ಭಾರತಕ್ಕಿಲ್ಲ 5 STAR ಫೆಸಿಲಿಟಿ – ನಗೋಯಾದಲ್ಲೇ ಇರಬೇಕು ಪ್ಲೇಯರ್ಸ್
ಏಷ್ಯನ್ ಗೇಮ್ಸ್ VALUE ಗೊತ್ತಾಯ್ತಾ?

ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮೆನ್ಸ್ ಌಂಡ್ ವುಮೆನ್ಸ್ ಎರಡೂ ವಿಭಾಗಗಳಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಪುರುಷರ ತಂಡ ಹಾಗೇ ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ಮಹಿಳಾ ತಂಡ ಪಾರ್ಟಿಸಿಪೇಟ್ ಮಾಡ್ತಿದೆ. ವಿಷ್ಯ ಏನಂದ್ರೆ ಈ ಕ್ರೀಡಾಕೂಟದಲ್ಲಿ ಭಾರತದ ಆಟಗಾರರಿಗೆ ಫೆಸಿಲಿಟಿ ವಿಚಾರದಲ್ಲೇ ದೊಡ್ಡ ವಿವಾದವಾಗಿತ್ತು. ಹೀಗಾಗಿ ಭಾರತ ಬಿ ಟೀಂ ಕಳಿಸಲಿದೆ ಅನ್ನೋ ಮಾತುಗಳೂ ಕೇಳಿ ಬಂದಿದ್ವು. ಆದ್ರೀಗ ಇದಕ್ಕೆಲ್ಲಾ ಬಿಸಿಸಿಐ ಕ್ಲಾರಿಟಿ ನೀಡಿದೆ.
ಇದನ್ನೂ ಓದಿ : BCCI ಹತ್ತಿರಕ್ಕೂ ಬಾಳಲ್ಲ PCB – ಟೀಂ ಇಂಡಿಯಾ 40 ಪಟ್ಟು ಗ್ರೇಟ್
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡೆಗಳಿಗಾಗಿ ಭಾರತದ ಒಟ್ಟು 248 ಕ್ರೀಡಾಪಟುಗಳ ನಿಯೋಗವು 19 ಕ್ರೀಡೆಗಳಲ್ಲಿ ದೇಶವನ್ನು ರೆಪ್ರಸೆಂಟ್ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಌಂಡ್ ಟಿ-20 ವಿಶ್ವಕಪ್ ಎರಡ್ರಲ್ಲೂ ಭಾರತ ಮೆನ್ಸ್ ತಂಡ ಹಾಲಿ ಚಾಂಪಿಯನ್ಸ್. ಆದ್ರೆ ಈ ಚಾಂಪಿಯನ್ ಟೀಮ್ಗೆ ಜಪಾನ್ನ ನಗೋಯಾದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಮೂಲಸೌಕರ್ಯಗಳೇ ಇಲ್ಲ ಅನ್ನೋ ಆರೋಪಗಳು ಕೇಳಿ ಬಂದಿದ್ವು. ಮೈದಾನದಲ್ಲಿ ಡ್ರೆಸ್ಸಿಂಗ್ ರೂಮ್ಗಳನ್ನು ಟೆಂಟ್ಗಳಲ್ಲಿ ಮಾಡಲಾಗಿದ್ದು, ಶೌಚಾಲಯಗಳು 500 ಮೀಟರ್ ದೂರದಲ್ಲಿವೆ. ಅಲ್ಲದೆ ಹೋಟೆಲ್ ರೂಮ್ಗಳು ಕೂಡ ತೀರಾ ಚಿಕ್ಕದಾಗಿವೆ. ಈ ಕಳಪೆ ಸೌಲಭ್ಯಗಳ ಕಾರಣದಿಂದಾಗಿ ಸ್ಟಾರ್ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಭಾರತದ ಎ ಕೆಟಗರಿ ಪ್ಲೇಯರ್ಸ್ ಬದಲು ಬಿ ಟೀಂ ಕಳಿಸಬಹುದು ಅನ್ನೋ ಚರ್ಚೆಗಳು ನಡೆದಿತ್ತು. ಈ ಬಗ್ಗೆ ಬಿಸಿಸಿಐ ಕೂಡ ಕ್ರೀಡಾಕೂಟದ ಆಯೋಜಕರಿಂದ ಸ್ಪಷ್ಟನೆ ಕೇಳಿತ್ತು. ಇದಕ್ಕೆ ಜಪಾನ್ ಕಡೆಯಿಂದ ಯಾರಿಗೂ ಸ್ಪೆಷಲ್ ಟ್ರೀಟ್ಮೆಂಟ್ ಇರೋದಿಲ್ಲ. ಈಗಾಗಲೇ ನಿಗದಿಯಾಗಿರುವ ಸ್ಥಳಗಳಲ್ಲಿಯೇ ಆಟಗಾರರು ಸ್ಟೇ ಆಗ್ಬೇಕಾಗುತ್ತೆ ಅಂತಾ ಸ್ಪಷ್ಟನೆ ನೀಡಿದ್ರು. ಅದ್ರಂತೆ ಈಗ ಬಿಸಿಸಿಐ ಕೂಡ ಇದಕ್ಕೆ ಕ್ಲಾರಿಟಿ ನೀಡಿದೆ.
ಫೈವ್ ಸ್ಟಾರ್ ಹೋಟೆಲ್ಸ್ ಅಲ್ಲದಿದ್ರೂ ಸೌಲಭ್ಯಗಳಿವೆ ಎಂದ ಶುಕ್ಲಾ!
ಕ್ರೀಡಾಕೂಟ ನಡೆಯಲಿರುವ ಜಪಾನ್ನ ನಗೋಯಾದಲ್ಲಿ ಫೈವ್ ಸ್ಟಾರ್ ಹೋಟೆಲ್ಗಳ ಕೊರತೆಯಿಂದಾಗಿ ಕ್ರಿಕೆಟಿಗರಿಗೆ ವಸತಿ ಸೌಕರ್ಯದ ಸಮಸ್ಯೆ ಉಂಟಾಗಿದೆ ಅನ್ನೋದನ್ನ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಒಪ್ಪಿಕೊಂಡಿದ್ದಾರೆ. ಆದ್ರೂ ಆಯೋಜಕರು ಯಾವುದೇ ರೀತಿ ವ್ಯವಸ್ಥೆ ನೀಡಿದ್ರೂ ನಾವು ಅಲ್ಲಿಯೇ ಉಳಿಯುತ್ತೇವೆ. ನಮ್ಮ ಆಟಗಾರರು ಆರಾಮಿಗಿರೋದಕ್ಕೆ ಯಾವ ರೀತಿಯ ವಸತಿ ಸೌಕರ್ಯವನ್ನು ನೀಡಲಾಗುತ್ತಿದೆ ಎಂಬುದನ್ನು ನಾವು ಕೂಡ ನೋಡುತ್ತಿದ್ದೇವೆ. ಖಂಡಿತವಾಗಿಯೂ ಅವು ಪಂಚತಾರಾ ಹೋಟೆಲ್ಗಳಲ್ಲ. ಆದ್ರೂ ಉತ್ತಮ ವಸತಿ ಸೌಕರ್ಯಗಳಾಗಿವೆ ಎಂದಿದ್ದಾರೆ. ನಮ್ಮ ಕ್ರಿಕೆಟಿಗರಿಗೆ ವಸತಿ ಸೌಕರ್ಯ ಏನೇ ಇರಲಿ. ಅವುಗಳ ಫೋಟೋಸ್ ಮತ್ತು ವಿಡಿಯೋಸ್ ನಮ್ಮ ಬಳಿ ಇವೆ. ಸೋ ಅವು ಸೇಫ್ ಆಗಿವೆ ಅನ್ನೋದನ್ನ ನಾವು ಒಪ್ಪಿತ್ತೇವೆ. ಕ್ರಿಕೆಟಿಗರು ಹೋಗಿ ಅಲ್ಲಿಯೇ ಇರುತ್ತಾರೆ. ಇಲ್ದಿದ್ರೆ ಅವರನ್ನು ಕ್ರೀಡಾಕೂಟದಿಂದ ದೂರದಲ್ಲಿರುವ ಒಸಾಕಾ ಅಥವಾ ಟೋಕಿಯೊದಲ್ಲಿ ಉಳಿಯುವಂತೆ ಮಾಡ್ಬೇಕಾಗುತ್ತೆ. ಹಾಗೆ ಮಾಡಿದ್ರೆ ಟ್ರಾವೆಲಿಂಗ್ ಸ್ವಲ್ಪ ಕಷ್ಟ ಆಗ್ಬೋದು ಎಂದಿದ್ದಾರೆ.
ಪ್ರತೀ ಆಟಗಾರರೂ ನಮ್ಮ ಜವಾಬ್ದಾರಿ ಎಂದ ಪಿಟಿ ಉಷಾ!
ಇನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಕೂಡ ಈ ಸಮಸ್ಯೆ ಬಗ್ಗೆ ಮಾತ್ನಾಡಿದ್ದಾರೆ. ಬಟ್ ಕ್ರಿಕೆಟಿಗರಿಗೆ ಕೊಠಡಿಗಳನ್ನು ಯಾರು ಬುಕ್ ಮಾಡಿದ್ದಾರೆ ಅನ್ನೋದು ಸ್ವಲ್ಪ ಕನ್ಫ್ಯೂಷನ್ಸ್ ಇದೆ ಎಂದಿದ್ದಾರೆ. ಇನ್ನು ಆಟಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ. ನಾವು ಈಗಾಗಲೇ ಹೋಟೆಲ್ಗಳನ್ನು ಬುಕ್ ಮಾಡಿದ್ದೇವೆ. ಹಾಗಂತ ಪ್ರತಿಯೊಬ್ಬ ಆಟಗಾರನಿಗೂ ಸಪರೇಟ್ ಆಗಿ ನಾವು ಹೋಟೆಲ್ ರೂಮ್ಸ್ ಬುಕ್ ಮಾಡಲು ಸಾಧ್ಯವಿಲ್ಲ. ಬೇರೆಲ್ಲಾ ಪ್ಲೇಯರ್ಸ್ ಗೆ ನಾವು ರೂಮ್ಸ್ ಬುಕ್ ಮಾಡಿದ್ದೇವೆ. ಕ್ರಿಕೆಟಿಗರಿಗಾಗಿ ಬಿಸಿಸಿಐ ಕೂಡ ಹೋಟೆಲ್ ಅನ್ನು ಬುಕ್ ಮಾಡಿದೆ ಎಂದಿದ್ದಾರೆ. ಮತ್ತೊಂದೆಡೆ ಕ್ರಿಕೆಟರ್ಗಳಿಗೆ ಪ್ರತ್ಯೇಕ ಕೊಠಡಿಗಳನ್ನ ನೀಡಲಾಗುತ್ತೆ. ಅವ್ರು ಯಾರ ಜೊತೆಯೂ ರೂಂ ಶೇರ್ ಮಾಡಿಕೊಳ್ಳಲ್ಲ ಪ್ರತ್ಯೇಕ ಕೊಠಡಿಗಳಲ್ಲಿ ಇರ್ತಾರೆ ಅಂತಾ ಬಿಸಿಸಿಐ ಉಪಾಧ್ಯಕ್ಷ ಶುಕ್ಲಾ ಹೇಳಿದ್ದಾರೆ. ಹಾಗೇ ಏಷ್ಯನ್ ಗೇಮ್ಸ್ಗೆ ನಾವು ಬಿ ಟೀಂ ಕಳಿಸಲ್ಲ. ಅನೌನ್ಸ್ ಆಗಿರುವ ಪ್ರತಿಭಾನ್ವಿತರ ತಂಡವೇ ತೆರಳಲಿದೆ ಹಾಗೇ ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದಿದ್ದಾರೆ. ಸೋ ಅಲ್ಲಿಗೆ ಇರೋ ಸೌಕರ್ಯಗಳನ್ನೇ ಒಪ್ಪಿಕೊಂಡು ಭಾರತ ಕ್ರೀಡಾಕೂಟದಲ್ಲಿ ಭಾಗಿಯಾಗಲು ಒಪ್ಪಿಗೆ ನೀಡಿದೆ. ಇನ್ನು ಟೀಂ ಇಂಡಿಯಾ ಆಫ್ಘನ್ ಸರಣಿ ಮುಗಿಸಿ ಸೆಪ್ಟೆಂಬರ್ 20 ರಂದು ಟೋಕಿಯೊಗೆ ತೆರಳಲಿದ್ದು, ಸೆಪ್ಟೆಂಬರ್ 28 ರಂದು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಏಷ್ಯನ್ ಗೇಮ್ಸ್ 2026 ರ ಅಭಿಯಾನವನ್ನು ಆರಂಭಿಸಲಿದೆ.

ನೋಡಿರಿ

