ಬೂಕರ್‌ಗಿಲ್ಲದ ಧರ್ಮ.. ದಸರಾಕ್ಕೆ ಯಾಕೆ? – ಚಾಮುಂಡಿಗೆ ಪುಷ್ಪಾರ್ಚನೆ ಮಾಡಲ್ವಾ ಬಾನು?
ನಾಡಹಬ್ಬದಲ್ಲಿ ಇದೆಂಥಾ ಧರ್ಮ ರಾಜಕೀಯ?

ಬೂಕರ್‌ಗಿಲ್ಲದ  ಧರ್ಮ.. ದಸರಾಕ್ಕೆ ಯಾಕೆ? – ಚಾಮುಂಡಿಗೆ ಪುಷ್ಪಾರ್ಚನೆ ಮಾಡಲ್ವಾ ಬಾನು?ನಾಡಹಬ್ಬದಲ್ಲಿ ಇದೆಂಥಾ ಧರ್ಮ ರಾಜಕೀಯ?

ನಾಡಹಬ್ಬ ಮೈಸೂರು ದಸರಾ  ಅಂದ್ರೆ ಸಂಭ್ರಮ, ಸಡಗರ.. ಇಡೀ ವಿಶ್ವವೇ ಮೈಸೂರಿನ ಕಡೆ ತಿರುಗಿ ನೋಡುತ್ತೆ.. ಅಷ್ಟು ಖ್ಯಾತಿಯನ್ನ ಮೈಸೂರು ದಸರಾ ಹೊಂದಿದೆ. ಈ ದಸರಾ ಉದ್ಘಾಟನೆ ಮಾಡೋರಿಗೆ ಒಂದು ಬೆಲೆ ಇರುತ್ತೆ.. ಅವರಿಗೆ ವಿಶೇಷ ಗೌರವ ಇರುತ್ತೆ.. ಆದ್ರೆ  ಈ ಸಲ ದಸರಾ ಉದ್ಘಾಟನೆ ಮಾಡೋವರ ಹೆಸರು ಕೇಳಿ ಬರ್ತಿದ್ದಂತೆ ಅಪಸ್ವರ ಕೂಡ ಎದ್ದಿದೆ.

ಬೂಕರ್  ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ಮೈಸೂರಿನ ದಸರಾ ಉದ್ಘಾಟನೆ ಮಾಡಲಿದ್ದಾರೆ ಅಂತ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡುತ್ತಿದ್ದಂತೆ ಸದ್ಯ ರಾಜ್ಯದಲ್ಲಿ ಮತ್ತೊಂದು ವಿವಾದ ಶುರುವಾಗಿದ್ದು, ವಿರೋಧ ಪಕ್ಷ ಹಲವು ಮುಖಂಡರು ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ವಿರೋಧಿಸಿದ್ದಾರೆ. ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಸಹ ತಕರಾರು ತೆಗೆದಿದ್ದು, ದಸರಾ 100% ಧಾರ್ಮಿಕ ಆಚರಣೆ, ನವರಾತ್ರಿ ಉತ್ಸವ ನಡೆಯುತ್ತದೆ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತೆ. ಬಾನು ಮುಷ್ತಾಕ್​ ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಸಾಹಿತಿ ಬಾನು ಮುಷ್ತಾಕ್ ಚಾಮುಂಡಿ ಭಕ್ತೆ ಎಂದು ಹೇಳಿದ್ದಾರಾ? ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಘೋಷಿಸಿದರೆ ತಕಾರರು ಇಲ್ಲ. ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಯಾಕೆ ಸಿಎಂ ಕರೆಯುತ್ತಾರೆ? ಮಹಾರಾಜರ ಪರಂಪರೆಯನ್ನು ಸಿಎಂ ಹೀಗೆ ಹಾಳು ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು, ಅವರನ್ನು ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಎಂದು ಪ್ರತಾಪ್ ಸಿಂಹ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .

ಇದರ ನಂತ್ರ ಸಾಕಷ್ಟು ಪರ ವಿರೋಧ ಚರ್ಚೆ ಆಗುತ್ತಿದೆ. ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಾಗ ಧರ್ಮ ಇರಲಿಲ್ಲ. ಸಾಧನೆ ಮಾಡೋಕೆ ಅವರಿದೆ ಧರ್ಮ ಇರಲಿಲ್ಲ. ಅವರನ್ನ ಆಯ್ಕೆ ಮಾಡಿದ್ದು ಸರಿ ಅಂತ ಸರ್ಕಾರ ಹೇಳಿದ್ರೆ. ಹಿಂದೂ ದೇವರ ಬಗ್ಗೆ ನಂಬಿಕೆ ಇಲ್ಲದವರನ್ನ ಆಯ್ಕೆ ಮಾಡಿದ್ದು ತಪ್ಪು ಅಂತ ಬಿಜೆಪಿ ಹೇಳುತ್ತಿದೆ. ಪರವಿರೋಧದ ಚರ್ಚೆ ನಡುವೆ ಬೇರೆಯವರನ್ನ ಸರ್ಕಾರ ಆಯ್ಕೆ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ಇದರ ನಡುವೆ ಬಾನು ಮುಷ್ತಾಕ್  ಅವರು 2023ರಲ್ಲಿ ಮಾತನಾಡಿದ ವಿಡಿಯೋ ಆಗುತ್ತಿದೆ.  ಕನ್ನಡ ಭಾಷೆಯನ್ನು ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ, ನನ್ನ ಗ್ರಹಿಕೆ ಏನು ಅನ್ನೋದನ್ನ ನಿಮ್ಮ ಎದುರಿಗೆ ಇಡ್ತಿನಿ. ನನಿಮ್ಗೆ ಇಷ್ಟ ಆಗುತ್ತೋ ಕಷ್ಟ ಆಗುತ್ತೋ ಗೊತ್ತಿಲ್ಲ. ಕನ್ನಡವನ್ನು ಭಾಷೆಯಾಗಿ ಬೆಳಿಲಿಕ್ಕೆ, ಬಾನು ಮುಷ್ತಾಕ್ ಮಾತಾಡಲಿಕ್ಕೆ, ಅವರ ಮನೆಯವರು ಮಾತಾಡಲಿಕ್ಕೆ ನೀವು ಅವಕಾಶಾನೆ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡ್ಬಿಟ್ರಿ, ಕೆಂಪು ಹಳದಿ ಬಾವುಟವನ್ನು ಅರಿಶಿನ ಕುಂಕುಮ ಹಚ್ಚಿಬಿಟ್ರಿʼ ಎಂದರು. ಅಂದ್ರೆ ಕನ್ನಡಕ್ಕೆ ಕೆಂಪು ಅರಿಶಿನ ಬಣ್ಣ ಹಚ್ಚಿ ಹಿಂದೂ ಧರ್ಮದ ದೇವತೆಯಂತೆ ಮಾಡಿದ್ದೀರಾ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಕನ್ನಡವನ್ನ ಭುವನೇಶ್ವರಿಯಾಗಿ ಒಪ್ಪದ ಈಕೆ ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಬಾನು ಅನ್ನೋ ಪ್ರಶ್ನೆ ಮಾಡುತ್ತಿದ್ದಾರೆ.

Kishor KV