ಬಿಗ್ ಬಾಸ್ ಪ್ರತಾಪ್ ಗೆ ಕಾನೂನು ಸಂಕಷ್ಟ – ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸುವುದಾಗಿ ಬಿಬಿಎಂಪಿ ಅಧಿಕಾರಿ ನೋಟಿಸ್

ಬಿಗ್ ಬಾಸ್ ಪ್ರತಾಪ್ ಗೆ ಕಾನೂನು ಸಂಕಷ್ಟ – ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸುವುದಾಗಿ ಬಿಬಿಎಂಪಿ ಅಧಿಕಾರಿ ನೋಟಿಸ್

ಬಿಗ್​ಬಾಸ್​​ ಮನೆಗೆ ಹೋದ ಬಳಿಕ ಡ್ರೋನ್ ಪ್ರತಾಪ್ ಬಗ್ಗೆ ಇದ್ದ ಜನರ ಅಭಿಪ್ರಾಯ ಬದಲಾಗಿದೆ. ಪ್ರತಾಪ್ ಕೂಡ ಉತ್ತಮವಾಗಿ ಆಟವಾಡುತ್ತಿದ್ದು ಫಿನಾಲೆಗೆ ಬರುವ ಎಲ್ಲಾ ಚಾನ್ಸಸ್ ಇದೆ. ಆದ್ರೀಗ ಡ್ರೋನ್ ವಿರುದ್ಧ BBMP ಅಧಿಕಾರಿ ಡಾ.ಪ್ರಯಾಗ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಆವರಿಸಿಕೊಂಡಿದೆ ಚಳಿ.. ಆಗಾಗ ಬೀಳುತ್ತಿದೆ ಮಳೆ – ಕರ್ನಾಟಕ ಈಗ ಥಂಡಾ ಥಂಡಾ ಕೂಲ್.. ಕೂಲ್..

ಬಿಗ್​ಬಾಸ್​​ ಸ್ಪರ್ಧಿ ಡ್ರೋನ್ ಪ್ರತಾಪ್​ಗೆ ಹೊಸ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಕೆಲವೊಂದು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ಕ್ವಾರಂಟೈನ್ ವೇಳೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರು. ಮೆಂಟಲಿ ಅನ್‌ಸ್ಟೇಬಲ್ ಎಂದು ಬರೆದುಕೊಡು ಅಂತಾ ನನ್ನ ಪಾಸ್‌ಪೋರ್ಟ್‌, ಐಪ್ಯಾಡ್‌ ಕಿತ್ತುಕೊಂಡರು. ನೋಡಲ್ ಅಧಿಕಾರಿಯೊಬ್ಬರು ನನ್ನ ತಲೆ ಮೇಲೆ ಹೊಡೆದಿದ್ದರು ಎಂದು ಪ್ರತಾಪ್ ಕಣ್ಣೀರಿಟ್ಟಿದ್ದರು. ಆಗ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಡಾಕ್ಟರ್ ಪ್ರಯಾಗ್ ಅವರು ಪ್ರತಾಪ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ನೋಟಿಸ್​ ತಲುಪಿದ ಒಂದು ತಿಂಗಳ ಒಳಗೆ ಬಹಿರಂಗ ಹಾಗೂ ಲಿಖಿತವಾಗಿ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಕೀಲರ ಮೂಲಕ ನೋಟಿಸ್​ ಕಳುಹಿಸಿದ್ದಾರೆ.

Shantha Kumari