ಭಯಾನಕ ಗುಹೆಯಲ್ಲಿ ರಾಶಿ ರಾಶಿ ಶೂಗಳು! – ವಿಸ್ಮಯಕಾರಿ ಬಾವಲಿ ಗುಹೆ ಎಲ್ಲಿದೆ ಗೊತ್ತಾ?

ಇದು ಭಯಾನಕ ಗುಹೆ.. ಸಾವಿರಾರು ಬಾವಲಿಗಳು ನೆಲೆಸಿರುವ ಜಾಗದಲ್ಲಿ ಲೆಕ್ಕವಿಲ್ಲದಷ್ಟು ಶೂಗಳು.. ಅಬ್ಬಬ್ಬಾ… ಈ ಭಯಾನಕ ಗುಹೆ ಎಲ್ಲಿದೆ ಗೊತ್ತಾ? ಈ ಶೂಗಳು ಎಲ್ಲಿಂದ ಬಂತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹಳ್ಳಿ ಹೈದನ ಗೆಟಪ್‌ನಲ್ಲಿ ಗಿಲ್ಲಿ ನಟ – ಸರ್ವೇ ನಂಬರ್ 45 ಸಿನಿಮಾದಲ್ಲಿ ಗಿಲ್ಲಿ ಹೀರೋ
ಸ್ಪೇನ್‌ನ ಬ್ಯಾಟ್ ಕೇವ್.. ಈ ಬಾವಲಿ ಗುಹೆಯೊಂದರಲ್ಲಿ ಸುಮಾರು 6 ಸಾವಿರ ವರ್ಷಗಳಷ್ಟು ಹಳೆಯ ಶೂಗಳು ಪತ್ತೆಯಾಗಿದೆ. ಸ್ಪೇನ್‌ನಲ್ಲಿ ನಡೆದ ಸಂಶೋಧನೆ ವೇಳೆ ಈ ಶೂಗಳು ಪತ್ತೆಯಾಗಿದೆ. ಹುಲ್ಲುಗಳು ಮತ್ತು ಚರ್ಮ, ಸುಣ್ಣ, ಸೆಣಬು ಬಳಸಿ ಈ ಶೂಗಳನ್ನು ಬಳಸಲಾಗಿದ್ದು, ಇದೊಂದು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಶೂ ಅನ್ನೋದು ಸಂಶೋಧನೆಯಲ್ಲಿ ಗೊತ್ತಾಗಿದೆ.
ವಿಜ್ಞಾನಿಗಳಿಗೆ ಸಿಕ್ಕಿರುವ ಶೂಗಳು ಸುಮಾರು 6 ಸಾವಿರ ವರ್ಷದಷ್ಟು ಹಳೆಯದಾಗಿದ್ದು, 19ನೇ ಶತಮಾನದಲ್ಲಿ ಗಣಿಗಾರಿಕೆಯಿಂದ ಸೃಷ್ಟಿಯಾದ ಆಂಡಲೂಸಿಯಾದಲ್ಲಿರುವ ಬಾವಲಿ ಗುಹೆಯಲ್ಲಿ ಇದು ಪತ್ತೆಯಾಗಿದೆ. ಬಾರ್ಸಿಲೋನಾದ ಸ್ವಾಯತ್ತ ವಿಶ್ವವಿದ್ಯಾಲಯ ಮತ್ತು ಸ್ಪೇನ್‌ನ ಅಲ್ಕಾಲಾ ವಿಶ್ವವಿದ್ಯಾಲಯದ ಸಂಶೋಧಕರು ಈ ಗುಹೆಯಲ್ಲಿ ಬಾಸ್ಕೆಟ್ ಮತ್ತು ಕೆಲ ಉಪಕರಣಗಳು ಪತ್ತೆಯಾಗಿವೆ.
ಈ ವಸ್ತುಗಳು ಇದುವರೆಗೆ ದಕ್ಷಿಣ ಯುರೋಪ್‌ನಲ್ಲಿ ಕಂಡು ಬಂದ ಸಂರಕ್ಷಿಸಲ್ಪಟ್ಟ ಅತ್ಯಂತ ಹಳೆಯ ವಸ್ತುಗಳು ಎಂದು ಈ ಅಧ್ಯಯನ ವರದಿಯಲ್ಲಿ ಗೊತ್ತಾಗಿದೆ. ಇದರಲ್ಲಿ ಅಳವಡಿಸಲಾಗಿರುವ ತಾಂತ್ರಿಕ ವೈವಿಧ್ಯತೆ ಹಾಗೂ ಮತ್ತು ಅಳವಡಿಸಲಾಗಿರುವ ಕಚ್ಚಾ ವಸ್ತುಗಳು ನಮ್ಮ ಪೂರ್ವಜರ ಸಮುದಾಯದ ಕೌಶಲ್ಯಗಳನ್ನು ಎತ್ತಿ ತೋರಿಸುತ್ತಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಅಧ್ಯಯನದ ಪ್ರಕಾರ, ಪ್ರಾಚೀನ ಪಾದರಕ್ಷೆಗಳನ್ನು 1857 ರಲ್ಲಿ ಮೊದಲು ಕಂಡುಹಿಡಿಯಲಾಯಿತು. ಸ್ಪೇನ್‌ನ ಗಣಿಕಾರರು ಈ ಗುಹೆಯನ್ನು ಲೂಟಿ ಮಾಡಿದ್ದರು. ಆದರೂ 1970ರ ದಶಕದಲ್ಲಿ ಈ ಕಲಾಕೃತಿಗಳನ್ನು ವಿಶ್ಲೇಷಿಸಿದಾಗ ಇವು ಇತ್ತಿಚಿನ ವಿಶ್ಲೇಷಣೆಗಿಂತ 1 ಸಾವಿರ ವರ್ಷಗಳಷ್ಟು ಹಳೆಯವು ಎಂಬುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ದಿನಾಂಕ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿಕೆ ಆಗಿದ್ದು, ಇದರಿಂದ ಮೊದಲು ಎಣಿಸಿದ ಇದರ ಸಮಯಕ್ಕಿಂತಲೂ 2 ಸಾವಿರ ವರ್ಷದಷ್ಟು ಇವು ಹಳೆಯವು. ಗುಹೆಯಲ್ಲಿನ ಕಡಿಮೆ ತೇವಾಂಶ ಮತ್ತು ತಂಪಾದ ಗಾಳಿಯು ಕಲಾಕೃತಿಗಳನ್ನು ಅಸಾಮಾನ್ಯವಾಗಿ ಉತ್ತಮವಾಗಿ ಸಂರಕ್ಷಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸೆಟ್‌ನಲ್ಲಿರುವ ಕೆಲವು ಕಲಾಕೃತಿಗಳು 9,000 ವರ್ಷಗಳ ಹಿಂದಿನವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನೋಡಿರಿ

