ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಿದ್ಧತೆ – ಮೊದಲ ಬಾರಿಗೆ 5 ದಿನ ನಡೆಯಲಿದೆ ಜಾತ್ರೆ

ಬಸವನಗುಡಿ ಕಡಲೆಕಾಯಿ ಪರಿಷೆಗೆ ಸಿದ್ಧತೆ – ಮೊದಲ ಬಾರಿಗೆ 5 ದಿನ ನಡೆಯಲಿದೆ ಜಾತ್ರೆ

ಬೆಂಗಳೂರಿನಲ್ಲಿ ಗ್ರಾಮೀಣ ಸೊಗಡಿನ ಜಾತ್ರೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಕಡಲೆಕಾಯಿ ಪರಿಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪ್ರತಿ ವರ್ಷ ಮೂರು ದಿನ ನಡೆಯುತ್ತಿದ್ದ ಪರಿಷೆ ಈ ಬಾರಿ ಐದು ದಿನಗಳ ಕಾಲ ನಡೆಯಲಿದೆ.

ಇದನ್ನೂ ಓದಿ: ಸಂಜು ಸ್ಯಾಮ್ಸನ್‌ಗಾಗಿ ಸ್ಟಾರ್ ಆಟಗಾರನ ಬಿಡುತ್ತಾ CSK ?– ಚೆನ್ನೈ ತಂಡ ಬಿಡ್ತಾರಾ ರವೀಂದ್ರ ಜಡೇಜಾ?

ಪ್ರತಿವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿಯಾಗಿದೆ. ವಿಶೇಷ ಅಂದ್ರೆ ಈ ವರ್ಷ ಐದು ದಿನ ಪರಿಷೆ ಮಾಡಲಾಗುತ್ತಿದೆ. ಇದೇ ನವೆಂಬರ್ 17 ರಿಂದ 21 ರವರೆಗೆ ನಡೆಯುವ ಈ ಪರಿಷೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿದ್ದು, ಈ ಬಾರಿಯೂ ಅದೇ ಮಾದರಿಯಲ್ಲಿ ಆಚರಣೆ ಮಾಡಲಾಗುವುದು.

ಇನ್ನು ಐತಿಹಾಸಿಕ ಹಾಗೂ ಲಕ್ಷಾಂತರ ಮಂದಿ ಸಾಕ್ಷಿಯಾಗುವ ಬಸವನಗುಡಿ ಕಡಲೆಕಾಯಿ ಪರಿಷೆಗೆ ನವೆಂಬರ್‌ 17ರಂದು ಚಾಲನೆ ನೀಡಲಾಗುತ್ತಿದೆ. ಕಡೆಯ ಕಾರ್ತಿಕ ಮಾಸ ನವೆಂಬರ್ 17 ರಿಂದ ಆರಂಭವಾದ ಪರಿಷೆ 5 ದಿನಗಳ ಕಾಲ ನಡೆಯಲಿದೆ. 21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ‌ ವಿಶೇಷ ಪೂಜೆ ಸಲ್ಲಿಸುವ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಸೇರಿ ಹಲವು ಮಂದಿ ಉಪಸ್ಥಿತರಿರಲಿದ್ದಾರೆ.

ಕಳೆದ ವರ್ಷ ಪರಿಷೆಗೆ ಸುಮಾರು 5 ಲಕ್ಷ ಮಂದಿ ಭಾಗಿ ಆಗಿದ್ದು, ಈ ಬಾರಿ ಇನ್ನೂ ಹೆಚ್ಚಿನ ಜನಸಾಗರ ಸೇರುವ ನಿರೀಕ್ಷೆ ಇದೆ. ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿದೆ. ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ. ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಅಳವಡಿಸಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಇದೇ ನವೆಂಬರ್​ 8ರಿಂದ ಮಲ್ಲೇಶ್ವರ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗಲಿದ್ದು, ನವೆಂಬರ್​ 17ರಿಂದ ಬಸವನಗುಡಿ ಪರಿಷೆ ಕೂಡ ಎದುರಾಗಲಿದೆ. ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ ಸ್ವಚ್ಛತೆ ನೈರ್ಮಲ್ಯಕ್ಕೆ‌ ಒತ್ತು ಮತ್ತು ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ.

ಇನ್ನು ಮಲ್ಲೇಶ್ವರ ಕಡಲೆಕಾಯಿ ಪರಿಷೆ ಈಗಾಗಲೇ ಆರಂಭವಾಗಿದೆ. ಕಾಡುಮಲ್ಲೇಶ್ವರ ಗೆಳಯರ ಬಳಗದ ಶ್ರೀ ಭ್ರಮರಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ನವೆಂಬರ್ 8 ಕಡಲೆಕಾಯಿ ಪರಿಷೆ ಆರಂಭವಾಗಿದ್ದು, 10ರಂದು ಕೊನೆಗೊಳ್ಳಲಿದೆ. ಈ ರೈತ ಸ್ನೇಹಿ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮೂಲಕ ರೈತರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

Shwetha M