ವಿಮಾನವೇರಿ ಜಪಾನ್ಗೆ ಹೊರಟ ಬನ್ನೇರುಘಟ್ಟದ ಆನೆಗಳು! – ಏನಿದು ಅಂತಾರಾಷ್ಟ್ರೀಯ ವಿನಿಮಯ?

ಬನ್ನೇರುಘಟ್ಟ ಜೈವಿಕ ಉದ್ಯಾನವನ ಆನೆಗಳಿಗೆ ಈಗ ವಿಮಾನದಲ್ಲಿ ಪ್ರಯಾಣಿಸೋ ಸೌಭಾಗ್ಯ ಬಂದೊದಗಿದೆ. ಇದೀಗ ಬನ್ನೇರುಘಟ್ಟದಲ್ಲಿರುವ ಆನೆಗಳು ಜಪಾನ್ಗೆ ಪ್ರಯಾಣ ಬೆಳೆಸಲಿವೆ.
ಇದನ್ನೂ ಓದಿ: ಗಗನಾ ಡ್ರೋನ್ ವಿನ್ನರ್ ಅಲ್ವಾ? – ರಕ್ಷಕ್, ಸುನೀಲ್.. ಯಾರಿಗೆ ಕಪ್?
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತಿಹಾಸದಲ್ಲೇ ಮೊದಲ ಬಾರಿಗೆ, ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದೊಂದಿಗೆ ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ ಜೊತೆ ಅಂತರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಅಂಗವಾಗಿ 4 ಆನೆಗಳನ್ನ ಜಪಾನ್ಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳಾದ ಸುರೇಶ್ (8), ಗೌರಿ ( 9 ), ಶೃತಿ (7) ತುಳಸಿ (5) ಆನೆಗಳನ್ನ ಜಪಾನ್ಗೆ ನೀಡಲಾಗುತ್ತಿದೆ. ಇನ್ನು ಜಪಾನ್ನಿಂದ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳನ್ನು ತರಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್ವೇಸ್ನ ಸರಕು ವಿಮಾನ B777-200F ದಲ್ಲಿ ಜಪಾನ್ ದೇಶದ ಒಸಾಕಾ ಕಾನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಆಗಲಿವೆ. ಸುಮಾರು 20 ಗಂಟೆಗಳ ಪ್ರಯಾಣಕ್ಕೆ ತಯಾರಿ ಮಾಡಲಾಗಿದೆ. ಈಗಾಗಲೇ ಆನೆಗಳಿಗೆ ವಿಮಾನ ಪ್ರಯಾಣಕ್ಕೆ ತರಬೇತಿ ನೀಡಲಾಗಿದೆ. ಪಶುವೈದ್ಯರು ಮತ್ತು ಪಾಲಕರ ತಂಡವು ಆನೆಗಳೊಂದಿಗೆ ತೆರಳಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ತರಬೇತಿ ನೀಡಲಿದ್ದು, ಇದು ಪ್ರಾಣಿ ಸಂರಕ್ಷಣೆ ಮತ್ತು ಅಂತರಾಷ್ಟ್ರೀಯ ಸಹಭಾಗಿತ್ವದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ನೋಡಿರಿ

