ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಹೇಮಂತ್ ಕುಮಾರ್ ಯುಟರ್ನ್ – ಭಾವುಕ ಹೇಳಿಕೆಗೆ ಡಿಕೆಶಿ ಬಳಿ ಕ್ಷಮೆಯಾಚನೆ

ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಹೇಮಂತ್ ಕುಮಾರ್ ಯುಟರ್ನ್ – ಭಾವುಕ ಹೇಳಿಕೆಗೆ ಡಿಕೆಶಿ ಬಳಿ ಕ್ಷಮೆಯಾಚನೆ

ಬಿಬಿಎಂಪಿ ಗುತ್ತಿಗೆದಾರರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪವನ್ನು ಭಾವುಕನಾಗಿ ಮಾಡಿದೆ. ಇದನ್ನೇ ವಿರೋಧ ಪಕ್ಷದವರು ದಾಳವನ್ನಾಗಿ ಮಾಡಿಕೊಂಡಿದ್ದಾರೆ. ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂಬ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ , ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಹೇಮಂತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರು ಸ್ವಾರ್ಥ ಹಾಗೂ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ – ಸಿಎಂ ಸಿದ್ದರಾಮಯ್ಯ

ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಹೇಮಂತ್ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎನ್ನುವ ಹೇಳಿಕೆ ಹಿಂಪಡೆಯುತ್ತೇನೆ. ನಾನು ಹೇಳಿಕೆ ನೀಡಿದ್ದು ತಪ್ಪು, ಇದಕ್ಕೆ ಕ್ಷಮೆ ಕೋರುತ್ತೇನೆ. ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. SIT ತನಿಖೆ ಬಗ್ಗೆ ಮಾಹಿತಿ ಬಂತು. ಹಾಗಾಗಿ ಭಾವುಕನಾಗಿ ಹೇಳಿದೆ. ಆ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನ ಹೇಳಿಕೆಯನ್ನ ಇಲ್ಲಿಗೆ ಬಿಟ್ಟುಬಿಡಿ ಮನವಿ ಮಾಡಿದರು. ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಮೇಲೆ ಎಮೋಷನ್. ಅವರ ಎಮೋಷನ್ ಬಗ್ಗೆ ಮಾತನಾಡಿದ್ದೇನೆ. ಅದು ತಪ್ಪು ಎಂದು ಎಲ್ಲರೂ ಹೇಳಿದ್ರು. ನನ್ನ ಕಷ್ಟಗಳಿಂದ ಅದನ್ನೇ ಇಟ್ಟುಕೊಂಡು ನಾನೂ ಸತ್ಯ ಮಾಡಲಿ ಅಂತ ಭಾವೋದ್ವೇಗಕ್ಕೊಳಗಾಗಿ ಹೇಳಿದೆ. ಆ ವಿಡಿಯೋ ವೈರಲ್ ಆಯ್ತು. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎನ್ನುವುದಕ್ಕೆ ಯಾವುದೇ ಒತ್ತಡ ಇರಲಿಲ್ಲ. ಮಧ್ಯವರ್ತಿಗಳು ಈ ರೀತಿ ಆಗುವಂತೆ ಮಾಡಿದ್ದಾರೆ. ಇದನ್ನ ನೋಡಿ ನನಗೆ ಬೇಜಾರಾಗಿದ್ದು, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದರು. ಗುತ್ತಿಗೆದಾರರ ಹೇಮಂತ್ ಅವರು ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಬಗ್ಗೆ ಬಿಜೆಪಿ ಎಂಎಲ್ಸಿ ರವಿ ಕುಮಾರ್ ಪ್ರತಿಕ್ರಿಯಿಸಿ, ಬಿಬಿಎಂಪಿ ಗುತ್ತಿಗೆದಾರರು 15% ಕಮೀಷನ್ ಆರೋಪ ಮಾಡಿದ್ದು, ರಾಜ್ಯಪಾಲರು, ಬೊಮ್ಮಾಯಿ, ಯಡಿಯೂರಪ್ಪ, ನಮ್ಮ ಮಾಜಿ ಮಂತ್ರಿಗಳ ಬಳಿ ಹೋಗಿ ಮನವಿ ಪತ್ರ ಕೊಟ್ಟಿದ್ದರು. ಈಗ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದಾರೆ. ಇದನ್ನು ಯಾರು ನಂಬುತ್ತಾರೆ.. ಗುತ್ತಿಗೆದಾರರಿಗೆ ಕಾಂಗ್ರೆಸ್ನವರು ಬೆದರಿಕೆ ಹಾಕಿರಬೇಕು ಅದಕ್ಕೆ ಅವರು ಹೆದರಿರಬೇಕು ಎಂದರು.

suddiyaana