ಮಚ್ಚು ಹಿಡಿದು ರೀಲ್ಸ್‌ ಕೇಸ್‌ – ರಜತ್‌ ಗೆ ಮತ್ತೆ ಶುರುವಾಯ್ತು ಕಾನೂನು ಸಂಕಷ್ಟ

ಮಚ್ಚು ಹಿಡಿದು ರೀಲ್ಸ್‌ ಕೇಸ್‌ – ರಜತ್‌ ಗೆ ಮತ್ತೆ ಶುರುವಾಯ್ತು ಕಾನೂನು ಸಂಕಷ್ಟ

ಬಿಗ್‌ ಬಾಸ್‌ ಖ್ಯಾತಿಯ ರಜತ್‌ ಕಿಶನ್‌ ಗೆ ಕಾನೂನು ಸಂಕಷ್ಟ ತಪ್ಪುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್‌ ಮಾಡಿ ಜೈಲು ಪಾಲಾಗಿದ್ರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಪೊಲೀಸರು ಮತ್ತೆ ನೊಟೀಸ್‌ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚು – ರೈತರಿಗೆ ಅನುಕೂಲ ಆಗಲಿದ್ಯಾ ಮುಂಗಾರು ಮಳೆ?

ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಕಳೆದ ತಿಂಗಳು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಅದು ರಿಯಲ್ ಮಚ್ಚು ಎನ್ನುವುದು ಗೊತ್ತಾಗಿತ್ತು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ. ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ನೋಟಿಸ್ ನೀಡಿದ್ದು, ಬುಧವಾರ ವಿಚಾರಣೆ ಬರಲು ಸೂಚಿಸಲಾಗಿದೆ.

ಇನ್ನೂ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕೇಸ್‌ನಲ್ಲಿ ಮಾ.24 ರಂದು ಅರೆಸ್ಟ್ ಆಗಿದ್ದ ರಜತ್ ಮತ್ತು ವಿನಯ್ ಗೌಡ ಮಾ.28 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿಗೆ ಹೋಗಿ ಬಂದ ಬಳಿಕ ರಜತ್‌ ಹಾಗೂ ವಿನಯ್‌ ಮಧ್ಯೆ ಮನಸ್ಥಾಪ ಉಂಟಾಗಿದೆ. ದೋಸ್ತಿಗಳು ಈಗ ದೂರ ದೂರ ಆಗಿದ್ದಾರೆ.

Shwetha M