ನಾಯಿ ಸಾಕಾಣಿಕೆಗೂ ಬಂತು ಹೊಸ ರೂಲ್ಸ್! – ಹೊಸ ನಿಯಮಗಳೇನು?
ಬೆಂಗಳೂರು: ಸಿಲಿಕಾನ್ ಬೆಂಗಳೂರಿನಲ್ಲಿ ಅನೇಕ ಜನರು ನಾಯಿ ಸಾಕುತ್ತಿದ್ದಾರೆ. ಕೆಲವರು ನಾಯಿಗಳು ಕೀತಲೆ ಜಾಸ್ತಿ ಆಗುತ್ತಿದೆ ಎಂದು ಬೀದಿಯಲ್ಲಿ ಬಿಟ್ಟುಹೋಗುತ್ತಿದ್ದಾರೆ. ಇದೀಗ ನಾಯಿ ಸಾಕುವ ಜನರಿಗೆ ಬಿಬಿಎಂಪಿ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅನೇಕರು ನಾಯಿ ಸಾಕುತ್ತಾರೆ. ಕೆಲವರು ನಾಯಿಗಳನ್ನು ಸಾಕಿ ಮಾರಾಟ ಮಾಡುವುದನ್ನೇ ದಂದೆಯಾಗಿ ಪರಿವರ್ತಿಸಿಕೊಂಡಿದ್ದಾರೆ. ನಾಯಿ ಸಾಕಾಣಿಕೆಯಲ್ಲಿ ಮತ್ತು ಮಾರಾಟ ಮಾಡುವಲ್ಲಿ ಅವ್ಯವಹಾರ ಆಗುತ್ತಿದೆ ಎಂಬ ದೂರು ಕೇಳಿಬರುತ್ತಿರುವ ಹಿನ್ನೆಲೆ ಬಿಬಿಎಂಪಿ ಹೊಸ ರೂಲ್ಸ್ ಜಾರಿಗೆ ತರೋಕೆ ಪ್ಲ್ಯಾನ್ ಮಾಡಿದೆ. ಮನೆಯಲ್ಲಿ ಒಂದೇ ಒಂದು ನಾಯಿ ಸಾಕಿದ್ದರೂ ಈ ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ. ಈ ಹೊಸ ನಿಯಮಗಳನ್ನ ಜಾರಿಗೊಳಿಸುವ ಪ್ರಸ್ತಾವನೆಯನ್ನ ಬಿಬಿಎಂಪಿ ಸರ್ಕಾರದ ಮುಂದಿಟ್ಟಿದ್ದು, ಯಾವಾಗ ಅನುಷ್ಠಾನಕ್ಕೆ ಬರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರ್ಜರಿ ತಯಾರಿ – ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಗಣತಿ ಆಗಿದ್ದು, ನಾಯಿಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ಆದ್ದರಿಂದ ಸಾಕಾಣಿಕೆಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಹೊಸ ನಿಯಮಗಳೇನು?
- ನಾಯಿ ಸಾಕಣೆ, ಮಾರಾಟಕ್ಕೆ ಲೈಸೆನ್ಸ್ (ಪರವಾನಗಿ) ಕಡ್ಡಾಯ.
- ಮನೆಯಲ್ಲಿ ಮತ್ತು ಮಾರಾಟ ಕೇಂದ್ರದ ಶ್ವಾನಗಳಿಗೆ ರೇಬಿಸ್ ಲಸಿಕೆ ಕಡ್ಡಾಯ.
- ಮನೆಗೆ ಒಂದೇ ನಾಯಿ ಸಾಕಬೇಕು.
- ನಾಯಿಯನ್ನ ಸಾಕಿ ಬೀದಿಗೆ ಬಿಡುವಂತಿಲ್ಲ.
- ಪ್ರತಿ ತಿಂಗಳು ನಾಯಿಗೆ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು.