ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್ – ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದ ಸಾಹಿತಿ

ಬೂಕರ್ ಪ್ರಶಸ್ತಿ ವಿಜೇತೆ ಬಾನುಮುಷ್ತಾಕ್ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಈ ಬಾರಿಯ ದಸರಾ ಉದ್ಘಾಟನೆ ನೆರವೇರಿಸಿದ್ದ ಬಾನು ಮುಷ್ತಾಕ್ ಹಾಸನಾಂಬೆ ದೇಗುಲಕ್ಕೆ ಭೇಟಿ ಮಾಡಿ ದೇವಿಯ ದರ್ಶನ ಪಡೆದರು.
ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ಇನ್ಮುಂದೆ ನಾವು ತೆರಿಗೆ ಕಟ್ಟಲ್ಲ ಎಂದು CM, DCMಗೆ ಪತ್ರ ಬರೆದ ಐಟಿ-ಬಿಟಿ ಮಂದಿ
ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕೆ ಅಪಾರ ಭಕ್ತರು ಆಗಮಿಸುತ್ತಿದ್ದಾರೆ. ಬುಧವಾರ ಬೆಳಗ್ಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹಾಸನಾಂಬೆಯ ದರ್ಶನ ಮಾಡಿದರು. ಈ ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಬಾನು ಮುಷ್ತಾಕ್ ಹಾಸನಾಂಬೆ ದರ್ಶನ ಪಡೆದು ಆಶೀರ್ವಾದ ಪಡೆದರು.
ಬಾನು ಮುಷ್ತಾಕ್ ಅವರು ಪ್ರತಿ ಬಾರಿಯೂ ಈ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ದೇವಿಯ ದರ್ಶನದ ನಂತರ ಮಾತನಾಡಿದ ಬಾನು ಮುಷ್ತಾಕ್, ನಾನು ಚಿಕ್ಕವಳಿದ್ದಾಗ ನನ್ನ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತಿದ್ದ ದಿನಗಳು ನೆನಪಾದವು. ಇವತ್ತು ನಿಮ್ಮ ಧ್ಯಾನಕ್ಕೆ ಬಿದ್ದಿದ್ದೇನೆ. ಹಿಂದೆ ಮುಸ್ಲಿಂ ಸಮುದಾಯವೂ ಹಾಸನಾಂಬೆಯನ್ನ ಪೂಜಿಸುತ್ತಿದ್ದರು. ನಮ್ಮ ತಾಯಿಯ ಕಾಲದಲ್ಲಿ ದೇವಿಯನ್ನ ಹಸನ್ ಬಿ ಹುಸೇನ್ ಬೀ ಎಂಬ ನಂಬಿಕೆಯಲ್ಲಿ ಪರಿಚಯಿಸುತ್ತಿದ್ರು. ಆ ಕಾಲದಲ್ಲಿ ಮುಸ್ಲಿಂ ಪೂಜೆಯಂತೆ ಸಕ್ಕರೆ ಊದಿನ ಕಡ್ಡಿ ತಂದು ದೇವಿಗೆ ಪೂಜಿಸುತ್ತಿದ್ರು. ಅಂದು ಹೆಚ್ಚಿನ ಮುಸ್ಲಿಂ ಇಲ್ಲಿಗೆ ಬರ್ತಿದ್ರು. ಈಗಲೂ ಕೆಲವರು ಬರ್ತಾರೆ. ಹಾಸನಾಂಬೆ ಒಂದು ಉತ್ತಮ ಭಾವೈಕ್ಯತಾ ಜಾಗ. ಇದು ನಮ್ಮ ಊರ ಹಬ್ಬ. ನಾವೆಲ್ಲಾ ಈ ದೇವಿ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗಿಯಾಗಬೇಕು ಎಂದರು.

ನೋಡಿರಿ

