ವಿಧಾನಸಭೆ ಅಧಿವೇಶನದಲ್ಲಿ ‘ಪೆನ್‌ಡ್ರೈವ್’ ಕದನ – ಪ್ರತಿಪಕ್ಷಗಳ ಗಲಾಟೆಗೆ ಕಲಾಪ ಮುಂದೂಡಿಕೆ

ವಿಧಾನಸಭೆ ಅಧಿವೇಶನದಲ್ಲಿ ‘ಪೆನ್‌ಡ್ರೈವ್’ ಕದನ – ಪ್ರತಿಪಕ್ಷಗಳ ಗಲಾಟೆಗೆ ಕಲಾಪ ಮುಂದೂಡಿಕೆ

ವಿಧಾನಸಭೆಯ ಕಲಾಪದಲ್ಲಿ ಪೆನ್‌ಡ್ರೈವ್ ಕದನ ತಾರಕಕ್ಕೇರಿದೆ. ಸದನದಲ್ಲಿ ಕೆ.ಜೆ.ಜಾರ್ಜ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ನಡುವೆ ತೀವ್ರ ವಾಗ್ವಾದ ನಡೆಯಿತು. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಹೆಚ್‌ಡಿ ಕುಮಾರಸ್ವಾಮಿಯವರು ಆರೋಪ ಮಾಡಿದರು. ಇದಕ್ಕೆ ಸಚಿವ ಕೆಜೆ ಜಾರ್ಚ್ ಅವರು ಪ್ರತ್ಯುತ್ತರ ನೀಡಿ ನನ್ನ ಬಳಿ ಪೆನ್‌ಡ್ರೈವ್ ಇದೆ. ಸಾಕ್ಷ್ಯವಿದೆ ಎಂದು ಹೇಳುತ್ತೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್‌ಗೆ ನೀಡಿ ಎಂದರು.

ಇದನ್ನೂ ಓದಿ: ಪೆನ್ ಡ್ರೈವ್ ಹೊರಗೆ ಬಂದರೆ ಹಾಲಿ ಸಚಿವ ರಾಜೀನಾಮೆ ನೀಡಬೇಕಾಗುತ್ತದೆ – ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಸಚಿವ ಕೆಜೆ ಜಾರ್ಚ್ ಮಾತಿಗೆ ಹೆಚ್‌ಡಿ ಕುಮಾರಸ್ವಾಮಿ “ಡ್ರೈವ್‌ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್‌ಡ್ರೈವ್ ಪ್ರದರ್ಶನ ಮಾಡುತ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ” ಎಂದರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ಹೆಚ್.ಡಿ ಕುಮಾರಸ್ವಾಮಿಯವರು ಕೆಎಸ್ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣವನ್ನು ಪ್ರಸ್ತಾಪಿಸಿದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದ ಪತ್ರವನ್ನು ಓದಿದರು. ಈ ವಿಚಾರವಾಗಿಯೂ ಕೆ.ಜೆ ಜಾರ್ಜ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ವರ್ಗಾವಣೆ ದಂಧೆ ಮತ್ತು ಚಾಲಕನ ಆತ್ಮಹತ್ಯೆ ಯತ್ನದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಳಿದರು. ಈ ವೇಳೆ ಸಭಾಪತಿ ಯುಟಿ ಖಾದರ್ ಅವರು ಸದನವನ್ನು 2:45ಕ್ಕೆ ಮುಂದೂಡಿದರು.

suddiyaana