ಟೀಂ ಇಂಡಿಯಾದಲ್ಲಿ ಇಬ್ಬರ ತಲೆದಂಡ – T-20I & ODI ಸೋಲುಗಳಿಗೆ ಶಿಕ್ಷೆನಾ?
KKR ಸೇರಿದ್ದೇಕೆ ಗಂಭೀರ್ ಭಂಟ?

ಟೀಂ ಇಂಡಿಯಾದಲ್ಲಿ ಇಬ್ಬರ ತಲೆದಂಡ – T-20I & ODI ಸೋಲುಗಳಿಗೆ ಶಿಕ್ಷೆನಾ?KKR ಸೇರಿದ್ದೇಕೆ ಗಂಭೀರ್ ಭಂಟ?

ಸದ್ಯ ರಿಲ್ಯಾಕ್ಸ್ ಮೋಡ್​ನಲ್ಲಿರೋ ಟೀಂ ಇಂಡಿಯಾ ಆಗಸ್ಟ್ 15ರಿಂದ ಶ್ರೀಲಂಕಾದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಆದ್ರೆ ಈ ಸರಣಿಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗಿದೆ. ಕೋಚಿಂಗ್ ಸ್ಟಾಫ್ ವಿಭಾಗದಲ್ಲಿ ಇಬ್ಬರ ತಲೆದಂಡವಾಗಿದೆ. ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2 ವರ್ಷಗಳ ಒಪ್ಪಂದು ಮುಗಿದು ಮತ್ತೆ ಕಂಟಿನ್ಯೂ ಮಾಡೋಕೆ ಬಿಸಿಸಿಐ ಆಫರ್ ನೀಡಿದ್ರೂ ಅದನ್ನ ರಿಜೆಕ್ಟ್ ಮಾಡಿದ್ದಾರೆ. ಅಟ್ ದಿ ಸೇಮ್ ಟೈಂ ಕೆಕೆಆರ್ ತಂಡಕ್ಕೆ ಜಾಯ್ನ್ ಆಗಿದ್ದಾರೆ. ಮತ್ತೊಂದ್ಕಡೆ ಭಾರತ ತಂಡದ ಫೀಲ್ಡಿಂಗ್ ಕೋಚ್​​ ಹುದ್ದೆಗೂ ಹೊಸಬರ ಎಂಟ್ರಿಯಾಗಿದೆ.

ಇದನ್ನೂ ಓದಿ : ಸಂಜುಗೆ ಮುಳ್ಳಾದ್ರಾ ಸೂರ್ಯವಂಶಿ? ಸ್ಯಾಮ್ಸನ್‌ಗಿಲ್ಲದ ನ್ಯಾಯ ಅಭಿಗ್ಯಾಕೆ?

ದಶಕದಿಂದಲೂ ಗಂಭೀರ್ ಜೊತೆ ಜೊತೆಗೇ ಇರುವ ರಯಾನ್!

ಅಷ್ಟಕ್ಕೂ ಇಲ್ಲಿ ಅಸಿಸ್ಟೆಂಟ್ ಕೋಚ್ ಹುದ್ದೆ ಬಿಟ್ಟು 2027ರ ಐಪಿಎಲ್​ನಲ್ಲಿ ಕೆಕೆಆರ್ ಕೋಚಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ತಿರೋ ರಯಾನ್ ಟೆನ್ ಡೊಶ್ಚೆಟ್ ಅವ್ರ ಗೌತಮ್ ಗಂಭೀರ್ ಅವ್ರ ರೈಟ್ ಹ್ಯಾಂಡ್ ಇದ್ದಂತೆ. ಒಂದೂವರೆ ದಶಕದಿಂದ ಇವ್ರಿಬ್ರೂ ಕೂಡ ಜೊತೆಜೊತೆಯಲ್ಲೇ ಬಂದಿದ್ದಾರೆ. 2011ರಿಂದ 2017ರ ನಡುವೆ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾಗ, ರಯಾನ್ ಕೂಡ ಕೆಕೆಆರ್​ನ ಮೇನ್ ಪ್ಲೇಯರ್ ಆಗಿದ್ರು. ಗಂಭೀರ್ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್ 2 ಸಲ ಚಾಂಪಿಯನ್ ಪಟ್ಟಕ್ಕೇರಿದ ಮೇಲೆ ಇವ್ರಿಬ್ಬರ ಫ್ರೆಂಡ್​ಶಿಪ್ ಇನ್ನೂ ಕೂಡ ಸ್ಟ್ರಾಂಗ್ ಆಯ್ತು. ಹಾಗೇ 2024ರಲ್ಲಿ ಗಂಭೀರ್ ಕೆಕೆಆರ್ ಮೆಂಟರ್ ಆಗಿದ್ದಾಗ ರಯಾನ್ ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ರು. ಆಗ ಕೆಕೆಆರ್ ಚಾಂಪಿಯನ್ ಪಟ್ಟಕ್ಕೂ ಏರಿತು. ಇನ್ನು ಗಂಭೀರ್ ಕೆಕೆಆರ್ ಬಿಟ್ಟು ಟೀಂ ಇಂಡಿಯಾಗೆ ಹೆಡ್ ಕೋಚ್ ಆದಾಗ ಒನ್ಸ್ ಅಗೇನ್ ರಯಾನ್ ಕೂಡ ಭಾರತ ತಂಡಕ್ಕೆ ಅಸಿಸ್ಟೆಂಟ್ ಕೋಚ್ ಆಗಿ ಜಾಯ್ನ್ ಆಗಿದ್ರು. ಌಂಡ್ ಇವ್ರೇ ಬೇಕು ಅಂತಾ ಹಠ ಹಿಡಿದು ಗಂಭೀರ್ ಅವ್ರೇ ಕರೆತಂದಿದ್ರು. ಆದ್ರೀಗ ರಯಾನ್ ಟೀಂ ಇಂಡಿಯಾ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಕೆಕೆಆರ್​ ಕಡೆ ಮುಖ ಮಾಡಿದ್ದಾರೆ.

ಅವಮಾನಕರ ಸೋಲುಗಳಿಗೆ ತಲೆದಂಡವಾಯ್ತಾ?

ಇನ್ನು ರಯಾನ್ ಟೀಂ ಇಂಡಿಯಾ ಸೇರಿದ್ಮೇಲೆ ಭಾರತ 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ-20 ವಿಶ್ವಕಪ್ ಗೆದ್ರೂ ಸಾಕಷ್ಟು ಸರಣಿಗಳಲ್ಲಿ ಮುಗ್ಗರಿಸಿದೆ. ರೀಸೆಂಟ್ ಆಗಿ ಇಂಗ್ಲೆಂಡ್ ಪ್ರವಾಸದಲ್ಲಿ ವೈಟ್-ಬಾಲ್ ಸರಣಿಯಲ್ಲಿ ಸೋಲಬೇಕಾಯ್ತು. ಅದ್ರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿದ್ದು ಮತ್ತು ತವರಿನಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ವೈಟ್‌ವಾಶ್ ಆದ ಮೇಲೆ ಕೋಚಿಂಗ್ ಸ್ಟಾಫ್ಸ್ ಮೇಲೆ ಪ್ರೆಶರ್ ಇತ್ತು. ಸೋ ಈ ಎಲ್ಲಾ ಕಾರಣಗಳಿಂದ ರಯಾನ್ ಹೊರಬಂದಿದ್ದಾರೆ. ಹಾಗೇ  ಐಪಿಎಲ್ 2027 ಕ್ಕೂ ಮುನ್ನ ಕೆಕೆಆರ್ ತಂಡದಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡಲಿದ್ದಾರೆ.

ಭಾರತ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್!

ಇನ್ನು ಇದೆಲ್ಲದ್ರ ನಡುವೆ ಫೀಲ್ಡಿಂಗ್ ಕೋಚ್ ವಿಭಾಗದಲ್ಲೂ ಸರ್ಜರಿಯಾಗಿದೆ. ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರ ಒಪ್ಪಂದ ಮುಗಿದಿರೋದ್ರಿಂದ ಹೊಸ ಫೀಲ್ಡಿಂಗ್ ಕೋಚ್ ನೇಮಕ ಮಾಡ್ಲಾಗಿದೆ. ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸುಭದೀಪ್ ಘೋಷ್ ಪಾಲಿಗೆ ಮೊದಲ ಸವಾಲಾಗಲಿದೆ. ಇನ್ನು ಕ್ರಿಕೆಟ್ ಫೀಲ್ಡಲ್ಲಿ ಜಾಯ್ ಅಂತಾನೇ ಕರೆಸಿಕೊಳ್ಳೋ ಸುಭದೀಪ್ ದೇಶೀ ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಫೀಲ್ಡಿಂಗ್​ನಿಂದಲೇ ಹೆಸರಾಗಿದ್ದವ್ರು. ಹಾಗೇ ಭಾರತ ಅಂಡರ್ 19 ಟೀಂ, ಎ ತಂಡಗಳಲ್ಲೂ ಕೆಲಸ ಮಾಡಿದ್ದಾರೆ. ಮಹಿಳಾ ತಂಡದಲ್ಲೂ ಫೀಲ್ಡಿಂಗ್ ಕೋಚ್ ಆಗಿದ್ರು. ಇತ್ತೀಚೆಗಷ್ಟೇ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲೂ ಇವ್ರೇ ಫೀಲ್ಡಿಂಗ್ ಕೋಚ್ ಆಗ್ಇದ್ರು. ಐಪಿಎಲ್​ನಲ್ಲೂ ಸಾಕಷ್ಟು ಎಕ್ಸ್​ಪೀರಿಯನ್ಸ್​ ಇದೆ. ಅದೂ ಅಲ್ದೇ ಇತ್ತೀಚೆಗೆ ಭಾರತದ ಆಟಗಾರರು ಫೀಲ್ಡಿಂಗ್​ನಲ್ಲಿ ತುಂಬಾನೇ ಕೇರ್​ಲೆಸ್ ಆಗಿದ್ರು. ಜಿಂಬಾಬ್ವೆ ಸರಣಿಯಲ್ಲೂ ಕೂಡ ಸಾಲು ಸಾಲು ಕ್ಯಾಚ್​ಗಳನ್ನ ಬಿಟ್ಟು ಟ್ರೋಲ್ ಆಗಿದ್ರು. ಇದೇ ಕಾರಣಕ್ಕೆ ಭಾರತದ ಫೀಲ್ಡಿಂಗ್ ಗುಣಮಟ್ಟ ಹೆಚ್ಚಿಸಲು ಹೊಸ ಕೋಚ್​ಗೆ ಮಣೆ ಹಾಕಲಾಗಿದೆ.

Shantha Kumari

Leave a Reply

Your email address will not be published. Required fields are marked *