ಒಂದೇ ಟಿ20 ಮ್ಯಾಚ್‌ನಲ್ಲಿ ಮೂರು ಬಾರಿ ಬ್ಯಾಟಿಂಗ್ – ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?
ಸೂಪರ್ ಓವರ್ನಲ್ಲಂತೂ ರೋಹಿತ್ ಸ್ಟ್ರ್ಯಾಟಜಿಯಿಂದಾಗಿಯೇ ಮ್ಯಾಚ್ ಗೆಲ್ಲೋಕೆ ಸಾಧ್ಯವಾಗಿತ್ತು. ಕೋಚ್ ರಾಹುಲ್ ದ್ರಾವಿಡ್ ಕೂಡ ರೋಹಿತ್ ಶರ್ಮಾರ ಮಾಸ್ಟರ್ ಪ್ಲ್ಯಾನ್ಗೆ ಫಿದಾ ಆಗಿದ್ರು. ಈ ವರದಿಯಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್, ಕ್ಯಾಪ್ಟನ್ಸಿ, ಹಾಗೆಯೇ ಸೆಕೆಂಡ್ ಸೂಪರ್ ಓವರ್ನಲ್ಲೂ ಕೂಡ ಹಿಟ್ಮ್ಯಾನ್ಗೆ ಬ್ಯಾಟಿಂಗ್ಗೆ ಅವಕಾಶ ಕೊಟ್ಟಿದ್ಯಾಕೆ? ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಂಚಿದ ಕನ್ನಡಿಗ – 18 ವರ್ಷದ ಪ್ರಖರ್ ಚತುರ್ವೇದಿಯ ಅಮೋಘ ಬ್ಯಾಟಿಂಗ್
ಅಫ್ಘಾನಿಸ್ತಾನ ವಿರುದ್ಧದ ಎರಡೂ ಸೂಪರ್ ಓವರ್ಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರೋದು. ಫಸ್ಟ್ ಸೂಪರ್ ಓವರ್ನಲ್ಲಿ ರೋಹಿತ್ ರಿಟೈರ್ಡ್ ಹರ್ಟ್ ಇಲ್ಲಾ ರಿಟೈರ್ಡ್ ಔಟ್ ಅನ್ನೋ ಬಗ್ಗೆ ಈಗ ಸಾಕಷ್ಟು ಚರ್ಚೆಯಾಗ್ತಿದೆ. ಇಲ್ಲೊಂದಷ್ಟು ಕನ್ಫ್ಯೂಷನ್ಗಳು ಕೂಡ ಇವೆ. ಫಸ್ಟ್ ಸೂಪರ್ ಓವರ್ನಲ್ಲಿ ಅಫ್ಘಾನಿಸ್ತಾನ ಟೀಂ ಇಂಡಿಯಾಗೆ 17 ರನ್ಗಳ ಟಾರ್ಗೆಟ್ ನೀಡುತ್ತೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್ಗೆ ಇಳೀತಾರೆ. ರೋಹಿತ್ ಎರಡು ಸಿಕ್ಸರ್ ಹೊಡೆದು ಒಂದು ಸಿಂಗಲ್ ತೆಗೀತಾರೆ. ಲಾಸ್ಟ್ ಬಾಲ್ನಲ್ಲಿ ಮ್ಯಾಚ್ ಗೆಲ್ಲೋಕೆ ಎರಡು ರನ್ಗಳು ಬೇಕಾಗಿರುತ್ತೆ. ಯಶಸ್ವಿ ಜೈಸ್ವಾಲ್ ಕ್ರೀಸ್ನಲ್ಲಿರ್ತಾರೆ. ಈ ವೇಳೆ ರೋಹಿತ್ ಶರ್ಮಾ ರಿಟೈರ್ಡ್ ಆಗ್ತಾರೆ. ನಾನ್ಸ್ಟ್ರೈಕರ್ ಎಂಡ್ನಿಂದ ಸೀದಾ ಗ್ರೌಂಡ್ನಿಂದ ಹೊರಗೆ ಹೋಗ್ತಾರೆ. ರಿಂಕು ಸಿಂಗ್ ನಾನ್ಸ್ಟ್ರೈಕ್ ಎಂಡ್ಗೆ ಬರ್ತಾರೆ. ಇಲ್ಲಿ ರೋಹಿತ್ ಶರ್ಮಾ ರಿಟೈರ್ ಆಗಿರೋದ್ರ ಉದ್ದೇಶ ಇಷ್ಟೇ. ನಿಮಗೆ ಗೊತ್ತಿರೋ ಹಾಗೆ ಕೊನೆಯ ಬಾಲ್ನಲ್ಲಿ ಎರಡು ರನ್ ಬೇಕಾಗಿತ್ತು. ಹೀಗಾಗಿ ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ಇಂಪಾರ್ಟೆಂಟ್ ಆಗುತ್ತೆ. ರೋಹಿತ್ ಶರ್ಮಾಗೆ ಅಷ್ಟೊಂದು ಸ್ಪೀಡ್ ಆಗಿಯಂತೂ ಓಡೋಕೆ ಆಗಲ್ಲ. ಹೀಗಾಗಿಯೇ ರೋಹಿತ್ ರಿಟೈರ್ ಆಗಿ ರಿಂಕು ಸಿಂಗ್ರನ್ನ ಕಳಿಸಿದ್ರು ಅನ್ನೋದು ಒಂದು ಆ್ಯಂಗಲ್.. ಆದ್ರೆ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಕೂಡ ಇದೆ. ಸೆಕೆಂಡ್ ಸೂಪರ್ ಓವರ್ ವೇಳೆಯೂ ರೋಹಿತ್ ಶರ್ಮಾರೇ ಬ್ಯಾಟಿಂಗ್ಗೆ ಬಂದಿದ್ರು. ಇಲ್ಲೇ ನೋಡಿ ಹಿಟ್ಮ್ಯಾನ್ ಸ್ಟ್ರ್ಯಾಟಜಿ ಮಾಡಿರೋದು.
ರೂಲ್ಸ್ ಪ್ರಕಾರ ಫಸ್ಟ್ ಸೂಪರ್ ಓವರ್ನಲ್ಲಿ ಒಬ್ಬ ಬ್ಯಾಟ್ಸ್ಮನ್ ಔಟ್ ಆದ್ರೆ ಸೆಕೆಂಡ್ ಸೂಪರ್ ಓವರ್ ವೇಳೆ ಆತ ಮತ್ತೆ ಬ್ಯಾಟಿಂಗ್ಗೆ ಬರುವಂತಿಲ್ಲ. ಒಂದು ವೇಳೆ ಫಸ್ಟ್ ಸೂಪರ್ ಓವರ್ನ ಲಾಸ್ಟ್ ಬಾಲ್ನಲ್ಲಿ ಎರಡು ರನ್ ತೆಗೆಯೋ ಭರದಲ್ಲಿ ರೋಹಿತ್ ರನ್ನೌಟ್ ಆಗ್ತಿದ್ರೆ ಸೆಕೆಂಡ್ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ಗೆ ಇಳಿಯೋಕೆ ಆಗ್ತಾ ಇರಲಿಲ್ಲ. ಹೀಗಾಗಿ ಫಸ್ಟ್ ಸೂಪರ್ ಓವರ್ನ ಲಾಸ್ಟ್ ಬಾಲ್ನಲ್ಲಿ ಒಂದು ರನ್ ಅಂತೂ ಮಾಡ್ಬಹುದು. ಈಗ ರಿಟೈರ್ ಆದ್ರೆ ಸೆಕೆಂಡ್ ಸೂಪರ್ ಓವರ್ನಲ್ಲಿ ಮತ್ತೆ ನಾನೇ ಬ್ಯಾಟಿಂಗ್ ಇಳಿಬಹುದು ಅನ್ನೋದು ರೋಹಿತ್ ಪ್ಲ್ಯಾನ್ ಆಗಿತ್ತು. ಸೋ ಫಸ್ಟ್ ಸೂಪರ್ ಓವರ್ನ ಲಾಸ್ಟ್ ಬಾಲ್ಗೂ ಮುನ್ನ ರೋಹಿತ್ ರಿಟೈರ್ ಆಗ್ತಾರೆ. ಸೆಕೆಂಡ್ ಸೂಪರ್ ಓವರ್ನಲ್ಲಿ ಮತ್ತೆ ಬ್ಯಾಟಿಂಗ್ಗೆ ಇಳೀತಾರೆ. ಇಲ್ಲಿ ಒಂದೇ ಕಲ್ಲಿನಲ್ಲಿ ರೋಹಿತ್ ಶರ್ಮಾ ಎರಡು ಹಕ್ಕಿಗಳನ್ನ ಹೊಡೆದಿದ್ದಾರೆ. ಒಂದು ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಗೆ ಸೊಲ್ಯೂಷನ್.. ಮತ್ತೊಂದು ಸೆಕೆಂಡ್ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ಗೆ ಇಳಿಯೋ ಪ್ಲ್ಯಾನ್. ಒಂದೇ ಟಿ20 ಮ್ಯಾಚ್‌ನಲ್ಲಿ ರೋಹಿತ್ ಶರ್ಮಾ ಮೂರು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಈವನ್ ಟೆಸ್ಟ್ನಲ್ಲೇ ಎರಡು ಬಾರಿ ಮಾತ್ರ ಬ್ಯಾಟಿಂಗ್ಗೆ ಅವಕಾಶ ಸಿಗೋದು. ಆದ್ರೆ ರೋಹಿತ್ ಟಿ20 ಮ್ಯಾಚ್ನಲ್ಲೇ ಮೂರು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಎಂಥಾ ಚಾಣಕ್ಯ ನೋಡಿ.. ರೋಹಿತ್ ಸುಮ್ನೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿಲ್ಲ.
ರೋಹಿತ್ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?
ಈಗ ಇಲ್ಲೊಂದು ಚರ್ಚೆ ಕೂಡ ಶುರುವಾಗಿದೆ. ರೋಹಿತ್ ಶರ್ಮಾ ಅಕ್ಷರಶ: ಐಸಿಸಿ ರೂಲ್ಸ್ಗೇ ಕಿಚ್ಚು ಹಚ್ಚಿಬಿಟ್ಟಿದ್ದಾರೆ. ಆ್ಯಕ್ಚುವಲಿ ರೋಹಿತ್ ಶರ್ಮಾರದ್ದು ರಿಟೈರ್ಡ್ ಹರ್ಟ್? ಇಲ್ಲಾ ರಿಟೈರ್ಡ್ ಔಟ್ ಅನ್ನೋದಾಗಿ. ಯಾವಾಗಲೂ ಬ್ಯಾಟ್ಸ್ಮನ್ ಗಾಯಗೊಂಡಾಗ ರಿಟೈರ್ಡ್ ಹರ್ಟ್ ಆಗ್ತಾರೆ. ಬಟ್ ಇಲ್ಲಿ ರೋಹಿತ್ಗೆ ಯಾವುದೇ ಇಂಜ್ಯೂರಿ ಅಂತೂ ಆಗಿಲ್ಲ. ಹೀಗಾಗಿ ಇದು ರಿಟೈರ್ಡ್ ಔಟಾ? ರಿಟೈರ್ಡ್ ಹರ್ಟಾ ಅನ್ನೋದಕ್ಕೆ ಇನ್ನೂ ಕೂಡ ಕ್ಲ್ಯಾರಿಟಿ ಸಿಕ್ಕಿಲ್ಲ. ಒಂದು ವೇಳೆ ಇದನ್ನ ರಿಟೈರ್ಡ್ ಹರ್ಟ್ ಅಂತಾ ಪರಿಗಣಿಸಿದ್ರೆ ರೋಹಿತ್ ಶರ್ಮಾ ಸೆಕೆಂಡ್ ಸೂಪರ್ ಓವರ್ನಲ್ಲೂ ಬ್ಯಾಟಿಂಗ್ ಮಾಡಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ರಿಟೈರ್ಡ್ ಔಟ್ ಅಂತಾ ಪರಿಗಣಿಸಿದ್ರೆ ಸೆಕೆಂಡ್ ಸೂಪರ್ ಓವರ್ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರೋದೆ ರಾಂಗ್. ರಿಟೈರ್ಡ್ ಔಟಾಗಿದ್ರೆ ರೋಹಿತ್ಗೆ ಸೆಕೆಂಡ್ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ಮಾಡೋಕೆ ಅವಕಾಶವೇ ಇಲ್ಲ. ಬಿಕಾಸ್ ಹೀ ಈಸ್ ಔಟ್. ಹೀಗಾಗಿ ರೋಹಿತ್ ಶರ್ಮಾ ಈ ನಡೆಯಿಂದಾಗಿ ಈಗ ಕ್ರಿಕೆಟ್ ಎಕ್ಸ್ಪರ್ಟ್ಗಳು, ಐಸಿಸಿ ಮಂದಿಯೂ ಇದನ್ನ ರಿಟೈರ್ಡ್ ಔಟ್ ಅನ್ನೋದಾ, ರಿಟೈರ್ಡ್ ಹರ್ಟ್ ಅನ್ನೋದಾ ಅಂತಾ ತಲೆಕೆಡಿಸಿಕೊಳ್ತಾ ಇದ್ದಾರೆ. ಇನ್ನು ಅದೇನೇ ಕ್ಲ್ಯಾರಿಫಿಕೆಶನ್ ಕೊಟ್ರೂ ಮ್ಯಾಚ್ ಮುಗಿದಿದೆ. ಭಾರತ ಸೀರಿಸ್ ಗೆದ್ದಾಗಿದೆ. ಆಫ್ಘನ್ ಟೀಮ್ ಫ್ಲೈಟ್ ಹತ್ತಿಯಾಗಿದೆ. ಅಂತೂ ಇಲ್ಲಿ ವಿನ್ನರ್ ಆಗಿರೋದು ವನ್ ಆ್ಯಂಡ್ ಓನ್ಲಿ ರೋಹಿತ್ ಶರ್ಮಾ.
ಹಾಗೆಯೇ ಅಫ್ಘಾನಿಸ್ತಾನ ತಂಡ ಕೂಡ ಟಾಪ್ ಕ್ಲಾಸ್ ಕ್ರಿಕೆಟ್ ಆಡಿದೆ. ನಿಜಕ್ಕೂ ಹ್ಯಾಟ್ಸಾಫ್. ನೋಡಿ ವರ್ಲ್ಡ್ಕಪ್ನಲ್ಲೂ ಆಫ್ಘನ್ನರು ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ರು. ಈ ಸೀರಿಸ್ನಲ್ಲೂ ಅಷ್ಟೇ. ಫೈನಲ್ ಮ್ಯಾಚ್ನಲ್ಲಂತೂ ನಮಗೇ ಕುತ್ತಿಗೆವರೆಗೂ ನೀರು ಕುಡಿಸಿದ್ದಾರೆ. ಅಫ್ಘಾನಿಸ್ತಾನ ಟೀಮ್ಗೆ ನಿಜಕ್ಕೂ ದೊಡ್ಡ ಫ್ಯೂಚರ್ ಇದೆ. ಅಂಥಾ ಟೀಮ್ಗಳು ಬೆಳೀಬೇಕು. ಕ್ರಿಕೆಟ್ಗೂ ಒಳ್ಳೆಯದು.