ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ – ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಪದೇ ಪದೇ ಅಗ್ನಿ ದುರಂತ ಸಂಭವಿಸುತ್ತಲೇ ಇದೆ. ಸಾಲು ಸಾಲು ಅಗ್ನಿ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಕಿನ ಹಬ್ಬ ದೀಪಾವಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಂಕಿ ಅವಘಡ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ದೀಪಾವಳಿ ಹಬ್ಬದ ಆಚರಣೆಗೆ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ದೀಪಾವಳಿಗೆ ಎಲ್ಲೆಂದರಲ್ಲೇ ಮಳಿಗೆ ತೆರೆಯುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಕಂಟಕ! – ಉಸಿರಾಡುವ ಗಾಳಿಯಿಂದಲೇ ಜೀವಕ್ಕೆ ಆಪತ್ತು!
ನಗರದಲ್ಲಿ ದೀಪಾವಳಿಗೆ ಗುರುತಿಸಿರುವ ಜಾಗದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಮಳಿಗೆ ಓಪನ್ ಮಾಡಲು ಸೂಚಿಸಲಾಗಿದೆ. ಅದರಂತೆ ವಲಯಗಳಲ್ಲಿ ಪಟಾಕಿ ಮಳಿಗೆ ತಯಾರಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನ ಸಹ ಹಾಕಲಾಗಿದೆ. ಇದರ ಜೊತೆಗೆ ವಲಯದಲ್ಲಿ ಕೆಲವು ಮೈದಾನದಲ್ಲಿ ಮಾತ್ರ ಮಳಿಗೆ ತೆರೆಯಲು ಅವಕಾಶ ಕೊಡಬೇಕು, ಎಲ್ಲೆಂದರಲ್ಲಿ ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಆ ಬಗ್ಗೆ ಜಂಟಿ ಆಯುಕ್ತರು ವರದಿ ಸಿದ್ಧಪಡಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಾಗೃತಿ ಕ್ರಮಗಳನ್ನ ಜಾರಿಗೊಳಿಸಿದೆ..
ಪಟಾಕಿ ಸಿಡಿಸಲು ಎಲ್ಲಿ ಅನುಮತಿ ಇಲ್ಲ?
- ಧಾರ್ಮಿಕ ಮೈದಾನಗಳು
- ಶಾಲಾ ಕಾಲೇಜ್ ಮೈದಾನಗಳು
- ರಕ್ಷಣಾ ಇಲಾಖೆ ಮೈದಾನಗಳು
- ಕೇಂದ್ರ , ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆಗಳು
- ಖಾಸಗಿ ಮೈದಾನ
ಇಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ
- ಬಿಬಿಎಂಪಿ ಗುರುತಿಸಿರೋ ಮೈದಾನ
- ಪ್ರತಿ ವಲಯದಲ್ಲಿ ಎರಡು ಅಥವಾ ಮೂರು ಮೈದಾನದಲ್ಲಿ ಮಾರಾಟ.
- ಒಂದು ಮೈದಾನದಲ್ಲಿ 10 ಮಳಿಗೆಗಳು ಓಪನ್ ಮಾತ್ರ.
- ಪ್ರತಿ ಮಳಿಗೆಯ ನಡುವೆ 3 ರಿಂದ 4 ಅಡಿ ಅಂತರ ಇರಬೇಕು.
- ಪಟಾಕಿ ಮಳಿಗೆ ಬೆಂಕಿ ನಂದಿಸುವ ಉಪಕರಣ ಕಡ್ಡಾಯವಾಗಿ ಇರಬೇಕು
- ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು
- ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದ್ರೆ ದಂಡ.