ಅಬ್ಬಬ್ಬಾ.. BCCIಗೆ ಇಷ್ಟೊಂದು ದುಡ್ಡಾ! ವರ್ಷಕ್ಕೆ ಬಡ್ಡಿನೇ ಸಾವಿರ ಕೋಟಿ!
BCCI ಮುಂದೆ ನಡೆಯಲ್ವಾ ICC ಆಟ

ಅಬ್ಬಬ್ಬಾ.. BCCIಗೆ ಇಷ್ಟೊಂದು ದುಡ್ಡಾ! ವರ್ಷಕ್ಕೆ ಬಡ್ಡಿನೇ ಸಾವಿರ ಕೋಟಿ!BCCI ಮುಂದೆ ನಡೆಯಲ್ವಾ ICC ಆಟ

ನೀರಿನಂತೆ ಬಿಸಿಸಿಐಗೆ ಹಣ ಹರಿದು ಬರ್ತಿದೆ.. ಬಿಸಿಸಿಐ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗಿದೆ.. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬುಡ್ಡಿನೆ ಸಾವಿರಾರು ಕೋಟಿ ಲೆಕ್ಕದಲ್ಲಿ ಹರಿದು ಬರ್ತಿದೆ ಅಂದ್ರೆ ಲೆಕ್ಕಹಾಕಿ ಬಿಸಿಸಿಐ ಬಳಿ ಎಷ್ಟು ದುಡ್ಡಿದೆ ಅನ್ನೋದ್ದನ್ನ..  BCCI  ಆರ್ಥಿಕ ವರ್ಷ 23-24ರಲ್ಲಿ ಭರ್ಜರಿ ಆದಾಯ ಗಳಿಸಿದ್ದು ಒಟ್ಟು 9,741.7 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಇದ್ದಕ್ಕೆ ಐಪಿಎಲ್‌ ಚಿನ್ನದ ಮೊಟ್ಟೆ ಇಡೋ ಕೋಳಿಯಾಗಿದೆ. ಐಪಿಎಲ್‌ನಿಂದಲೇ 5,761 ಕೋಟಿ ರೂಪಾಯಿ ಆದಾಯ ಬಂದಿದೆ. ಐಪಿಎಲ್ ಜನಪ್ರಿಯತೆಯಿಂದಲೇ ಬಿಸಿಸಿಐ ಖಜಾನೆ ತುಂಬಿದೆ. ಐಪಿಎಲ್ ಅಲ್ಲದ ಪಂದ್ಯಗಳ ಪ್ರಸಾರ ಹಕ್ಕು ಮಾರಾಟದಿಂದಲೂ 361 ಕೋಟಿ ರೂಪಾಯಿ ಸಿಕ್ಕಿದೆ. ಬಿಸಿಸಿಐ ಬಳಿ 30,000 ಕೋಟಿ ರೂಪಾಯಿ ಮೀಸಲು ಹಣವಿದ್ದು ಅದಕ್ಕೆ ಸಿಗುವ ಬಡ್ಡಿಯೇ 1000 ಕೋಟಿ ರೂಪಾಯಿ ಇದೆ.

ಬಿಸಿಸಿಐ ಬಳಿಯಿದೆ ಆದಾಯ ದುಪ್ಪಟ್ಟು ಮಾಡೋ ಚಾನ್ಸ್ 

ಬಿಸಿಸಿಐ ತನಗೆ ಈಗ ಬರ್ತಿರೋ ಆದಾಯವನ್ನ ಡಬಲ್ ಕೂಡ ಮಾಡಬಹುದು..  ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಸಿ.ಕೆ.ನಾಯುಡು ಟ್ರೋಫಿಯಂತಹ ಸಾಂಪ್ರದಾಯಿಕ ಸ್ವರೂಪಗಳನ್ನು ವಾಣಿಜ್ಯೀಕರಣಗೊಳಿಸುವ ಮೂಲಕ ಐಪಿಎಲ್ ಅನ್ನು ಹೊರತುಪಡಿಸಿದಂತೆ ಆದಾಯವನ್ನು ಹೆಚ್ಚಿಸಿಕೊಳ್ಳಬುಹುದು.. ಇದ್ದಕ್ಕೆ ಬಿಸಿಸಿಐ ಮುಂದಿನ ದಿನಗಳಲ್ಲಿ ಮುಂದಾಗಬಹುದು. ಸದ್ಯ ಬಿಸಿಸಿಐ ಬಳಿ ಸುಮಾರು 30,000 ಕೋಟಿ ರೂಪಾಯಿ ಮೀಸಲು ಹಣವಿದೆ. ಇದರಿಂದ ವರ್ಷಕ್ಕೆ ಸುಮಾರು 1,000 ಕೋಟಿ ರೂಪಾಯಿ ಬಡ್ಡಿ ಬರುತ್ತದೆ. ಪ್ರಾಯೋಜಕತ್ವ, ಮಾಧ್ಯಮ ಒಪ್ಪಂದಗಳು ಮತ್ತು ಪಂದ್ಯಗಳ ಮೂಲಕ ಬರುವ ಆದಾಯದಿಂದ ಇದು ಪ್ರತಿ ವರ್ಷ ಶೇ.10-12ರಷ್ಟು ಹೆಚ್ಚಾಗುತ್ತೆ. ಮುಂದೆ ಇದು ಮತ್ತಷ್ಟು ಹೆಚ್ಚಾಗಲಿದೆ.

ಬಿಸಿಸಿಐ ಮುಂದೆ ನಡೆಯಲ್ಲ ಐಸಿಸಿ ಆಟ

ಬಿಸಿಸಿಐ ಎಷ್ಟು ಸ್ಟ್ರಾಂಗ್ ಅಂದ್ರೆ  ಜಾಗತಿಕ ಕ್ರಿಕೆಟ್ ಸಂಸ್ಥೆಯಾದ ICC ಕೂಡ ಬಿಸಿಸಿಐ ಹಣದ ಮೇಲೆ ಅವಲಂಬಿತವಾಗಿದೆ. ಐಸಿಸಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಫೆಲ್ಯೂರ್ ಆಗಿದೆ..  ಹೀಗಾಗಿ ಐಸಿಸಿಯು ಬಿಸಿಸಿಐ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ನ ವಿವಿಧ ಕ್ರಿಕೆಟ್ ಮಂಡಳಿಗೆ ಅಸಮಾಧಾನ ಕೂಡ ಉಂಟು..  ಎಲ್ಲದ್ದಕ್ಕಿಂತ ಹೆಚ್ಚಾಗಿ  ಈ ವಿಷ್ಯದಲ್ಲಿ ಪಾಕಿಸ್ತಾನಕ್ಕೆ ಹೆಚ್ಚು ಉರಿ. ಪಾಕ್‌ ಕ್ರಿಕೆಟ್ ಮಂಡಳಿ ಮತ್ತು ಕೆಲ ಮಾಜಿ ಕ್ರಿಕೆಟ್ ಆಟಗಾರರು ಈ ವಿಚಾರವಾಗಿ ಕಿಡಿಕಾರುತ್ತಲೇ ಇರುತ್ತಾರೆ.

Kishor KV