BBKಯಿಂದ ರಕ್ಷಿತಾ ಶೆಟ್ಟಿ OUT? – ಫಸ್ಟ್ ಡೇ ELIMINATION ಯಾಕೆ?

19 ಜನ ಸ್ಪರ್ಧಿಗಳು.. ಡಿಫ್ರೆಂಟ್ ಬ್ಯಾಕ್ರೌಂಡ್.. ವಿಭಿನ್ನ ಮನಸ್ಥಿತಿ.. 100ಕ್ಕೂ ಹೆಚ್ಚು ದಿನ.. ಎಸ್ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿದ್ದು, ದೊಡ್ಮನೆಯ ಆಟಕ್ಕೆ ಸ್ಪರ್ಧಿಗಳನ್ನ ಕಿಚ್ಚ ಸುದೀಪ್ ಬರಮಾಡಿಕೊಂಡಿದ್ದಾರೆ. ಆದ್ರೀಗ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ದೊಡ್ಮನೆಯಿಂದ ಸ್ಪರ್ಧಿಯೊಬ್ಬರಿಗೆ ಗೇಟ್ ಪಾಸ್ ನೀಡಲಾಗ್ತಿದೆ.
ಇದನ್ನೂ ಓದಿ: ಕುಪ್ವಾರಾದಲ್ಲಿ ಭಾರತೀಯ ಸೇನೆಯ ಮಿಂಚಿನ ಕಾರ್ಯಾಚರಣೆ- ಇಬ್ಬರು ಉಗ್ರರು ಫಿನಿಶ್
ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಆಗಿದೆ. ಈ ಸೀಸನ್ ನಲ್ಲಿ ಕಾಮನ್ ಮ್ಯಾನ್ಗಳಿಗೂ ಅವಕಾಶ ನೀಡಲಾಗಿದೆ. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿಗಳು ಕೂಡ ದೊಡ್ಮನೆಗೆ ಬಂದಿದ್ದಾರೆ. ಕಳೆದ ಸೀಸನ್ ನಲ್ಲಿ ಸ್ವರ್ಗ, ನರಕ ಕಾನ್ಸೆಪ್ಟ್ ಇತ್ತು. ಈ ಬಾರಿ ಒಂಟಿ, ಜಂಟಿ ಕಾನ್ಸೆಪ್ಟ್ ಮಾಡಲಾಗಿದೆ. ಹೆಚ್ಚು ವೋಟ್ ಬಂದ ಸ್ಪರ್ಧಿಗಳು ಒಂಟಿಯಾಗಿ ದೊಡ್ಮನೆಗೆ ಕಾಲಿಟ್ರೆ, ಕಡಿಮೆ ವೋಟ್ ಬಂದವರು ಸಹ ಸ್ಪರ್ಧಿ ಜೊತೆ ಕೈಗೆ ಹಗ್ಗ ಕಟ್ಟಿಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಒಟ್ಟು 19 ಸ್ಪರ್ಧಿಗಳು ಈ ಸೀಸನ್ ನಲ್ಲಿ ಭಾಗವಹಿಸ್ತಿದ್ದಾರೆ. ಆದ್ರೀಗ ಆಟ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ.ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಸ್ಪರ್ಧಿಯೊಬ್ರು ಔಟ್ ಆಗಲಿದ್ದಾರೆ.
ಪ್ರೋಮೋದಲ್ಲಿ ಬಿಗ್ ಬಾಸ್ ಧ್ವನಿ ಕೇಳಿಸಿದೆ. ಇದು ಬಿಗ್ ಬಾಸ್.. ನಾ ಬಂದಿರೋ ಉದ್ದೇಶ ಸ್ವಾಗತ ಮಾಡೋದಿಕ್ಕಲ್ಲ.. ನಿಮ್ಮಲ್ಲಿ ಒಬ್ರಿಗೆ ವಿದಾಯ ಹೇಳೋದಿಕ್ಕಲ್ಲ. ನಿಮ್ಮಲ್ಲಿ ಒಬ್ಬರನ್ನ ಆಯ್ಕೆ ಮಾಡಿ ಎಂದಿದ್ದಾರೆ. ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದಿದ್ದಾರೆ. ಅಷ್ಟೊತ್ತಿಗೆ, ಮಾಳು ಈ ಮನೆಯಲ್ಲಿ ಎರಡ್ಮೂರು ದಿನ ಇರ್ಬೇಕು ಅಂದ್ಕೊಂಡಿದ್ದೆ ಎಂದಿದ್ದಾರೆ. ಅಷ್ಟೊತ್ತಿದೆ, ಸ್ಪಂದನಾಗೆ ಹೊರಗಡೆ ಸಾಕಷ್ಟು ಅವಕಾಶ ಸಿಗ್ಬೋದು ಎಂದು ಅಶ್ವಿನಿ ಹೇಳಿದಾಗ ಇಲ್ಲ ನಾನು ಇರ್ತೀನಿ ಅಂತ ಸ್ಪಂದನ ಹೇಳಿದ್ದಾರೆ. ಇನ್ನು, ಅಷ್ಟೊತ್ತಿಗೆ ಜಾಹ್ನವಿ, ಯೂಟ್ಯೂಬರ್ ರಕ್ಷಿತಾಳನ್ನ ಟಾರ್ಗೆಟ್ ಮಾಡಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ತಪ್ಪು ತಪ್ಪು ಮಾತಾಡಿ ಫೇಮಸ್ ಆಗೋದು ಇರುತ್ತೆ ಅಂತಾ ಹೇಳುವಷ್ಟರಲ್ಲಿ ಮುಖ್ಯದ್ವಾರ ಓಪನ್ ಆಗಿದೆ. ಇದೀಗ 19 ಸ್ಪರ್ಧಿಗಳಲ್ಲಿ ಯಾರು ಹೊರ ಹೋಗ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಅಂದ್ಹಾಗೆ ಬಿಗ್ ಬಾಸ್ ನ ಹಿಂದಿನ ಸೀಸನ್ ಗಳಲ್ಲಿ ಮೊದಲ ವಾರ ಎಲಿಮಿನೇಷನ್ಇರ್ತಾ ಇರ್ಲಿಲ್ಲ. ಹೀಗಾಗಿ ಮೊದಲ ವಾರ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಟೈಮ್ ಸಿಕ್ತಾ ಇತ್ತು. ಆದ್ರೆ ಈ ಬಾರಿ ಮೊದಲವೇ ದಿನವೇ ಬಿಗ್ ಬಾಸ್ ಈ ಮನೆಯಿಂದ ಹೊರ ಹಾಕಲು ನಿಮ್ಮಲ್ಲಿ ಯಾರನ್ನಾದ್ರೂ ಆಯ್ಕೆ ಮಾಡಿ ಎಂದಿದ್ದಾರೆ. ಇದೀಗ ಮೊದಲ ದಿನೇ ಸ್ಪರ್ಧಿಗಳ ಮಧ್ಯೆ ಕಿಡಿ ಹೊತ್ತಿಕೊಂಡಿದೆ. ಆದ್ರೆ ಬಿಗ್ ಬಾಸ್ ಇಲ್ಲೂ ಟ್ವಿಸ್ಟ್ ಇಟ್ಟಿರ್ಬೋದು. ಬಿಗ್ ಬಾಸ್ ಸ್ಪರ್ಧಿಯನ್ನ ಇಷ್ಟು ಬೇಗ ಆಚೆ ಕಳುಹಿಸೋದು ಡೌಟ್.. ಯಾಕಂದ್ರೆ ಇನ್ನೂ ಟಾಸ್ಕ್ ಆರಂಭವಾಗಿಲ್ಲ. ಒಂದಾ ಸ್ಪರ್ಧಿಯನ್ನ ಸೀಕ್ರೆಟ್ ರೂಮ್ ನಲ್ಲಿ ಕೂರಿಸಿ ಆಟ ನೋಡಲು ಬಿಡ್ಬೋದು.. ಇಲ್ಲ ಅಂದ್ರೆ ಆ ಸ್ಪರ್ಧಿಯನ್ನ ಈ ಸೀಸನ್ ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬಹುದು. ಆದ್ರೀಗ ಕೆಲ ವೀಕ್ಷಕರು ರಕ್ಷಿತಾ ಶೆಟ್ಟಿ, ಮಾಳು ಇವರಿಬ್ಬರೇ ಟಾರ್ಗೆಟ್ ಆಗ್ತಾರೆ.. ಇವರಿಬ್ಬರಲ್ಲಿ ಯಾರನ್ನಾದ್ರೂ ಆಯ್ಕೆ ಮಾಡ್ಬೋದು ಅಂತ ಕಮೆಂಟ್ ಮಾಡ್ತಿದ್ದಾರೆ.
ಬಿಗ್ ಬಾಸ್ ಸೀಸನ್ 12 ರ ಸ್ಪರ್ಧಿಗಳು
ಬಿಗ್ಬಾಸ್ 12ರ ಮೊದಲ ಸ್ಪರ್ಧಿಯಾಗಿ ಕಾಕ್ರೂಚ್ ಸುಧಿ ಅವರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಖಡಕ್ ವಿಲನ್ ಎನಿಸಿಕೊಂಡಿರುವ ಕಾಕ್ರೋಚ್ ಸುಧಿ ಸಲಗ, ಟಗರು, ಭೀಮ ಸಿನಿಮಾಗಳಲ್ಲಿ ನಟಿಸಿದ್ರು. ಇನ್ನು ಎರಡನೇ ಸ್ಪರ್ಧಿಯಾಗಿ ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯಾ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೂರನೇ ಸ್ಪರ್ಧಿಯಾಗಿ ಡಾಗ್ ಸತೀಶ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ನಿರೂಪಕಿ, ನಟಿ ಜಾನ್ಹವಿ, ಗೀತಾ ಸೀರಿಯಲ್ ನಟ ಧನುಶ್ ಗಿಚ್ಚಿ-ಗಿಲಿಗಿಲಿ ವಿನ್ನರ್ ಚಂದ್ರಪ್ರಭಾ, ಸಿಲ್ಲಿ ಲಲ್ಲಿ ಖ್ಯಾತಿಯ ನಟಿ ಮಂಜು ಭಾಷಿಣಿ, ಮನದ ಕಡಲು ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ, ವಧು ಸೀರಿಯಲ್ ನಾಯಕ ಅಭಿಷೇಕ್, ಸೋಶಿಯಲ್ ಮೀಡಿಯಾ ಸ್ಟಾರ್ , ಮಲ್ಲಮ್ಮ , ಮುದ್ದುಲಕ್ಷ್ಮಿ ಧಾರಾವಾಹಿಯ ನಟಿ ಅಶ್ವಿನಿ, ಸೀರಿಯಲ್ ನಟ ಧ್ರುವಂತ್, ಯೂಟ್ಯೂಬರ್ ರಕ್ಷಿತಾ ಶೆಟ್ಟಿ , ಬಾಡಿ ಬಿಲ್ಡರ್ ಕರಿಬಸಪ್ಪ, ನಾ ಡ್ರೈವರ, ನನ ಲವ್ವರ ಹಾಡಿನ ಗಾಯಕ ಮಾಳು ನಿಪನಾಳ, ಸೀರಿಯಲ್ ನಟಿ ಸ್ಪಂದನ, ಖ್ಯಾತ ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿಯೂ ಆಗಿರುವ ಅಶ್ವಿನಿ ಗೌಡ, ಖ್ಯಾತ ಆರ್ಜೆ ಅಮಿತ್ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ದೊಡ್ಮನೆ ಎಂಟ್ರಿ ಕೊಟ್ಟಿದ್ದಾರೆ.

ನೋಡಿರಿ

