ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ – ಮನೆ ಮುಂದಿನ ವಾಹನ ಪಾರ್ಕಿಂಗ್‌ಗೂ ಟ್ಯಾಕ್ಸ್ ಬರೆ!

ರಾಜ್ಯ ಸರ್ಕಾರ ಹಾಲು , ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಿಬಿಎಂಪಿ ವಾಹನ ಪಾರ್ಕಿಂಗ್ ಮಾಡಿದ್ದಕ್ಕೂ ಟ್ಯಾಕ್ಸ್ ಹಾಕಲು ಮುಂದಾಗಿದೆ.
ಇದನ್ನೂ ಓದಿ:ತವರು ಮೈದಾನದಲ್ಲೇ ಸೋತ ಬೆಂಗಳೂರು- RCB ಹ್ಯಾಟ್ರಿಕ್ ಗೆಲುವಿನ ಕನಸಿಗೆ ಕೊಳ್ಳಿ
ಬೆಂಗಳೂರಿಗರಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಇದೀಗ ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ವಸತಿ ಸ್ವತ್ತುಗಳಿಗೆ ಚದರ ಅಡಿಗೆ 2 ರೂ. ಹಾಗೂ ಕಮರ್ಷಿಯಲ್ ಸಂಸ್ಥೆಗಳಿಗೆ ಚದರ ಅಡಿಗೆ 3 ರೂ.ಯೆಂದು ನಿರ್ಧರಿಸಿದೆ.
ಪಾರ್ಕಿಂಗ್ ಗೆ ಟ್ಯಾಕ್ಸ್ ವಿಧಿಸುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ದರೂ 2 ರೂ. ದರ ನಿಗದಿ ಮಾಡಲಾಗಿದೆ. ಈ ಹೊಸ ಪಾರ್ಕಿಂಗ್ ನೀತಿಯಿಂದ 45 ಕೋಟಿ ರೂ. ನಷ್ಟವಾಗಲಿದೆ. ಒಂದು ವೇಳೆ ಈ ನೀತಿಗೆ ಆಕ್ಷೇಪಣೆಗಳು ಹೆಚ್ಚಾಗಿ ಬಂದರೆ ಪಾರ್ಕಿಂಗ್ ನೀತಿ ಬದಲಾಗಬಹುದು ಎಂದು ಹೇಳಿದ್ದಾರೆ.