ಬ್ಯಾಂಕ್‌ ಉದ್ಯೋಗಿಳಿಗೆ ಗುಡ್‌ ನ್ಯೂಸ್‌ – ಇನ್ನು ಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸ!

ಬ್ಯಾಂಕ್‌ ಉದ್ಯೋಗಿಳಿಗೆ ಗುಡ್‌ ನ್ಯೂಸ್‌ – ಇನ್ನು ಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸ!

ಸಾಫ್ಟ್‌ವೇರ್ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ವಾರದ 5 ದಿನಗಳಲ್ಲಿ ಮಾತ್ರ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಶನಿವಾರ ಹಾಗೂ ಭಾನುವಾರ ಅವರಿಗೆ ವಾರದ ರಜೆ ನೀಡಲಾಗುತ್ತಿದೆ. ಇನ್ನೂ ಬ್ಯಾಂಕ್ ಗಳಲ್ಲಿ ತಿಂಗಳ 2 ಹಾಗೂ 4 ನೇ ಶನಿವಾರದಂದು ರಜೆ ನೀಡುತ್ತಾ ಬರಲಾಗಿದೆ. ಇದೀಗ ಬ್ಯಾಂಕ್ ಗಳ ವಾರದ ರಜೆ ಮತ್ತು ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ.

ಬ್ಯಾಂಕ್ ಉದ್ಯೋಗಿಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ನೀಡುವ ಬಗ್ಗೆ ಭಾರತೀಯ ಬ್ಯಾಂಕುಗಳ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಗುವುದಷ್ಟೇ  ಬಾಕಿ ಉಳಿದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿವಿಧ ನಿಗಮ ಮಂಡಳಿಗಳ ಎಫ್ ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ –ಬಿಜೆಪಿ, ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್!

ಇನ್ನು ಬ್ಯಾಂಕಿಂಗ್ ವಲಯದ ಪರಿಸ್ಥಿತಿ ಉತ್ತಮ ಇರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಸರಾಸರಿಯಾಗಿ ಈ ಬಾರಿ ಶೇ. 15ರಷ್ಟು ಸಂಬಳ ಹೆಚ್ಚಳ ಕೊಡುವ ಬಗ್ಗೆ ಚರ್ಚೆಗಳಾಗುತ್ತಿರುವುದು ತಿಳಿದುಬಂದಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ ಸಂಸ್ಥೆ ಬ್ಯಾಂಕ್ ಉದ್ಯೋಗಿಗಳಿಗೆ ಶೇ. 15ರಷ್ಟು ಸಂಬಳ ಹೆಚ್ಚಳ ಮಾಡಬೇಕೆಂಬ ಪ್ರಸ್ತಾವ ಮುಂದಿಟ್ಟಿದೆ. ಆದರೆ, ವಿವಿಧ ಬ್ಯಾಂಕ್ ಯೂನಿಯನ್​ಗಳು ಇನ್ನೂ ಹೆಚ್ಚಿನ ಸಂಬಳಕ್ಕೆ ಪಟ್ಟು ಹಿಡಿದಿವೆ ಎಂದು ವರದಿಯಾಗಿದೆ.

2015ರಿಂದಲೂ ವಾರಕ್ಕೆ ಎರಡು ದಿನ ವೀಕಾಫ್ ಕೊಡಬೇಕೆಂಬ ಒತ್ತಾಯಗಳಿವೆ. 2015ರಲ್ಲಿ ಆದ ಒಪ್ಪಂದಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜೆಗಳಾಗಿ ಘೋಷಿಸಬೇಕೆನ್ನುವ ಐಬಿಎ ಪ್ರಸ್ತಾವಕ್ಕೆ ಆರ್​ಬಿಐ ಒಪ್ಪಿಕೊಂಡಿತ್ತು. ಈಗ ಭಾನುವಾರಗಳಂತೆ ಎಲ್ಲಾ ಶನಿವಾರಗಳನ್ನೂ ರಜೆಯಾಗಿ ಘೋಷಿಸಬೇಕೆಂದು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಪ್ರಸ್ತಾಪ ಮಾಡಿವೆ.

Shwetha M