IND Vs AFG ಡೀಲ್.. ಬಾಂಗ್ಲಾ ಶೇಕ್ – 1 ಕಲ್ಲಿನಲ್ಲಿ 2 ಹಕ್ಕಿ ಹೊಡೆಯಿತಾ BCCI?
ಸರಣಿ ಮತ್ತೆ ಮುಂದೂಡಿಕೆನಾ.. ರದ್ದಾಗುತ್ತಾ?

IND Vs AFG ಡೀಲ್.. ಬಾಂಗ್ಲಾ ಶೇಕ್ – 1 ಕಲ್ಲಿನಲ್ಲಿ 2 ಹಕ್ಕಿ ಹೊಡೆಯಿತಾ BCCI?ಸರಣಿ ಮತ್ತೆ ಮುಂದೂಡಿಕೆನಾ.. ರದ್ದಾಗುತ್ತಾ?

ಭಾರತ ಮತ್ತು ಬಾಂಗ್ಲಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್​ಗೂ ಎಫೆಕ್ಟ್ ಆಗಿದೆ. ಐಪಿಎಲ್, ಟಿ-20 ವಿಶ್ವಕಪ್​ಗಳಲ್ಲಿನ ಬಾಯ್ಕಾಟ್ ನಿಂದಾಗಿ ಪರಿಸ್ಥಿತಿ ಕೈಮೀರಿತ್ತು. ಈಗ ಸರಣಿ ಮೂಲಕ ಎಲ್ಲವನ್ನೂ ಸರಿ ಮಾಡಿಕೊಳ್ಳೋಣ ಅಂತಾ ಬಾಂಗ್ಲಾ ಪ್ಲ್ಯಾನ್ ಮಾಡಿತ್ತು. ಆದ್ರೆ ಆ ಸರಣಿ ನಡೆಯೋದೇ ಡೌಟ್ ಇದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕೊಟ್ಟಿರೋ ಶಾಕ್​ಗೆ ಈ ವರ್ಷವೂ ಭಾರತ-ಬಾಂಗ್ಲಾ ಸರಣಿ ನಡೆಯಲ್ಲ ಅನ್ಸುತ್ತೆ.

ಇದನ್ನೂ ಓದಿ : IPLನಲ್ಲಿ ಆಡಲ್ಲ AUS ಪ್ಲೇಯರ್ಸ್? – RCBಗೆ ಕೈಕೊಟ್ರಾ ಡೇವಿಡ್ & ಜೋಶ್?

ಬಲಿಷ್ಠ ಭಾರತವನ್ನ ಎದುರು ಹಾಕ್ಕೊಂಡು ಸರ್ವೈವ್ ಆಗೋದು ಕಷ್ಟ ಅನ್ನೋದನ್ನ ಅರಿತ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತೆ ಪ್ಯಾಚಪ್ ಮಾಡಿಕೊಳ್ಳೋ ಪ್ಲ್ಯಾನ್​ನಲ್ಲಿತ್ತು. ಅದಕ್ಕಾಗಿ ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್​ನಲ್ಲಿ ಸರಣಿ ಆಯೋಜನೆ ಸಿದ್ಧತೆಯಲ್ಲಿತ್ತು. ಈಗಾಗ್ಲೇ ಸರಣಿಯ ಟೆಂಟೆಟಿವ್ ಶೆಡ್ಯೂಲ್ ಕೂಡ ರಿಲೀಸ್ ಮಾಡಿದ್ರು.  ಭಾರತ ತಂಡವು ಸೆಪ್ಟೆಂಬರ್ 1 ರಿಂದ 13 ರವರೆಗೆ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಾಗಿತ್ತು. ಆದ್ರೆ ಈ ವೇಳಾಪಟ್ಟಿ ಫೈನಲ್ ಆಗೋ ಮೊದಲೇ ಅಫ್ಘಾನಿಸ್ತಾನ ಶಾಕ್ ಕೊಟ್ಟಿದೆ. ಇದೀಗ ಆಫ್ಘನ್ ಮುಂದಿಟ್ಟುಕೊಂಡು ಬಾಂಗ್ಲಾ ಜೊತೆ ಸರಣಿ ಆಡಲ್ಲ ಅನ್ನೋ ಥರ ಬಿಸಿಸಿಐ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಿತಾ ಅನ್ನೋ ಚರ್ಚೆಯೂ ಶುರುವಾಗಿದೆ.

ಸೆಪ್ಟೆಂಬರ್ ನಲ್ಲಿ ಭಾರತ & ಆಫ್ಘನ್ ನಡುವೆ ಟಿ-20ಐ ಸರಣಿ ಘೋಷಣೆ!

ಅತ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್​ನಲ್ಲಿ ಭಾರತ ತಮ್ಮ ದೇಶಕ್ಕೆ ಬರ್ತಾರೆ ಅಂತಾ ಕಾಯ್ತಿದ್ರೆ ಇತ್ತ ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ಸರಣಿ ಅನೌನ್ಸ್ ಆಗಿದೆ. ಬಿಸಿಸಿಐ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಮೂರು ಪಂದ್ಯಗಳ ಟಿ20 ಸರಣಿಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಫ್ಘಾನಿಸ್ತಾನದ ಹೋಮ್ ಸೀರೀಸ್ ಆಗಿರುವ ಈ ಸರಣಿಯು ಸೆಪ್ಟೆಂಬರ್ 13, 15 ಮತ್ತು 17 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಜೂನ್‌ನಲ್ಲಿ ನಡೆದಿದ್ದ ಟೆಸ್ಟ್ ಮತ್ತು ಏಕದಿನ ಸರಣಿಗಳ ನಂತರ, ಈ ಟಿ20 ಸರಣಿಯೊಂದಿಗೆ ಉಭಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ಪೂರ್ಣಗೊಳ್ಳಲಿದೆ. ಭಾರತ ಏನೋ ಆಫ್ಘನ್ ಜೊತೆ ಸರಣಿ ಆಡುತ್ತೆ ಹೌದು. ಆದ್ರೆ ಇಲ್ಲಿ ಬಾಂಗ್ಲಾಗೆ ಟೆನ್ಷನ್ ಸ್ಟಾರ್ಟ್ ಆಗಿದೆ.

ಭಾರತದ ಜೊತೆ ಮತ್ತೆ ಪಂದ್ಯಗಳ ಆಯೋಜನೆಗೆ ಸಿದ್ಧವಾಗಿದ್ದ ಬಾಂಗ್ಲಾ!

ಌಕ್ಚುಲಿ ಭಾರತ ಹಾಗೂ ಬಾಂಗ್ಲಾ ನಡುವೆ ಕಳೆದ ವರ್ಷವೇ ಸರಣಿ ನಡೀಬೇಕಿತ್ತು. ಆದ್ರೆ ಎರಡೂ ರಾಷ್ಟ್ರಗಳ ನಡುವಿನ ಕೆಲ ವಿವಾದಗಳಿಂದ ಈ ವರ್ಷಕ್ಕೆ ಪೋಸ್ಟ್ ಪೋನ್ ಆಗಿತ್ತು. ಈಗ ಬಾಂಗ್ಲಾದೇಶದ ಹೊಸ ಸರ್ಕಾರ ಮತ್ತು ಕ್ರೀಡಾ ಸಚಿವಾಲಯವು ಈ ಸರಣಿಯನ್ನು ಮತ್ತೆ ಆಡೋಕೆ ಟ್ರೈ ಮಾಡ್ತಿದ್ರೂ  ಬಿಸಿಸಿಐನ ಸೆಪ್ಟೆಂಬರ್ ಕ್ಯಾಲೆಂಡರ್‌ನಲ್ಲಿ ಅಫ್ಘಾನ್ ಸರಣಿಗೆ ಚಾನ್ಸ್ ಸಿಕ್ಕಿದೆ. ಅದೂ ಅಲ್ದೇ ಬಾಂಗ್ಲಾ ಜೊತೆ ಸರಣಿ ಆಡ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಬಿಸಿಸಿಐಗೆ ಇನ್ನೂ ಕೂಡ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಸಿಕ್ಕಿಲ್ಲ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಉಂಟಾದ ರಾಜಕೀಯ ಬದಲಾವಣೆಗಳು ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ, ಬಿಸಿಸಿಐ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. ಸರ್ಕಾರದ ಗ್ರೀನ್ ಸಿಗ್ನಲ್ ಸಿಗುವವರೆಗೂ ಈ ಸರಣಿ ಕನ್ಫರ್ಮ್ ಆಗಲ್ಲ. ಒಂದು ವೇಳೆ ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾಗಿ ಸರಣಿ ನಡೆದರೆ, ಪಂದ್ಯಗಳು ಸೆಪ್ಟೆಂಬರ್ 1 ರಿಂದ 13 ರ ನಡುವೆ ಆಯೋಜನೆಗೊಳ್ಳಬಹುದು. ಹೀಗಾಗಿ ಭಾರತ ಮತ್ತು ಬಾಂಗ್ಲಾ ಸರಣಿ ಮತ್ತೆ ಪೋಸ್ಟ್ ಪೋನ್ ಆಗುತ್ತಾ ಅಥವಾ ಕಂಪ್ಲೀಟ್ ರದ್ದಾಗುತ್ತಾ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *