ಗೌತಮಿ ಕೈಗೊಂಬೆಯಾದ ಮಂಜು.. ಗೌತಮಿ Positivity ಪುಂಗವ್ವ! – ವೀಕ್ಷಕರಿಗೆ ಗೆಳೆಯ – ಗೆಳತಿ ಕಿರಿಕಿರಿ
ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಭಿನ್ನಮತ ಸ್ಫೋಟಗೊಂಡಿದೆ. ಟಾಸ್ಕ್, ಫ್ರೆಂಡ್‌ಶಿಪ್ ವಿಚಾರವಾಗಿ ಮೋಕ್ಷಿತಾ ಒತ್ತಡಕ್ಕೊಳಗಾಗಿದ್ದಾರೆ. ಮೋಕ್ಷಿತಾಗೆ ಪದೇ ಪದೇ ಹರ್ಟ್ ಮಾಡ್ತಾ ಮಂಜು ಹಾಗೂ ಗೌತಮಿ ಆರಾಮಾಗಿ ಇದ್ದಾರೆ.. ಅಷ್ಟೇ ಅಲ್ಲ, ಮೋಕ್ಷಿತಾ ದೂರ ಆಗ್ತಾ ಇದ್ದಂತೆ ಗೌತಮಿ ಮಂಜುಗೆ ಫುಲ್ ಕ್ಲೋಸ್ ಆಗ್ತಾ ಇದ್ದಾರೆ. ಇದು ದೊಡ್ಮನೆಯಲ್ಲಿ ನಡಿತಾ ಇರೋ ಬೆಳವಣಿಗೆ ಆದ್ರೆ, ಮನೆಯ ಹೊರಗೂ ಹೊಸ ಬೆಳವಣಿಗೆ ನಡಿತಾ ಇದೆ. ಅದ್ಯಾಕೋ ವೀಕ್ಷಕರು ಗೌತಮಿ ನಡೆ ವಿರುದ್ಧ ಕೆಂಡ ಕಾರ್ತಾ ಇದ್ದಾರೆ. ಪಾಸಿಟಿವಿಟಿ ಅಂದ್ರೆ ಇದೇನಾ? ನಿಮ್ಮ ನಡೆ ಸರಿ ಇಲ್ಲ ಅಂತಾ ಕಮೆಂಟ್ ಮಾಡ್ತಿದ್ದಾರೆ.. ಅಷ್ಟೇ ಅಲ್ಲ ಮಂಜು ಗೌತಮಿ ಟ್ರೋಲ್ ಪೇಜ್ ಗಳಿಗೂ ಆಹಾರ ಆಗ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ವೀಕ್ಷಕರು ಗೌತಮಿ ಮೇಲೆ ಸಿಟ್ಟಾಗಿದ್ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ
ದೊಡ್ಮನೆಯ ಆಟದ ವರಸೆ ದಿನದಿಂದ ದಿನಕ್ಕೆ ಬದಲಾಗ್ತಾ ಹೋಗ್ತಿದೆ. ಆರಂಭದಲ್ಲಿ ಫ್ರೆಂಡ್ಸ್, ಫ್ರೆಂಡ್ಸ್ ಅಂತಾ ಹೇಳ್ತಾ ಇದ್ದವರೆಲ್ಲಾ ಈಗ ದುಷ್ಮನ್ ಗಳಾಗ್ತಿದ್ದಾರೆ. ಗೌತಮಿ ಜಾಧವ್, ಮೋಕ್ಷಿತಾ ಪೈ, ಉಗ್ರಂ ಮಂಜು ಕ್ಲೋಸ್ ಫ್ರೆಂಡ್ಸ್ ಆಗಿದ್ರು.. ಏನೇ ಆದ್ರೂ ಜೊತೆಯಲ್ಲಿದ್ದು ಆಟ ಆಡೋಣ ಅಂತಾ ಹೇಳ್ತಾ ಬಂದಿದ್ರು.. ಆದ್ರೆ ಮೋಕ್ಷಿತಾ ಈ ಗ್ರೂಪ್ ನಿಂದ ಎಕ್ಸಿಟ್ ಆಗಿದ್ದಾರೆ.. ಮಂಜು ಹಾಗೂ ಗೌತಮಿ ವರ್ತನೆಗೆ ಬೇಸತ್ತು ಫ್ರೆಂಡ್‌ಶಿಪ್ ಕಟ್ ಮಾಡ್ಕೊಂಡಿದ್ದಾರೆ.. ಹೌದು, ಮೂರು ಜನರ ಮಧ್ಯೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಂಗ್ ಇತ್ತು. ಆದ್ರೀಗ, ಮಂಜು ಹಾಗೂ ಗೌತಮಿ ಇಂದ ಮೋಕ್ಷಿತಾ ಪೈ ದೂರಾಗಿದ್ದಾರೆ. ಮಂಜು, ಗೌತಮಿ ಹಾಗೂ ಮೋಕ್ಷಿತಾ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಅದರಲ್ಲೂ ಮಹಾರಾಜ – ಯುವರಾಣಿ ಟಾಸ್ಕ್‌ನಲ್ಲಿ ಆ ಭಿನ್ನಾಭಿಪ್ರಾಯ ಇನ್ನಷ್ಟು ತಾರಕಕ್ಕೆ ಏರಿದೆ. ಮುಂಜು ಗೌತಮಿ ವರ್ತನೆ ವಿರುದ್ಧ ಕಿಡಿ ಕಾರ್ತಾ ಇದ್ದಾರೆ ಮೋಕ್ಷಿತಾ.. ಆದ್ರೀಗ ದೊಡ್ಮನೆಯಲ್ಲಿ ಬೇರೆ ಏನೋ ನಡಿತಾ ಇದೆ ಅನ್ನೋದು ವೀಕ್ಷಕರ ಅಭಿಪ್ರಾಯ. ರವಿ ಕಾಣದ್ದನ್ನ ಕವಿ ಕಂಡ ಅಂತಾರಲ್ಲ.. ಹಾಗೇ ವೀಕ್ಷಕರು ಕೂಡ ಎಲ್ಲವನ್ನ ನೋಟಿಸ್ ಮಾಡ್ತಾ ಇರ್ತಾರೆ.. ಇದೀಗ ಗೌತಮಿ ವರ್ತನೆ ವಿರುದ್ಧ ಕಿಡಿ ಕಾರ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕಿಡಿ ಕಾರ್ತಾ ಇದ್ದಾರೆ.
ಈ ಹಿಂದೆ ಧನರಾಜ್ ಆಚಾರ್ ತಮಾಷೆಗೆಂದು ಗೌತಮಿ ಮೇಲೆ ಪಿಲ್ಲೋ ಎಸೆದಿದ್ರು.. ಇದು ಗೌತಮಿ ಸಿಟ್ಟು ತರಿಸಿತ್ತು.. ನಾಮಿನೇಷನ್ ಪ್ರಕ್ರಿಯೆಯಲ್ಲೂ ಗೌತಮಿ ಈ ಬಗ್ಗೆ ಮಾತನಾಡಿದ್ರು.. ಬೇರೆ ಗಂಡಸರು ನನ್ನ ಮೈ ಮುಟ್ಟಿದ್ರೆ ನನಿಗೆ ಸಿಟ್ಟು ತರುತ್ತೆ.. ಆಗಲೂ ಪಾಸಿಟಿವಿಟಿ ಅಂತಾ ಹೇಳ್ಕೊಂಡು ಇರ್ಬೇಕಾ ಅಂತ ಧನರಾಜ್ ವಿರುದ್ಧ ಕಿಡಿಕಾರಿದ್ರು.. ಕಳೆದ ಬಾರಿ ಇಷ್ಟೆಲ್ಲಾ ಭಾಷಣ ಬಿಗಿದಿದ್ದ ಗೌತಮಿ ಈಗ ಮಾಡ್ತಿರೋದೇನು ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಾ ಇದ್ದಾರೆ.. ಮಂಜಣ್ಣನ ಮೈ, ಕೈ ಮುಟ್ಟಿಕೊಂಡು ಇರೋದು ಪಾಸಿಟಿವಿಟಿನಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ.
ಈ ವಾರ ‘ಬಿಗ್ ಬಾಸ್’ ಮನೆಗೆ ಮಂಜು ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಸಾಮ್ರಾಜ್ಯ ಟಾಸ್ಕ್ ಕೊಡಲಾಗಿದ್ದು, ಇದರ ಅನುಸಾರ ಮಂಜು ಮಹಾರಾಜನ ಪಟ್ಟಕ್ಕೇರಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ಕೊಟ್ಟಿದ್ದು, ಮಹಾರಾಜನ ಕುರ್ಚಿಗೆ ಕಂಟಕ ಆಗುವ ಹಾಗೆ ಯುವರಾಣಿಯನ್ನ ಪರಿಚಯಿಸಿದ್ದು, ಯುವರಾಣಿ ಸ್ಥಾನವನ್ನ ಮೋಕ್ಷಿತಾ ಪೈ ಅಲಂಕರಿಸಿದ್ದಾರೆ. ಮೋಕ್ಷಿತಾ ಪೈ ಯುವರಾಣಿ ಪಟ್ಟಕ್ಕೆ ಏರಿದ್ಮೇಲೆ ಮಂಜು ಮತ್ತು ಗೌತಮಿ ಜಿದ್ದಿಗೆ ಬಿದ್ದಿರುವ ಹಾಗಿದೆ. ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ದಾರೆ.. ಮೋಕ್ಷಿತಾ ದೂರವಾಗ್ತಿದ್ದಂತೆ ಉಗ್ರಂ ಮಂಜುಗೆ ಇನ್ನಷ್ಟು ಹತ್ತಿರವಾಗಿದೆ ಪಾಸಿಟಿವಿಟಿ! ಇದೀಗ ಮಂಜು ಹಾಗೂ ಗೌತಮಿಗೆ ವೀಕ್ಷಕರು ಪ್ರಶ್ನೆ ಮಾಡ್ತಾ ಇದ್ದಾರೆ.
ಹೌದು, ಗೌತಮಿ ಸ್ಪಷ್ಟವಾಗಿ ಉಗ್ರಂ ಮಂಜು ಅವರ ಕಡೆಗೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಸನ್ನಿವೇಶದಲ್ಲಿ ಗೌತಮಿ ಅವರು ಮಂಜು ಅವರ ಜತೆಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ಬಿಗ್ ಸಾಮ್ರಾನ್ಯ ಟಾಸ್ಕ್‌ನಲ್ಲಿ ಮಂಜು ಎಲ್ಲ ವಿಚಾರಕ್ಕೂ ಗೌತಮಿಯನ್ನೇ ಕರೆಸಿ ಸೇವೆ ಮಾಡಿಸಿಕೊಳ್ಳುತ್ತಾ ಇದ್ರು.. ಗೌತಮಿ ಮಂಜುಗೆ ಮಸಾಜ್ ಮಾಡೋದು, ತಿಲಕ ಇಡಲೂ ಗೌತಮಿಯೇ ಬೇಕಿತ್ತು.. ಇದೆಲ್ಲಾ ನೋಡಿದ ವೀಕ್ಷಕರ ಕಣ್ಣು ಕೆಂಪಾಗಿದೆ. ಬೇರೆ ಗಂಡಸರು ಮೈ ಕೈ ಮುಟ್ಟಿದ್ರೆ ನನಿಗೆ ಅಗಲ್ಲ ಎಂದವರು ಈಗ ಯಾಕೆ ಮಂಜು ಜೊತೆ ಹೀಗೆ ಮಾಡ್ತಾ ಇದ್ದೀರ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಟ್ರೋಲ್ ಕೂಡ ಮಾಡ್ತಾ ಇದ್ದಾರೆ.. ಪಾಸಿಟಿವ್ ಪಾಸಿಟಿವ್ ಅಂದು ಅಕ್ಕ ಆ ಪದದ ಕಗ್ಗೊಲೆ ಮಾಡ್ತಾವ್ಳೆ.. ನೆಗೆಟಿವ್ ನಿಂಗವ್ವ ಈಗೆ.. ಪಾಸಿಟಿವ್ ಅಂತೆ ಅಂತಾ ಒಬ್ರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇವಳನ್ನ ನೋಡಿದ್ಮೇಲೆ ಪಾಸಿಟಿವ್ ಪದದ ಅರ್ಥ ಮರೆತು ಹೋಗಿದೆ.. ಪಾಸಿಟಿವ್ ಪುಂಗವ್ವ ಅಂತಾ ಹೇಳಿದ್ದಾರೆ.. ಮತ್ತೆ ಕೆಲವರು ಅಕ್ಕ ಮಹಾರಾಜನಿಗೆ ಬಕೆಟ್ ಹಿಡಿದು ಮಹಾರಾಣಿ ಆಗಲು ತುಂಬಾ ಕಷ್ಟ ಪಡ್ತಿದ್ದಾಳೆ.. ತನ್ನ ಬಗ್ಗೆ ತಾನೇ ಬಿಲ್ಡಪ್ ತಗೊಳೋ ಏಕೈಕ ಕಂಟೆಸ್ಟೆಂಟ್, ಗೌತಮಿ ಆಡಿಸೋ ಗೊಂಬೆ ಆದ್ರಾ ಮಂಜು ಅಂತಾನೂ ಕೇಳ್ತಾ ಇದ್ದಾರೆ. ಇನ್ನೂ ಕೆಲವರು ಗೌತಮಿ ಧಾರಾವಾಹಿ ವಿಲನ್‌ಗಳಂತೆ ವರ್ತಿಸಲು ಶುರು ಮಾಡಿದ್ದಾರೆ. ಸುಖಾ ಸುಮ್ಮನೆ ಮಾತನಾಡೋದು, ಸುಮ್ಮ ಸುಮ್ಮನೆ ನಗೋದು, ನಾಟಕೀಯ ಹಾವಭಾವಗಳು ನೋಡಲು ಆಗುತ್ತಿಲ್ಲ. ನಾನ್ ಫಿಕ್ಷನ್ ಶೋ ಅಲ್ಲಿ ಒಂದು ಕಾಲ್ಪನಿಕ ಪಾತ್ರ ಆಗ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ಟ್ರೋಲ್ ಪೇಜ್ ಗಳು ಗೌತಮಿ ಹಾಗೂ ಮಂಜು ಮಾತನಾಡ್ತಿರೋದನ್ನೇ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ. ಇದ್ರಲ್ಲಿ ಗೌತಮಿ ಹಾಗೂ ಮಂಜು ಮಾತನಾಡುತ್ತಿರೋ ವಿಡಿಯೋ ಇದೆ. ಇದಕ್ಕೆ ಯಶ್ ಅಭಿನಯದ ರಾಜಾ ಹುಲಿ ಸಿನಿಮಾದ ಡೈಲಾಗ್ ಅನ್ನ ಎಡಿಟ್ ಮಾಡಲಾಗಿದೆ.. ನಾನು ನಿನ್ ಮೇಲೆ ಜೀವಾನೇ ಇಟ್ಕೊಂಡಿದ್ದೀನಿ.. ಮನೆಯವರನ್ನ ಒಪ್ಪಿಸಿ ಮದುವೆ ಆದ್ರೂ ಸರಿ, ಮನೆ ಬಿಟ್ಟು ಬಾ ಅಂದ್ರೂ ನಾನು ಎಲ್ಲದಕ್ಕೂ ರೆಡಿನೇ ಅಂತಾ ಗೌತಮಿ ಹೇಳಿದ್ದಾರೆ. ಇದಕ್ಕೆ ಏನಕ್ಕೂ ಭಯ ಪಡ್ಬೇಕು.. ಧೈರ್ಯವಾಗಿರು ಅಂತ ಮಂಜ ಹೇಳಿರುವ ಹಾಗೇ ಎಡಿಟ್ ಮಾಡಲಾಗಿದೆ.
ಒಟ್ಟಾರೆ ಈಗ ಗೌತಮಿ ಹಾಗೂ ಉಗ್ರಂ ಮಂಜು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಗೌತಮಿ ಹಾಗೂ ಮಂಜು ಬದಲಾಗ್ತಾರಾ ಅಂತಾ ಕಾದು ನೋಡ್ಬೇಕು.