಿರುವುದೇ ದೊಡ್ಡ ಆಶ್ವರ್ಯ

ಬೀಳ್ಕೊಡುಗೆ ಪಂದ್ಯ, ಗೌರವಯುತವಾಗಿ ಬೀಳ್ಕೊಡುಗೆ ಏರ್ಪಾಡು ಇಲ್ಲ

ಕೊಹ್ಲಿಗೆ ನಿವೃತ್ತಿ ಘೋಷಿಸುವಂತೆ ಬಿಸಿಸಿಐ ಮೊದಲೇ ಸೂಚನೆ ನೀಡಿತ್ತು

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೈ ಬಿಡಲು ಬಿಸಿಸಿಐ ನಿರ್ಧಾರ

2027ರ ವಿಶ್ವ ಟೆಸ್ಟ್ ಚಾಂಪಿಯನ್ ​ಶಿಪ್ ಫೈನಲ್ ಕೇಂದ್ರೀಕರಿಸಿ ಹೊಸ ತಂಡ

ನಿವೃತ್ತಿಗೆ ಕೋಚ್ ಗೌತಮ್ ಗಂಭೀರ್ ಕಾರಣರಾದ್ರಾ ಅನ್ನೋ ಪ್ರಶ್ನೆಗಳೂ

ಗಂಭೀರ್ ಮೊದ್ಲಿಂದಲೂ ಹೊಸ ಮುಖಗಳಿಗೆ ಪ್ರಾಧಾನ್ಯ ನೀಡಬೇಕೆಂದು ಪಟ್ಟು

ಕೋಚ್ ಆದ್ಮೇಲೆ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಕೆಟ್ಟ ಪ್ರದರ್ಶನ

ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ನಲ್ಲಿ ಸೋಲು

ಗಂಭೀರ್ ಮಾತಿಗೆ ಮಣೆ ಹಾಕಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್

ಈ ಜಮಾನ ಕಂಡಂತಹ ಬೆಸ್ಟ್ ಕ್ರಿಕೆಟರ್ ವಿರಾಟ್ ಕೊಹ್ಲಿ. ಬರೀ ಭಾರತದ ಪಾಲಿಗೆ ಮಾತ್ರ ಅಲ್ಲ ಇಡೀ ಜಗತ್ತಿಗೇ. ಕ್ರಿಕೆಟ್​ನೇ ಕಾಣದ ದೇಶಗಳಲ್ಲೂ ಕೊಹ್ಲಿಯೇ ಕಿಂಗ್. ಸಚಿನ್ ಹೋದ್ಮೇಲೆ ಭಾರತದಲ್ಲಿ ಕ್ರಿಕೆಟ್​ ಕ್ರೇಜ್ ಹೆಚ್ಚಿಸಿದ್ದೇ ವಿರಾಟ್ ಕೊಹ್ಲಿ. ಭಾರತದಲ್ಲಿ ಮತ್ತೊಬ್ಬ ಸಚಿನ್ ಆಗದೆಯೇ ಕೊಹ್ಲಿ ಯುಗವನ್ನೇ ಸೃಷ್ಟಿಸಿದ್ದು ತಮಾಷೆಯ ಮಾತಲ್ಲ. ಸಣ್ಣ ಮಕ್ಕಳಿಂದ ಹಿಡ್ದು ಮುದುಕರವರೆಗೂ ವಿರಾಟ್​ ಆಟಕ್ಕೆ ಮನಸೋಲದವ್ರೇ ಇಲ್ಲ. ಆದ್ರೆ 14 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್​ನಲ್ಲಿ ರಾಜನಾಗಿ ಮೆರೆದ ವಿರಾಟ್ ಟೆಸ್ಟ್ ಕ್ರಿಕೆಟ್ ಯುಗಾಂತ್ಯವಾಗಿದೆ. ಇನ್ನು ಕಿಂಗ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಏಕದಿನ ಸರಣಿ ಹಾಗೂ ಐಪಿಎಲ್​ನಲ್ಲಿ ಮಾತ್ರ ಸಾಧ್ಯ. ಆದ್ರೆ ಅದೂ ಕೂಡ ಎರಡ್ಮೂರು ವರ್ಷಗಳಷ್ಟೇ ಅನ್ನೋದೇ ಆಘಾತಕಾರಿ ವಿಚಾರ. ಸೋ ಇರುವಷ್ಟು ದಿನ ರೋಹಿತ್ ಹಾಗೂ ವಿರಾಟ್ ಆಟವನ್ನ ಕಣ್ತುಂಬಿಕೊಳ್ಳೋದು, ಎಂಜಾಯ್ ಮಾಡೋದಷ್ಟೇ ಅಭಿಮಾನಿಗಳಿಗೆ ಉಳಿದಿರೋ ದಾರಿ. ಇಲ್ಲಿ ಬಿಸಿಸಿಐ ಹಾಗೇ ಗಂಭೀರ್ ಉದ್ದೇಶಪೂರ್ವಕವಾಗಿಯೇ ವಿರಾಟ್​ರನ್ನ ನಿವೃತ್ತಿಯಾಗುವಂತೆ ಮಾಡಿದ್ರೆ ಇದು ಟೀಂ ಇಂಡಿಯಾಗೇ ದೊಡ್ಡ ಹೊಡೆತ. ಯಾಕಂದ್ರೆ ವಿರಾಟ್ ಮತ್ತು ರೋಹಿತ್ ಇಲ್ಲದ ಟೀಂ ಪಂದ್ಯಗಳನ್ನ ಗೆದ್ರೂ ಅಭಿಮಾನಿಗಳ ಹೃದಯ ಗೆಲ್ಲೋದು ಅಷ್ಟು ಸುಲಭವಿಲ್ಲ.

Shantha Kumari

Leave a Reply

Your email address will not be published. Required fields are marked *