ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ, 2028ಕ್ಕೆ ನಾನೇ ಸಿಎಂ ಆಗುತ್ತೇನೆ : ಯತ್ನಾಳ್

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ, 2028ಕ್ಕೆ ನಾನೇ ಸಿಎಂ ಆಗುತ್ತೇನೆ : ಯತ್ನಾಳ್

ಬಿಜೆಪಿಯಿಂದ  ಉಚ್ಚಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಪ್ರಾ ದೇಶಿಕ ಪಕ್ಷವನ್ನು ಸ್ಥಾಪಿಸುವ  ಬಗ್ಗೆ ಮಾತನಾಡಿದ್ದಾರೆ.  ದೆಹಲಿಯಲ್ಲಿ  ಮಾತನಾಡಿದ ಯತ್ನಾಳ್ ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ. ಪುತ್ರನ ಮದುವೆಯ ಆಹ್ವಾನ ನೀಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಫೈನಲ್ ಮ್ಯಾಚ್​ಗೂ ಮುನ್ನ ನನ್ನ ಅಕ್ಕ-ಭಾವ ತೀರಿಕೊಂಡರು..‌ ಈ ಗೆಲುವು ಅವರಿಗೆ ಅರ್ಪಣೆ – ಇಶಾನ್ ಕಿಶನ್!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಅವರಂತಹ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲು ಇಷ್ಟಪಡುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಕರೆಯುವ ನಿರೀಕ್ಷೆಯಲ್ಲಿ ಇರಲು ತಾನು ಹುಚ್ಚನಲ್ಲ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳ, ಬಿಹಾರ್ ಅಥವಾ ಉತ್ತರ ಪ್ರದೇಶ ಚುನಾವಣೆಗಳ ನಂತರ ಬಿಜೆಪಿ ಕರೆದರೂ ನಿರ್ಧಾರ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹೋಳಿ ಬಿದ್ದಿದ್ದಕ್ಕೆ ಯುವಕನ ಕೊ*ಲೆ – ದೆಹಲಿ MCDಯಿಂದ ಆರೋಪಿಗಳ ಮನೆ ಧ್ವಂಸ

ಯಾರ ಕಾಲಿಗೂ ಬಿದ್ದು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತ ಹೇಳಲು ಬಂದಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ. ನಾನೇ ಸಿಎಂ ಆಗುತ್ತೇನೆ. 2028ಕ್ಕೆ ನಾನೇ ಸಿಎಂ ಆಗ್ತೀನಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ

Kishor KV

Leave a Reply

Your email address will not be published. Required fields are marked *