ಎರಡನೇ ಪಂದ್ಯದಲ್ಲಿ ವರ್ಕ್ ಆಗ್ಲಿಲ್ಲ ಬಾಝ್ ಬಾಲ್ ಮಂತ್ರ – ಇಂಗ್ಲೆಂಡ್ ಗೆ ತಿರುಗು ಬಾಣವಾಯ್ತಾ?

ಎರಡನೇ ಪಂದ್ಯದಲ್ಲಿ ವರ್ಕ್ ಆಗ್ಲಿಲ್ಲ ಬಾಝ್ ಬಾಲ್ ಮಂತ್ರ – ಇಂಗ್ಲೆಂಡ್ ಗೆ ತಿರುಗು ಬಾಣವಾಯ್ತಾ?

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನ ಗೆದ್ದಿದ್ದ ಇಂಗ್ಲೆಂಡಿಗರ ಅಹಂಕಾರ ನೆತ್ತಿಗೇರಿತ್ತು. 18 ವರ್ಷಗಳಿಂದ ಭಾರತ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಜೊತೆಗೆ ಬರ್ಮಿಂಗ್ ಹ್ಯಾಮ್​ನಲ್ಲಂತೂ ಒಂದೂ ಪಂದ್ಯವನ್ನ ಗೆದ್ದಿಲ್ಲ. ಅದೂ ಅಲ್ದೇ ಟೀಂ ಇಂಡಿಯಾದಲ್ಲಿ ಇರೋರೆಲ್ಲಾ ಹೊಸಬರೇ. ಸೋ ನಾವೇ ಎರಡನೇ ಪಂದ್ಯವನ್ನೂ ಗೆಲ್ಲೋದು ಅಂತಾ ಮೆಂಟಲಿ ಫಿಕ್ಸ್ ಆಗಿದ್ರು. ಕ್ಯಾಮರಾಗಳ ಎದುರಲ್ಲೂ ಭಾರತದ ಬಗ್ಗೆ ಟೀಸ್ ಮಾಡ್ತಿದ್ರು. ಬಟ್ ಈಗ ಅದೆಲ್ಲವಕ್ಕೂ ಉತ್ತರ ಕೊಟ್ಟಿರೋ ಶುಭ್​ಮನ್ ಗಿಲ್ ಬಳಗ ಭಾರತದ ಪವರ್ ಏನು ಅಂತಾ ತೋರಿಸಿದೆ. ಜೊತೆಗೆ ಬಾಝ್ ಬಾಲ್ ನೇ ನಂಬಿರೋ ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಇದನ್ನೂ ಓದಿ : ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ @44 – ಬಾಲ್ಯ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಷನ್

ಎರಡನೇ ಟೆಸ್ಟ್ ಪಂದ್ಯ ಆರಂಭವಾದಾಗ ಭಾರತ ಇಲ್ಲಿ ಅಟ್ ಲೀಸ್ಟ್ ಡ್ರಾಕ್ಕಾಗಿ ಆಡುತ್ತೆ ಅಂತಾ ಬಹುತೇಕರಿಗೆ ಅನ್ನಿಸಿದ್ದುಂಟು. ಎರಡನೇ ಇನಿಂಗ್ಸ್​ನಲ್ಲಿ 500, 550ರ ಲೀಡ್ ದಾಟಿದ ಮೇಲೂ ಡಿಕ್ಲೇರ್ ಮಾಡದೇ ಇದ್ದಾಗ ಸೋ ಡ್ರಾಗಾಗಿ ಆಡ್ತಿದ್ದಾರೆ ಅನ್ನೋದು ಸ್ಪಷ್ಟವಾಗ್ತಿತ್ತು. ಬಟ್ ಇಂಗ್ಲೆಂಡಿಗರು ಮಾತ್ರ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಡೋಂಟ್​ಕೇರ್ ಮೂಡ್​ನಲ್ಲಿದ್ರು. ಯಾಕಂದ್ರೆ ಭಾರತ 500 ಅಲ್ಲ 1000 ರನ್ಸ್ ಹೊಡೆದ್ರೂ ನಾವು ಟಾರ್ಗೆಟ್ ರೀಚ್ ಮಾಡ್ತೇವೆ ಅನ್ನೋದು ಸ್ಟ್ರಾಂಗ್ ಆಗಿ ಅವ್ರ ತಲೆಯಲ್ಲಿ ಕುಳಿತಿತ್ತು. ವಿಕೆಟ್ ಬೀಳ್ತಿಲ್ಲ ಅನ್ನೋದಕ್ಕಿಂತ ಎಷ್ಟು ರನ್ಸ್ ಇದ್ರೂ ಹೊಡೆಯುತ್ತೇವೆ ಅನ್ನೋ ಌಟಿಟ್ಯೂಡ್ ಅದು. ಟೆಸ್ಟ್ ಮ್ಯಾಚ್​ನಲ್ಲಿ ಅಟ್ಯಾಕಿಂಗ್ ಮೋಡ್​ನಲ್ಲಿ ರನ್ ಗಳಿಸುತ್ತೇವೆ ಅನ್ನೋದೇ ಅವ್ರ ಭಂಡಧೈರ್ಯದ ಹಿಂದಿದ್ದ ಪ್ಲ್ಯಾನ್. ಹ್ಯಾರಿ ಬ್ರೂಕ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾವೇ ಗೆಲ್ಲೋದು ಅಂತಾ ಸ್ಟೇಟ್​ಮೆಂಟ್ ಕೊಟ್ಟಾಗಿತ್ತು. ಭಾರತದ ಆಟಗಾರರು ಎಷ್ಟೇ ಗುರಿ ನೀಡಿದ್ರೂ ನಾವು ಅದನ್ನ ರೀಚ್ ಆಗ್ತೇವೆ ಎಂದಿದ್ರು. ಬಟ್ ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್ ಮುಂದೆ ಥರಗೆಲೆಗಳಂತೆ ಉದುರಿ ಹೋಗಿದ್ರು.

ಅಷ್ಟಕ್ಕೂ ಇಲ್ಲಿ ಇಂಗ್ಲೆಂಡ್ ತಂಡದ ಸೋಲಿಗೆ ಅವ್ರೇ ಕಾರಣ. ಅತಿಯಾದ ಆತ್ಮವಿಶ್ವಾಸವೇ ಮುಳುವಾಗಿದೆ. ಲೀಡ್ಸ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತದ ಪರ ನಾಲ್ವರು ಬ್ಯಾಟ್ಸ್ ಮನ್ಸ್ ಐದು ಶತಕ ಸಿಡಿಸಿದ್ರು. ಸೋ ಅಲ್ಲಿಗೆ ಇಂಗ್ಲೆಂಡ್ ಬೌಲಿಂಗ್ ಎಷ್ಟು ವೀಕ್ ಆಗಿದೆ ಅನ್ನೋದು ಗೊತ್ತಾಗುತ್ತೆ. ಹೀಗಿದ್ರೂ ಬೌಲಿಂಗ್ ಬಗ್ಗೆ ಕೇರೇ ಮಾಡದೇ ಕೊನೇ ದಿನದಾಟದಲ್ಲೂ 350+ ಸ್ಕೋರ್​ನ ಚೇಸ್ ಮಾಡಿ ಗೆದ್ದಿದ್ರು. ಸೋ ಎರಡನೇ ಪಂದ್ಯದಲ್ಲೂ ಇದೇ ರಿಪೀಟ್ ಆಗುತ್ತೆ ಅನ್ನೋದು ಅವ್ರ ನಂಬಿಕೆ. ಹೀಗಾಗಿ ತಂಡದಲ್ಲಿ ಬ್ಯಾಟಿಂಗ್​ಗೆ ಮಾತ್ರ ಇಂಪಾರ್ಟೆನ್ಸ್ ಇತ್ತು. ನಂಬರ್ 1ನಿಂದ 10ನೇ ವಿಕೆಟ್​ವರೆಗೂ ರನ್ ಗಳಿಸೋರೇ ಬೇಕಿದೆ. ಜೋಫ್ರಾ ಆರ್ಚರ್, ವುಡ್ ಕೂಡಾ ಇಲ್ಲದ ತಂಡದಲ್ಲಿ ಟಂಗ್, ವೋಕ್ಸ್, ಕಾರ್ಸ್, ಸ್ಟೋಕ್ಸ್‌ರಂತಹ ಆಲ್‌ರೌಂಡರ್‌ಗಳೇ ಇರುವ ಬೌಲರ್ಸ್​ನೇ ನಂಬಿದ್ರು. ಅದೂ ಅಲ್ದೇ ಮೊದಲ ಇನಿಂಗ್ಸ್​ನಲ್ಲಿ 84 ರನ್​ಗಳಿಗೆ 5 ವಿಕೆಟ್ ಉರುಳಿದ್ದಾಗ ಫಾಲೋ ಆನ್ ತಪ್ಪಿಸಿಕೊಳ್ಳುವುದೂ ಅಸಾಧ್ಯವೇ ಇತ್ತು. ಬಟ್ ಹ್ಯಾರಿ ಬ್ರೂಕ್ ಮತ್ತು ಜೇಮಿ ಸ್ಮಿತ್ ಅದನ್ನ ಮಾಡಿ ತೋರಿಸಿದ್ರು. ಇದೇ ಫಾರ್ಮುಲಾ ಸೆಕೆಂಡ್ ಇನ್ನಿಂಗ್ಸ್​ಗೆ ವರ್ಕೌಟ್ ಆಗ್ಲಿಲ್ಲ.

ಯೆಸ್. ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಳ್ಳೋಕೆ ಕಾರಣವೂ ಇದೆ. ನ್ಯೂಜಿಲೆಂಡ್ ಮೂಲಕ ಬ್ರೆಂಡನ್ ಮೆಕಲಂ ಹೆಡ್ ಕೋಚ್ ಹಾಗೇ ಬೆನ್ ಸ್ಟೋಕ್ಸ್ ಕ್ಯಾಪ್ಟನ್ ಆದ್ಮೇಲೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್​ನಲ್ಲಿ ಬಾಝ್ ಬಾಲ್ ಪ್ರಯೋಗ ಹುಟ್ಟಿಕೊಳ್ತು. ಈ ಕಾನ್ಸೆಪ್ಟ್​ಗೂ  ಮುನ್ನ ಇಂಗ್ಲೆಂಡ್ ತಂಡ 17 ಟೆಷ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದರು. ಕ್ರಿಕೆಟ್ ಜನಕರ ನಾಡಿನಲ್ಲಿಯೇ ಟೆಷ್ಟ್ ಕ್ರಿಕೆಟ್ ಅದಃಪತನದತ್ತ ಸಾಗಿತ್ತು. ಬಟ್  ಮೆಕಲಮ್ ಮತ್ತು ಸ್ಟೋಕ್ಸ್ ಜೊತೆಯಾದ ನಂತರ ಬಾಝ್ ಬಾಲ್ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ರು. ಅಷ್ಟೇ ಅಲ್ಲ ಬ್ಯಾಟಿಂಗ್​ಗೆ ಇಂಪಾರ್ಟೆನ್ಸ್ ಜಾಸ್ತಿ ಆಯ್ತು. ಬರೀ ಆಟಗಾರರಷ್ಟೇ ಅಲ್ಲಿನ ಅಭಿಮಾನಿಗಳಲ್ಲೂ ಕೂಡ ಬ್ಯಾಟಿಂಗನ್ನು ಆರಾಧಿಸುವ ಕಲ್ಚರ್ ಬೆಳೀತಿದೆ. ಇಂಗ್ಲೆಂಡ್ ಬ್ಯಾಟಿಂಗ್ ಮಾಡೋ ದಿನ ಮೈದಾನ ಭರ್ತಿಯಾಗ್ತಿವೆ. ಬಟ್ ಬೌಲಿಂಗ್ ದಿನ ಖಾಲಿ ಹೊಡೀತಿದೆ.

ಸದ್ಯ ಭಾರತದ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನ ಸೋತ ಬಳಿಕ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಕೆಲ ಬದಲಾವಣೆಗಳಾಗಿವೆ. ಬ್ಯಾಟಿಂಗ್ ಜೊತೆ ಬೌಲಿಂಗ್​ನೂ ಸ್ಟ್ರಾಂಗ್ ಮಾಡಲು ಮುಂದಾಗಿದ್ದಾರೆ. ಎರಡನೇ ಪಂದ್ಯ ಸೋತ ಕೆಲವೇ ನಿಮಿಷಗಳಲ್ಲೇ ಮೂರನೇ ಪಂದ್ಯಕ್ಕೆ ಟೀಂ ಅನೌನ್ಸ್ ಮಾಡಲಾಗಿದೆ. 16 ಸದಸ್ಯರ ಪಟ್ಟಿಯಲ್ಲಿ ಮತ್ತೊಬ್ಬ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವೇಗದ ಬೌಲರ್ ಗಸ್ ಅಟ್ಕಿನ್ಸನ್ ಗೆ ಚಾನ್ಸ್ ನೀಡಿದೆ. ಜೋಫ್ರಾ ಆರ್ಚರ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸೋ ಇಬ್ಬರು ಆಟಗಾರರು ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ 11 ಸೇರಿದ್ರೂ ಅಚ್ಚರಿ ಇಲ್ಲ.

Shantha Kumari