BCCIನಲ್ಲಿ ಸ್ಟಾರ್ಸ್ಗೆ ರಾಜಾತಿಥ್ಯ – ₹7 ಕೋಟಿ ವೇತನ.. ಹೆಚ್ಚು ವಿಶ್ರಾಂತಿ
RO-KO & ಬುಮ್ರಾ ಮೇಲೆ ಸಿಟ್ಟೇಕೆ?

ವಿಶ್ವಕ್ರಿಕೆಟ್ನಲ್ಲಿ ಬಿಸಿಸಿಐ ಬಿಗ್ ಬಾಸ್ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಟೀಂ ಇಂಡಿಯಾದಲ್ಲಿ ಜಗತ್ತೇ ಮೆಚ್ಚಿದ ಸೂಪರ್ ಸ್ಟಾರ್ ಪ್ಲೇಯರ್ಸ್ ಇದ್ದಾರೆ. ಯಾವ ಬಾಲಿವುಡ್ ಹೀರೋಗೂ ಸಿಗದಷ್ಟು ನೇಮ್, ಫೇಮ್ ಈಗ ಕ್ರಿಕೆಟರ್ಸ್ಗೆ ಸಿಗ್ತಾ ಇದೆ. ಹಾಗಂತ ದಿಗ್ಗಜ ಆಟಗಾರರಿಗೆ ಬರೀ ಕೋಟಿ ಕೋಟಿ ವೇತನ ಮಾತ್ರ ಕೊಡ್ತಾ ಇಲ್ಲ. ಬಿಸಿಸಿಐ ಕಡೆಯಿಂದ ರಾಜಮರ್ಯಾದೆಯೂ ಸಿಗ್ತಾ ಇದೆ. ಇದೇ ರಾಜಮರ್ಯಾದೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದೆ. ಹೆಚ್ಚೆಚ್ಚು ಹಣದ ಜೊತೆಗೆ ರೆಸ್ಟ್ ಮೇಲೆ ರೆಸ್ಟ್ ನೀಡ್ತಿರೋದು ಯಾಕೆ ಅಂತಾ ಕ್ರಿಕೆಟ್ ವಿಶ್ಲೇಷಕರು ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: ಪಾತಾಳಕ್ಕಿಳಿದ ಪಾಕ್! – ಇಮ್ರಾನ್ ಅಕ್ರಂ ದೇಶಕ್ಕೆ ಏನಾಯ್ತು?
ಶ್ರೀಲಂಕಾ ವಿರುದ್ಧದ ಸರಣಿ ಬಳಿಕ ಟೀಂ ಇಂಡಿಯಾ ಆಟಗಾರರಿಗೆ 40 ದಿನಗಳ ಕಾಲ ಲಾಂಗ್ ಬ್ರೇಕ್ ಸಿಕ್ಕಿದೆ. ಸೆಪ್ಟೆಂಬರ್ 19ರಿಂದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಟೀಂ ಇಂಡಿಯಾ ಮತ್ತೆ ತನ್ನ ಜರ್ನಿ ಆರಂಭಿಸಲಿದೆ. ಇದ್ರ ನಡುವೆ ದೇಶೀಯ ಟೂರ್ನಿಯಲ್ಲಿ ರೆಡ್ ಬಾಲ್ ಕ್ರಿಕೆಟ್ಗೆ ವೇದಿಕೆ ಸಜ್ಜಾಗಿದೆ. ಟೀಂ ಇಂಡಿಯಾ ಪರ ಆಡ್ತಿರೋ ಆಟಗಾರರೂ ಸೇರಿದಂತೆ ಹಲವರನ್ನು ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮ್ಯಾನೇಜ್ಮೆಂಟ್ ಮುಂದಾಗಿದೆ. ಆದ್ರೆ ಟೀಮ್ ಇಂಡಿಯಾದ ಸೂಪರ್ಸ್ಟಾರ್ಗಳಿಗೆ ಮಾತ್ರ ಇದ್ರಿಂದ ರೆಸ್ಟ್ ನೀಡಲಾಗಿದೆ.
ರೋಹಿತ್, ವಿರಾಟ್ & ಬುಮ್ರಾಗೆ ವಿಶ್ರಾಂತಿ ನೀಡಿದ್ದೇ ತಪ್ಪಾ?
ಸೆಪ್ಟೆಂಬರ್ 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಕೆಲ ಆಟಗಾರಿಗೆ ಮುಂದಿನ ಟೆಸ್ಟ್ ಸೀಸನ್ನ ಸಿದ್ಧತೆಯ ಭಾಗವಾಗಿ ಕಡ್ಡಾಯವಾಗಿ ದುಲೀಪ್ ಟ್ರೋಫಿ ಟೂರ್ನಿಯನ್ನಾಡುವಂತೆ ಮ್ಯಾನೇಜ್ಮೆಂಟ್ ಖಡಕ್ ವಾರ್ನಿಂಗ್ ಕೊಟ್ಟಿದೆ. ಆದ್ರೆ ಸೂಪರ್ ಸ್ಟಾರ್ಗಳಿಗೆ ಮಾತ್ರ ವಿಶ್ರಾಂತಿ ನೀಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾರಂತ ಸೂಪರ್ ಸ್ಟಾರ್ಗಳಿಗೆ ವಿಶ್ರಾಂತಿ ನೀಡಿರುವ ನಿರ್ಧಾರ ಸದ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಸಿಸಿಐ ಬಾಸ್ಗಳು, ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ನ ತಾರತಮ್ಯದ ಬಣ್ಣ ಬಟಾಬಯಲಾಗಿದೆ.
ಎಲ್ಲರಿಗಿಂತ ಹೆಚ್ಚು ವೇತನ ನೀಡಿದ್ರೂ ರೆಸ್ಟ್ ಮೇಲೆ ರೆಸ್ಟ್!
2019ರಿಂದಲೂ ಕೂಡ ಟೀಂ ಇಂಡಿಯಾದಲ್ಲಿ ಸೂಪರ್ ಸ್ಟಾರ್ಗಳಿಗೆ ರಾಜಾತಿಥ್ಯ ನೀಡ್ತಿರೊ ಆರೋಪ ಇದೆ. ಜಸ್ಪ್ರೀತ್ ಬೂಮ್ರಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ.. ಈ ಮೂವರೂ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನ A+ ಗ್ರೇಡ್ನಲ್ಲಿದ್ದಾರೆ. ಇವ್ರಿಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿ ಹಣ ಬಿಸಿಸಿಐನಿಂದ ಸಂದಾಯವಾಗುತ್ತೆ. ಉಳಿದ ಆಟಗಾರರಿಗಿಂತ ಹೆಚ್ಚು ಸಂಬಳ ಪಡೆಯೋ ಇವ್ರಿಗೆ ಎಲ್ಲರಿಗಿಂತ ಜಾಸ್ತಿ ವಿಶ್ರಾಂತಿಯ ಮೇಲೆ ವಿಶ್ರಾಂತಿಯೂ ಸಿಗ್ತಿದೆ. ಕ್ರಿಕೆಟ್ ಆಡೋಕೆ ಕೋಟಿ ಕೋಟಿ ವೇತನ ನೀಡಿ, ರೆಸ್ಟ್ ಮೇಲೆ ರೆಸ್ಟ್ ನೀಡ್ತಿರೋದೇ ಕೆಲವರ ಕಣ್ಣು ಕೆಂಪಾಗಿಸಿದೆ. 2019ರ ಅಗಸ್ಟ್ನಿಂದ ಈವರೆಗೆ ಟೆಸ್ಟ್, ಏಕದಿನ, ಟಿ20 ಸೇರಿ 249 ಪಂದ್ಯಗಳನ್ನ ಟೀಮ್ ಇಂಡಿಯಾ ಆಡಿದೆ. ಈ ಪಂದ್ಯಗಳ ಪೈಕಿ ರೋಹಿತ್ 142, ಕೊಹ್ಲಿ 146, ಬೂಮ್ರಾ 84 ಪಂದ್ಯಗಳನ್ನ ಮಾತ್ರ ಆಡಿದ್ದಾರೆ. ಇದೂ ಸಾಲದು ಎಂಬಂತೆ ಮತ್ತೆ ದುಲೀಪ್ ಟ್ರೋಫಿಯಿಂದ ವಿಶ್ರಾಂತಿ ನೀಡಲಾಗಿದೆ. ಸೂಪರ್ ಸ್ಟಾರ್ಗಳಿಗೆ ನೀಡ್ತಿರೋ ರಾಜಾತಿಥ್ಯದ ಬಗ್ಗೆ ಮಾಜಿ ಕ್ರಿಕೆಟಿಗ, ಹಾಲಿ ವಿಶ್ಲೇಷಕ ಸಂಜಯ್ ಮಾಂಜ್ರೇಕರ್ ಪ್ರಶ್ನಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರೋಹಿತ್ ಶರ್ಮಾ ಶೇಕಡಾ 59ರಷ್ಟು ಪಂದ್ಯಗಳನ್ನ ಆಡಿದ್ದಾರೆ. ವಿರಾಟ್ ಕೊಹ್ಲಿ ಶೇಕಡಾ 61ರಷ್ಟು ಮತ್ತು ಬೂಮ್ರಾ ಶೇಕಡಾ 34ರಷ್ಟು ಪಂದ್ಯಗಳನ್ನ ಆಡಿದ್ದಾರೆ. ನಾನು ಇವರನ್ನ ತುಂಬಾ ವಿಶ್ರಾಂತಿ ಪಡೆದವರು ಎಂದು ಭಾವಿಸುತ್ತೇನೆ. ದುಲೀಪ್ ಟ್ರೋಫಿಗೆ ಇವರನ್ನ ಆಯ್ಕೆ ಮಾಡಬಹುದಿತ್ತು ಎಂದು ಕಿಡಿ ಕಾರಿದ್ದಾರೆ.
ಇನ್ನು ಸಂಜಯ್ ಮಾಂಜ್ರೇಕರ್ ಮಾತ್ರವಲ್ಲ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇಂಜುರಿ ಕಾರಣದಿಂದ ಬೂಮ್ರಾಗೆ ವಿಶ್ರಾಂತಿ ನೀಡೋದ್ರಲ್ಲಿ ಅರ್ಥ ಇದೆ. ಆದ್ರೆ ಕೊಹ್ಲಿ-ರೋಹಿತ್ಗೆ ವಿಶ್ರಾಂತಿ ಯಾಕೆ ಬೇಕಿತ್ತು. 30 ವರ್ಷದ ಗಡಿ ದಾಟಿದ ಬಳಿಕ ರೆಗ್ಯುಲರ್ ಕ್ರಿಕೆಟ್ನ ಅಗತ್ಯವಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕೊನೆಯದಾಗಿ ಟೆಸ್ಟ್ ಕ್ರಿಕೆಟ್ ಆಡಿದ್ರು. ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಇಂಗ್ಲೆಂಡ್ ವಿರುದ್ಧ ಆಡಿದ್ದೇ ಕೊನೆ. ಆ ಬಳಿಕ ಸತತ ವೈಟ್ ಬಾಲ್ ಕ್ರಿಕೆಟ್ ಆಡಿರೋ ಇವರು ನೇರವಾಗಿ ಟೆಸ್ಟ್ ಸರಣಿಗೆ ಕಮ್ಬ್ಯಾಕ್ ಮಾಡಲಿದ್ದಾರೆ. ದೀರ್ಘಕಾಲದಿಂದ ದೂರ ಉಳಿದಿರೋ ಇವರು ಕಮ್ಬ್ಯಾಕ್ ಸರಣಿಯಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದೇ ಆಕ್ರೋಶಕ್ಕೆ ಕಾರಣ ಆಗಿದೆ.