‘ಇಂಡಿಯಾ – ದಿ ಮೋಸ್ಟ್ ಕ್ವೆಶ್ಚೆನ್’ Vs ‘ದಿ ಕಾಶ್ಮೀರ್ ಫೈಲ್ಸ್’ – ಕಾಲೇಜು ಕ್ಯಾಂಪಸ್​ನಲ್ಲಿ ಏನಿದು ಕದನ..!?

‘ಇಂಡಿಯಾ – ದಿ ಮೋಸ್ಟ್ ಕ್ವೆಶ್ಚೆನ್’ Vs ‘ದಿ ಕಾಶ್ಮೀರ್ ಫೈಲ್ಸ್’ – ಕಾಲೇಜು ಕ್ಯಾಂಪಸ್​ನಲ್ಲಿ ಏನಿದು ಕದನ..!?

ಪ್ರಧಾನಿ ಮೋದಿ ಕುರಿತ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನ ಕೇಂದ್ರ ಸರ್ಕಾರ ನಿಷೇಧಿಸಿದ್ರೂ ಕಾಲೇಜ್ ಕ್ಯಾಂಪಸ್​ಗಳಲ್ಲಿ ಮಾತ್ರ ಸದ್ದು ಮಾಡ್ತಾನೇ ಇದೆ. ವಿಷಯ ಅಂದ್ರೆ ಈಗ ‘ಇಂಡಿಯಾ- ದಿ ಮೋಸ್ಟ್ ಕ್ವೆಶ್ಚನ್’ ಸಾಕ್ಷ್ಯಚಿತ್ರದ ಜೊತೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೂಡ ಕಾಲಿಟ್ಟಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚಾ – ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆಗಳೇನು..?

ಕೇಂದ್ರ ಸರ್ಕಾರದ ನಿಷೇಧದ ನಡುವೆಯೂ ಕಾಲೇಜ್ ಕ್ಯಾಂಪಸ್​ಗಳಲ್ಲಿ ಮೋದಿ ಕುರಿತ ‘ಇಂಡಿಯಾ – ದಿ ಮೋಸ್ಟ್ ಕ್ವೆಶ್ಚನ್’ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರದರ್ಶನ ನಡೀತಿದೆ. ಈ ವಿವಾದದ ನಡುವೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕೂಡ ಕ್ಯಾಂಪಸ್​ ಅಂಗಳಕ್ಕೆ ಕಾಲಿಟ್ಟಿದೆ. ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ನಿನ್ನೆ ರಾತ್ರಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಕುರಿತ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನ ಪ್ರದರ್ಶನ ಮಾಡಿದೆ. ಪ್ರದರ್ಶನದ ವೇಳೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಇದಕ್ಕೆ ಪ್ರತಿಯಾಗಿ ಆರ್‌ಎಸ್‌ಎಸ್ ಮತ್ತು ಎಬಿವಿಪಿಯ ವಿದ್ಯಾರ್ಥಿಗಳ ವಿಭಾಗವು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಪ್ರದರ್ಶಿಸಿದೆ. ಮತ್ತೊಂದೆಡೆ ಕೇರಳ ಕಾಂಗ್ರೆಸ್ ಕೂಡ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ.

ಹೈದರಾಬಾದ್ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ ಫೋಟೋವನ್ನು ಎಸ್‌ಎಫ್‌ಐ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ‘ಎಬಿವಿಪಿ ಕಾರ್ಯಕರ್ತರು ಗಲಾಟೆ ಮಾಡಲು ಯತ್ನಿಸಿದರು. ಆದರೆ ನಾವು ಅವರನ್ನು ಯಶಸ್ವಿಯಾಗಲು ಬಿಡಲಿಲ್ಲ’ ಎಂಬ ಶೀರ್ಷಿಕೆಯನ್ನ ನೀಡಿದ್ದಾರೆ.

ಇದರ ನಡುವೆ ಕ್ಯಾಂಪಸ್‌ನಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ಕಾರ್ಯಕರ್ತರು ವಿಶ್ವವಿದ್ಯಾನಿಲಯದ ಮೇನ್ ಗೇಟ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಹೆ ಕ್ಯಾಂಪಸ್​ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶಿಸದಂತೆ ಆಡಳಿಯ ಮಂಡಳಿ ಸಿಬ್ಬಂದಿ ನಮ್ಮನ್ನ ತಡೆಯಲು ಯತ್ನಿಸಿದ್ದಾರೆ ಎಂದಿದ್ದಾರೆ.  ಕ್ಯಾಂಪಸ್‌ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ನಮ್ಮನ್ನ ತಡೆದಿದ್ದು ನಾವು ಪ್ರತಿಭಟಿಸಿದಾಗ ನಮಗೆ ಥಳಿಸಿದ್ರು ಎಂದಿದ್ದಾರೆ. ಕೇಂದ್ರ ಸರ್ಕಾರ ನಿಷೇಧಿಸಿದ್ರೂ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಹೇಗೆ ಅನುಮತಿ ನೀಡಿದ್ರೆಂದು ಪ್ರಶ್ನಿಸಿದ್ದಾರೆ.

suddiyaana