RCBಗೆ ಬ್ಯಾಟಿಂಗ್ ಟೆನ್ಷನ್? – ಫಾಫ್.. ಡಿಕೆ.. ಗ್ರೀನ್.. ಡೌಟ್ ಯಾಕೆ?

ಈ ಬಾರಿಯ ಐಪಿಎಲ್ ಮಿನಿ ಆಕ್ಷನ್ ಬಳಿಕ ಆರ್ಸಿಬಿ ಅಭಿಮಾನಿಗಳು ಒಂದಷ್ಟು ಅಸಮಾಧಾನಗೊಂಡಿದ್ದಂತೂ ಸುಳ್ಳಲ್ಲ. ಅಲ್ಜಾರಿ ಜೋಸೆಫ್, ಯಶಸ್ವಿ ದಯಾಳ್ರನ್ನ ಕೋಟಿ ಕೋಟಿ ಕೊಟ್ಟು ಆರ್ಸಿಬಿ ಟೀಮ್ಗೆ ಸೇರಿಕೊಂಡಿದ್ದು ನಿಜವಾಗಿಯೂ ಶಾಕಿಂಗ್ ಡಿಸೀಶನ್ ಆಗಿತ್ತು. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ರಂಥಾ ಬೌಲರ್ಸ್ಗಳನ್ನ ಟಾರ್ಗೆಟ್ ಇಟ್ಟುಕೊಂಡು ಕೊನೆಗೆ ಆರ್ಸಿಬಿ ಅಲ್ಜಾರಿ ಜೋಸೆಫ್ಗೆ 11 ಕೋಟಿ ಸುರಿದಿತ್ತು. ಎಂದಿನಂತೆ ಈ ಬಾರಿ ಕೂಡ ಆರ್ಸಿಬಿ ಮ್ಯಾನೇಜ್ಮೆಂಟ್ ಹೋಪ್ಲೆಸ್ ಬಿಡ್ಡಿಂಗ್ ಮಾಡಿದೆ ಅಂತಾನೆ ಫ್ಯಾನ್ಸ್ ಸಿಟ್ಟಾಗಿದ್ರು. ಐಪಿಎಲ್ ಟೂರ್ನಿಗೆ ಇನ್ನು ಕೆಲ ತಿಂಗಳುಗಳಷ್ಟೇ ಬಾಕಿ ಇದೆ. ಈ ನಡುವೆ ಆರ್ಸಿಬಿ ಬ್ಯಾಟಿಂಗ್ ಲೈನ್ಅಫ್ ವಿಚಾರವಾಗಿ ಒಂದಷ್ಟು ವರಿ ಕೂಡ ಇದೆ. ಆರ್ಸಿಬಿ ಫ್ಯಾನ್ಸ್ಗೆ ಒಂದಷ್ಟು ಗುಡ್ನ್ಯೂಸ್ ಆಗುವಂಥಾ ಡೆವಲಪ್ಮೆಂಟ್ಗಳಾಗಿವೆ. ಹಾಗೆಯೇ ಅಲ್ಜಾರಿ ಜೋಸೆಫ್ ಮತ್ತು ಯಶಸ್ವಿ ದಯಾಳ್ರನ್ನ ಖರೀದಿಸೋಕೆ ಕಾರಣ ಏನು ಅನ್ನೋ ಬಗ್ಗೆ ಆರ್ಸಿಬಿ ಕೋಚ್ ಮಾತನಾಡಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್ ಪಂದ್ಯ ಸೋಲಿಗೆ ಬೌಲರ್ಸ್ ಕಾರಣ ಎಂದ ಕ್ಯಾಪ್ಟನ್ – ಬ್ಯಾಟಿಂಗ್ ಬಲವನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ
ನಿಮಗೆ ಗೊತ್ತಿರೋ ಹಾಗೆ ಆರ್ಸಿಬಿಯ ಮೇನ್ ಸ್ಟ್ರೆಂತ್ ಆಗಿರೋದೆ ಬ್ಯಾಟಿಂಗ್ ಲೈನ್ಅಪ್. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ರಜತ್ ಪಾಟೀದಾರ್, ಗ್ಲೇನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹೀಗೆ ಘಟಾನುಘಟಿ ಬ್ಯಾಟ್ಸ್ಮನ್ಗಳೇ ಟೀಂನಲ್ಲಿದ್ದಾರೆ. ಆದ್ರೆ ಈ ಬ್ಯಾಟಿಂಗ್ ಲೈನ್ಅಪ್ನಲ್ಲೂ ಒಂದು ಸಣ್ಣ ಪ್ರಾಬ್ಲಂ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಸೌತ್ ಆಫ್ರಿಕಾ ಟೀಂ ಪರ ಯಾವುದೇ ಮ್ಯಾಚ್ಗಳನ್ನ ಆಡ್ತಾ ಇಲ್ಲ. ಟಿ-20, ವಂಡೇ, ಟೆಸ್ಟ್ ಹೀಗೆ ಯಾವುದೇ ಫಾರ್ಮೆಟ್ನಲ್ಲೂ ಡುಪ್ಲೆಸಿಸ್ ಇಂಟರ್ನ್ಯಾಷನಲ್ ಮ್ಯಾಚ್ಗಳನ್ನ ಆಡ್ತಿಲ್ಲ. ಆದ್ರೂ ಐಪಿಎಲ್ನಲ್ಲಿ ಫಾಫ್ ಡುಪ್ಲೆಸಿಸ್ ಆರ್ಸಿಬಿ ಕ್ಯಾಪ್ಟನ್ ಆಗಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಓಪನರ್ ಆಗಿ ಅಖಾಡಕ್ಕಿಳಿಯಲಿದ್ದಾರೆ. ಹಾಗಂತಾ ಡುಪ್ಲೆಸಿಸ್ ಕೆಪಾಸಿಟಿ ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ. 39 ವರ್ಷಗಳಾಗಿದ್ರೂ ಡುಪ್ಲೆಸಿಸ್ ಈಗಲೂ ವನ್ ಆಪ್ ದಿ ಡೇಂಜರಸ್ ಬ್ಯಾಟ್ಸ್ಮನ್. ಆದ್ರೆ ಯಾವುದೇ ಇಂಟರ್ನ್ಯಾಷನಲ್ ಮ್ಯಾಚ್ಗಳನ್ನ ಆಡದೆ, ನೇರವಾಗಿ ಐಪಿಎಲ್ನಲ್ಲಿ ಆಡ್ತಾ ಇರೋದ್ರಿಂದ ಡುಪ್ಲೆಸಿಸ್ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗಲ್ವಾ ಅನ್ನೋ ಪ್ರಶ್ನೆ ಕೂಡ ಕಾಡೋದು ಸುಳ್ಳಲ್ಲ.
ಇನ್ನು ವಿರಾಟ್ ಕೊಹ್ಲಿ ಕೂಡ ಸದ್ಯ ಟೀಂ ಇಂಡಿಯಾ ಪರ ಯಾವುದೇ ಟಿ-20 ಮ್ಯಾಚ್ಗಳನ್ನ ಆಡ್ತಾ ಇಲ್ಲ. 2022ರ ಟಿ-20 ವರ್ಲ್ಡ್ಕಪ್ ಬಳಿಕ ಕೊಹ್ಲಿ ಇಂಟರ್ನ್ಯಾಷನಲ್ ಟಿ-20 ಮ್ಯಾಚ್ಗಳನ್ನ ಆಡಿಲ್ಲ. ಬಟ್ ಕೊಹ್ಲಿ ಎಕ್ಸ್ಪ್ಷನಲ್ ಕೇಸ್.. ಟಿ-20 ಮ್ಯಾಚ್ಗಳನ್ನ ಆಡಿಲ್ಲ ಅಂತಾ ವರಿ ಮಾಡಬೇಕಾದ ಅವಶ್ಯಕತೆ ಇಲ್ಲ. ಟೀಂ ಇಂಡಿಯಾ ಪರ ಟಿ-20 ಮ್ಯಾಚ್ಗಳನ್ನ ಆಡಿಲ್ಲ ಅನ್ನೋದನ್ನ ಬಿಟ್ರೆ ಕೊಹ್ಲಿ ಫಾರ್ಮ್ ಬಗ್ಗೆ ಯಾವುದೇ ಡೌಟ್ ಇಲ್ಲ. 2024ರ ಐಪಿಎಲ್ನಲ್ಲೂ ಕೊಹ್ಲಿ ಬ್ಯಾಟ್ನಿಂದ ರನ್ ಬರೋದು ಗ್ಯಾರಂಟಿ.
ಇನ್ನು ರಜತ್ ಪಾಟೀದಾರ್ ಕೂಡ ಅಷ್ಟೇ, ಟೀಂ ಇಂಡಿಯಾ ಪರ ಟಿ-20 ಟೀಮ್ನಲ್ಲಿ ಇನ್ನೂ ಕೂಡ ರಜತ್ ಪಾಟೀದಾರ್ ಡೆಬ್ಯೂನೇ ಆಗಿಲ್ಲ..ರಜತ್ ಒಬ್ಬ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಟ್ ರಜತ್ ಪಾಟೀದಾರ್ ವಿಚಾರದಲ್ಲಿ ಪ್ರಾಬ್ಲಂ ಇರೋದು ಕನ್ಸಿಸ್ಟೆನ್ಸಿಯಲ್ಲಿ. ತಮ್ಮ ಪರ್ಫಾಮೆನ್ಸ್ನಲ್ಲಿ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಲೇಬೇಕಿದೆ. ಹೀಗಾಗಿ 2024ರ ಐಪಿಎಲ್ನಲ್ಲಿ ರಜತ್ ಪಾಟೀದಾರ್ ಯಾವ ರೀತಿ ಆಡಬಹುದು ಅನ್ನೋ ಕುತೂಹಲ ಇದೆ.
ಇನ್ನು ಮುಂಬೈ ಇಂಡಿಯನ್ಸ್ ಜೊತೆಗಿನ ಟ್ರೇಡ್ ಡೀಲ್ನಲ್ಲಿ 17 ಕೋಟಿ ಕೊಟ್ಟು ಕ್ಯಾಮರೂನ್ ಗ್ರೀನ್ರನ್ನ ಆರ್ಸಿಬಿಗೆ ಸೇರಿಸಿಕೊಳ್ಳಲಾಗಿದೆ. ಪ್ರಾಬ್ಲಂ ಆಗಿರೋದೇನಂದ್ರೆ ಕ್ಯಾಮರೂನ್ ಗ್ರೀನ್ ಕೂಡ ಸದ್ಯ ಆಸ್ಟ್ರೇಲಿಯಾ ಪರ ಟಿ-20 ಮ್ಯಾಚ್ಗಳಲ್ಲಿ ಪರ್ಫಾಮ್ ಮಾಡ್ತಾ ಇಲ್ಲ. ಇತ್ತೀಚಿನ ದಿನಗಳಲ್ಲಿ ಕ್ಯಾಮರೂನ್ ಗ್ರೀನ್ರಿಂದ ಬ್ರೇಕ್ಥ್ರೂ ನೀಡುವಂಥಾ ಯಾವುದೇ ಇನ್ನಿಂಗ್ಸ್ ಬಂದಿಲ್ಲ. ಆಸ್ಟ್ರೇಲಿಯಾದಲ್ಲಿ ನಡೀತಾ ಇರೋ ಬಿಬಿಎಲ್ ಟಿ-20 ಟೂರ್ನಿಯ್ಲೂ ಕ್ಯಾಮರೂನ್ ಗ್ರೀನ್ ಆಡ್ತಿಲ್ಲ. ಹೀಗಾಗಿ 2024ರ ಐಪಿಎಲ್ನಲ್ಲಿ ಆರ್ಸಿಬಿ ಪರ ಕ್ಯಾಮರೂನ್ ಗ್ರೀನ್ ಯಾವ ರೀತಿ ಪರ್ಫಾಮ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಷ್ಟೇ.
ಆರ್ಸಿಬಿ ಪರ ಫಿನಿಷರ್ ಅಂತಾ ಗುರುತಿಸಿಕೊಂಡಿರೋದು ದಿನೇಶ್ ಕಾರ್ತಿಕ್. ಆದ್ರೆ ದಿನೇಶಣ್ಣ ಸದ್ಯ ಟೀಂ ಇಂಡಿಯಾ ಪರ ಅಂತೂ ಆಡ್ತಾ ಇಲ್ಲ. 2022ರ ಟಿ-20 ವರ್ಲ್ಡ್ಕಪ್ ಬಳಿಕ ದಿನೇಶ್ ನ್ಯಾಷನಲ್ ಟೀಮ್ನಿಂದ ಡ್ರಾಪ್ ಆಗಿದ್ದಾರೆ. ಇನ್ನು ರಿ ಎಂಟ್ರಿಯಾಗೋದು ಕೂಡ ಡೌಟೇ. ಆದ್ರೆ 2023ರ ಐಪಿಎಲ್ನಲ್ಲೂ ದಿನೇಶ್ ಕಾರ್ತಿಕ್ ಹೇಳಿಕೊಳ್ಳುವಂಥಾ ಪರ್ಫಾಮೆನ್ಸ್ ನೀಡಿರಲಿಲ್ಲ. ಹೀಗಾಗಿ 2024ರ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಪರ್ಫಾಮ್ ಮಾಡ್ತಾರೆ ಅನ್ನೋ ಕಾನ್ಫೆಡೆನ್ಸ್ ಅಂತೂ ಸದ್ಯಕ್ಕೆ ಯಾರಿಗೂ ಇಲ್ಲ. ಹೀಗಾಗಿ ದಿನೇಶ್ ಕಾರ್ತಿಕ್ ಆರ್ಸಿಬಿಗೆ ವರವಾಗ್ತಾರಾ ಇಲ್ಲಾ ವರಿಯಾಗ್ತಾರಾ ನೋಡಬೇಕಿದೆ.
ಆದ್ರೆ ಒಬ್ಬ ಬ್ಯಾಟ್ಸ್ಮನ್ ವಿಚಾರವಾಗಿ ಆರ್ಸಿಬಿಗೆ ಈಗ ದೊಡ್ಡ ರಿಲೀಫ್ ಸಿಕ್ಕಿದೆ. ಗ್ಲೇನ್ ಮ್ಯಾಕ್ಸ್ವೆಲ್.. ಆರ್ಸಿಬಿ ಫೈರ್ಬ್ರ್ಯಾಂಡ್ ಮ್ಯಾಕ್ಸ್ವೆಲ್ ಐಪಿಎಲ್ಗೆ ಬೇಕಾದ ಎಲ್ಲಾ ತಯಾರಿ ನಡೆಸ್ತಾ ಇದ್ದಾರೆ. ಸದ್ಯ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಟಿ-20 ಲೀಗ್ನ್ನ ಆಡ್ತಾ ಇದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ಕ್ಯಾಪ್ಟನ್ ಆಗಿರೋ ಗ್ಲೇನ್ ಮ್ಯಾಕ್ಸ್ವೆಲ್ ಹೋಬರ್ಟ್ ಹರಿಕೇನ್ಸ್ ವಿರುದ್ಧದ ಮ್ಯಾಚ್ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಟೀಮ್ನ್ನ ಗೆಲ್ಲಿಸಿದ್ದಾರೆ. ಫಸ್ಟ್ ಬ್ಯಾಟಿಂಗ್ ಮಾಡಿದ ಹೋಬರ್ಟ್ ಹರಿಕೇನ್ಸ್ 19.4 ಓವರ್ಗಳಲ್ಲಿ 155 ರನ್ ಗಳಿಸಿತ್ತು.
ಆದ್ರೆ ಮಳೆ ಬಂದಿದ್ರಿಂದಾಗಿ ಡಕ್ವರ್ತ್ ಲೂಯಿಸ್ ರೂಲ್ಸ್ ಪ್ರಕಾರ ಮೆಲ್ಬೋರ್ನ್ ಸ್ಟಾರ್ಸ್ಗೆ 7 ಓವರ್ಗಳಲ್ಲಿ 67 ರನ್ಗಳ ಟಾರ್ಗೆಟ್ ಫಿಕ್ಸ್ ಮಾಡಲಾಗಿತ್ತು. ಈ ವೇಳೆ ಬ್ಯಾಟಿಂಗ್ಗೆ ಇಳಿದ ಗ್ಲೇನ್ ಮ್ಯಾಕ್ಸ್ವೆಲ್ ಕೇವಲ 18 ಬಾಲ್ಗಳಲ್ಲಿ 35 ರನ್ ಚಚ್ಚಿದ್ರು. ಮ್ಯಾಕ್ಸ್ವೆಲ್ ಇನ್ನಿಂಗ್ಸ್ನ ಸ್ಪೆಷಾಲಿಟಿ ಏನಂದ್ರೆ ಸ್ವಿಚ್ ಹಿಟ್. ಮ್ಯಾಚ್ನ 5ನೇ ಓವರ್ನ ವೇಳೆ ಗ್ಲೇನ್ ಮ್ಯಾಕ್ಸ್ವೆಲ್ ಸ್ವಿಚ್ ಹಿಟ್ ಮೂಲಕ ಸಿಕ್ಸ್ ಹೊಡೆದಿದ್ರು. ಐಪಿಎಲ್ಗೂ ಮುನ್ನ ಮ್ಯಾಕ್ಸ್ವೆಲ್ ಬಿಗ್ಬ್ಯಾಶ್ ಲೀಗ್ನಲ್ಲಿ ಈ ರೀತಿ ಪರ್ಫಾಮ್ ಮಾಡಿರೋದ್ರಿಂದ ಆರ್ಸಿಬಿಗೆ ಮತ್ತು ಫ್ಯಾನ್ಸ್ಗೆ ಗುಡ್ನ್ಯೂಸ್ನಂತಾಗಿದೆ.
ಇವೆಲ್ಲದ್ರ ಮಧ್ಯೆ, ಈ ಬಾರಿಯ ಆಕ್ಷನ್ನಲ್ಲಿ ತನ್ನ ಮೇನ್ ಬೌಲರ್ಸ್ಗಳಾಗಿ ವೆಸ್ಟ್ಇಂಡೀಸ್ನ ಅಲ್ಜಾರ ಜೋಸೆಫ್ ಮತ್ತು ಯಶ್ ದಯಾಳ್ರನ್ನ ಬೈ ಮಾಡಿರೋ ಬಗ್ಗೆ ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಒಂದಷ್ಟು ಸ್ಪಷ್ಟನೆ ನೀಡಿದ್ದಾರೆ. ಆ್ಯಂಡಿ ಫ್ಲವರ್ ಹೇಳಿರೋ ಪ್ರಕಾರ ಯಶ್ ದಯಾಳ್, ನ್ಯೂ ಬಾಲ್ನಲ್ಲಿ ತುಂಬಾ ಚೆನ್ನಾಗಿ ಬೌಲಿಂಗ್ ಮಾಡ್ತಾರೆ. ಸ್ವಿಂಗ್ ಬೌಲರ್ ಬೇರೆ. ವಿಕೆಟ್ ತೆಗೆಯೋ ಪೊಟೆನ್ಷಿಯಲ್ನ್ನ ಕೂಡ ಹೊಂದಿದ್ದಾರೆ. ಆದ್ರೆ ಡೆತ್ ಓವರ್ನಲ್ಲಿ ದಯಾಳ್ ಬೌಲಿಂಗ್ ಮೇಲೆ ಒಂದಷ್ಟು ವರ್ಕ್ಔಟ್ ಮಾಡಬೇಕಿದೆಯಷ್ಟೇ ಅಂತಾ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
ಇನ್ನು ಅಲ್ಜಾರಿ ಜೋಸೆಫ್ ಒಬ್ಬ ಕ್ವಾಲಿಟಿ ಬೌಲರ್ ಆಗಿದ್ದು, ಟಿ-20 ಲೀಗ್ ಟೂರ್ನಿಗಳಲ್ಲಿ ಫಾಫ್ ಡುಪ್ಲೆಸಿಸ್ ಅಲ್ಜಾರಿ ಜೋಸೆಫ್ ಜೊತೆಗೆ ಆಡಿದ್ದಾರೆ. ಜೋಸೆಫ್ ಕ್ಯಾಲಿಬರ್ ಏನು, ಅವರನ್ನ ಹೇಗೆ ಯೂಸ್ ಮಾಡಬೇಕು ಅನ್ನೋದು ಡುಪ್ಲೆಸಿಸ್ಗೆ ಚೆನ್ನಾಗಿಯೇ ಗೊತ್ತಿದೆ ಅಂತಾ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ. ಈ ಎಲ್ಲಾ ರೀಸನ್ಗೋಸ್ಕರ್ ಆರ್ಸಿಬಿ ಯಶ್ ದಯಾಳ್ ಮತ್ತು ಅಲ್ಜಾರಿ ಜೋಸೆಫ್ ಮೇಲೆ ಹಣ ಸುರಿದಿದೆ. ಎನಿವೇ.. ಓವರ್ಆಲ್ ಆಗಿ ಆರಸಿಬಿ ಟೀಂ ರೆಡಿಯಾಗಿದೆ. ಇನ್ನೇನು ಕೆಲ ತಿಂಗಳುಗಳಲ್ಲಿ ಆರ್ಸಿಬಿ ಕ್ಯಾಂಪ್ ನಡೆಯುತ್ತೆ. ಎಲ್ಲಾ ಪ್ಲೇಯರ್ಸ್ಗಳು ಬೆಂಗಳೂರಲ್ಲಿ ಸೇರ್ತಾರೆ. ಐಪಿಎಲ್ಗೆ ಸ್ಟ್ರ್ಯಾಟಜಿ ಮಾಡ್ತಾರೆ. 25 ಮಂದಿ ಆಟಗಾರರ ಪೈಕಿ ಪ್ಲೇಯಿಂಗ್-11 ಹೇಗಿರಬೇಕು? ಇವೆಲ್ಲದ್ರ ಬಗ್ಗೆಯೂ ಪ್ಲ್ಯಾನಿಂಗ್ ನಡೆಯುತ್ತೆ. ಪೇಪರ್ನಲ್ಲಿ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ ತುಂಬಾ ಸ್ಟ್ರಾಂಗ್ ಆಗಿಯೇ ಇದೆ.