ಲವ್ವಲ್ಲಿ ಬಿದ್ದ ಶಿಶಿರ್, ಐಶ್ವರ್ಯ? – ಐಶಿರ್ ಮದುವೆ ಆಗ್ತಾರಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ಕೆಲವು ತಿಂಗಳೇ ಕಳೆದಿದೆ. ಆದ್ರೂ ಈ ಸೀಸನ್ ನ ಸ್ಪರ್ಧಿಗಳು ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಶಿಂಧೋಗಿ ಲವ್ ವಿಚಾರಕ್ಕೆ ಸುದ್ದಿಯಾಗಿದ್ರು.. ದೊಡ್ಮನೆಯಿಂದ ಹೊರ ಬಂದ ಬಳಿಕ, ನಮ್ಮ ಮಧ್ಯೆ ಏನೂ ಇಲ್ಲ, ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಎಂದಿದ್ದರು. ಇವೆಲ್ಲದ್ರ ನಡುವೆ ಐಶ್ವರ್ಯ ಶಿಶಿರ್ ಕಮಿಟ್ ಆದ್ರಾ? ಅನ್ನೋ ಪ್ರಶ್ನೆ ಫ್ಯಾನ್ಸ್ ನ ಕಾಡ್ತಿದೆ. ಇದೀಗ ಈ ಜೋಡಿಗೆ ಹೊಸ ಹೆಸ್ರು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ:ದಿಗ್ಗಜರ ಎದುರಲ್ಲೇ ಬ್ಯಾಟಿಂಗ್ ವೈಭವ – ಕಾಲಿಗೆ ಬಿದ್ದು ಹೃದಯ ಗೆದ್ದ ‘ವಂಶಿ’
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪ್ರೀತಿ ಹುಟ್ಟೋದು ಕಾಮನ್ ಆಗಿದೆ. ಪ್ರತಿ ಸೀಸನ್ನಲ್ಲೂ ಒಂದಲ್ಲ ಒಂದು ಪ್ರೇಮಕತೆ ಇದ್ದೇ ಇರುತ್ತೆ. ಕೆಲವು ನಿಜಕ್ಕೂ ಪ್ರೇಮವಾಗಿದ್ದರೆ ಇನ್ನು ಕೆಲವೇ ಕೆಲವೇ ದಿನ, ವಾರದ್ದಾಗಿರುತ್ತದೆ. ಬಿಗ್ ಬಾಸ್ ಸೀಸನ್ 11 ರಲ್ಲೂ ಲವ್ ವಿಚಾರ ಸದ್ದು ಮಾಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಐಶ್ವರ್ಯಾ ಶಿಂಧೋಗಿ ಮತ್ತು ಶಿಶಿರ್ ತುಂಬಾ ಕ್ಲೋಸ್ ಆಗಿದ್ರು.. ಅವರಿಬ್ರ ಹಾವ ಭಾವ ನೋಡಿ ಇವರಿಬ್ರ ಮಧ್ಯೆ ಸಮ್‌ಥಿಂಗ್ ಸಮ್ಂಥಿಂಗ್ ಇದೆ. ಲವ್ ಮಾಡ್ತಿದ್ದಾರೆ ಅಂತಾ ಎಲ್ಲರೂ ಮಾತಾಡಿಕೊಂಡಿದ್ರು.. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ, ಈ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ್ರು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದಿದ್ದರು. ಆದ್ರೀಗ ಮತ್ತೊಮ್ಮೆ ಇವರಿಬ್ಬರ ಲವ್ ವಿಚಾರ ಸದ್ದು ಮಾಡುತ್ತಿದೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿರ್ತಿದ್ದ ಶಿಶಿರ್ ಹಾಗೂ ಐಶ್ವರ್ಯ ದೊಡ್ಮನೆಯಿಂದ ಬಂದ ಬಳಿಕ ಕೂಡ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ದೊಡ್ಮನೆಯಿಂದ ಬಂದ ಬಳಿಕ ಶಿಶಿರ್ ಹಾಗೂ ಐಶ್ವರ್ಯ ಒಟ್ಟಿಗೆ ರೀಲ್ಸ್, ಫೋಟೋ ಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ. ಅದಲ್ಲದೇ ಟೆಂಪಲ್ ರನ್ ಮಾಡಿದ್ರು, ಬಳಿಕ ಇವರಿಬ್ರು ಕೆಲ ಟೂರಿಸ್ಟ್ ಪ್ಲೇಸ್‌ಗೂ ಹೋಗಿ ಬಂದಿದ್ದಾರೆ. ಇದಿಷ್ಟೇ ಅಲ್ಲ ಈ ಜೋಡಿ ಈಗ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದಾರೆ. ಶಿಶಿರ್ ಹಾಗೂ ಐಶ್ವರ್ಯ ಹರ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಇದ್ರ ಜೊತೆ ಜೊತೆಗೆ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕಿ ಪೋಸ್ಟ್ ಮಾಡ್ತಿದ್ದಾರೆ. ಇವ್ರ ಪೋಸ್ಟ್ ನೋಡಿದ ಫ್ಯಾನ್ಸ್ ಶಿಶಿರ್ ಮತ್ತು ಐಶ್ವರ್ಯ ದೋಸ್ತಿ ಬೇರೆ ಲೆವಲ್‌ಗೆ ಇದೆ. ಇವರ ನಡುವೆ ಕುಚ್ ಕುಚ್ ನಡಿತಾ ಇದೆ. ಈ ಜೋಡಿ ಮಧ್ಯೆ ಪ್ರೀತಿ ಚಿಗುರಿದೆ. ಆದಷ್ಟು ಬೇಗ ಈ ಜೋಡಿ ಮದ್ವೆ ಆಗ್ಬೋದು ಅಂತಾ ಹೇಳ್ತಿದ್ದಾರೆ. ಆದರೆ, ಐಶ್ವರ್ಯ ಆಗ್ಲೀ ಶಿಶಿರ್ ಆಗ್ಲೀ ನಾವು Committed ಅಂತ ಎಲ್ಲೂ ಹೇಳಿಕೊಂಡಿಲ್ಲ. ಹಾಗಂತ ಇವರು ಕೇವಲ ಫ್ರೆಂಡ್ಸ್ ಅಂತ ಅದ್ಯಾಕೋ ಅನಿಸೋದೇ ಇಲ್ಲ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹವಾ ಕ್ರಿಯೇಟ್ ಮಾಡ್ತಿದ್ದಂತೆ ಶಿಶಿರ್ ಹಾಗೈ ಐಶ್ವರ್ಯಗೆ ಹೊಸ ಹೆಸ್ರಿಟ್ಟಿದ್ದಾರೆ. ಈ ಕ್ಯೂಟ್ ಜೋಡಿದೆ ಐಶಿರ್ ಅಂತಾ ಹೆಸ್ರಿಟ್ಟಿದ್ದಾರೆ. ಐಶಿರ್ ಅಂದ್ರೆ ಐಶ್ವರ್ಯ ಹೆಸ್ರಿನ ಮೊದಲ ಅಕ್ಷರ ಹಾಗೇ ಶಿಶಿರ್ ಹೆಸ್ರಿನ ಕೊನೆಯ ಎರಡು ಅಕ್ಷರಗಳನ್ನ ಜೋಡಿಸಿ ಐಶಿರ್ ಅಂತಾ ನಾಮಕರಣ ಮಾಡಿದ್ದಾರೆ. ಇದೀಗ ಇದೇ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ನ ಕ್ರಿಯೇಟ್ ಮಾಡಿದ್ದಾರೆ. ಇವ್ರ ಫೋಟೋ ವಿಡಿಯೋವನ್ನ ಅಪ್‌ಲೋಡ್ ಮಾಡ್ತಿದ್ದಾರೆ.