ಬಾಂಗ್ಲಾ ಪಿಎಂ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವುದ್ದಕ್ಕೆ ನಿರ್ಧರಿಸಿದ್ದಾರೆ – ಎನ್‌ಸಿಪಿ ಸಂಚಾಲಕ ನಹಿದ್ ಇಸ್ಲಾಂ

ಬಾಂಗ್ಲಾ ಪಿಎಂ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವುದ್ದಕ್ಕೆ ನಿರ್ಧರಿಸಿದ್ದಾರೆ  – ಎನ್‌ಸಿಪಿ  ಸಂಚಾಲಕ ನಹಿದ್ ಇಸ್ಲಾಂ

ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಮತ್ತು ಬಾಂಗ್ಲಾದೇಶ ಸೇನೆಯ ನಡುವಿನ ಸಂಘರ್ಷ ಜೋರಾದಂತೆ ಕಾಣುತ್ತಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ರಾಜೀನಾಮೆ ನೀಡುವ ವಿಚಾರ ಮುನ್ನೆಲೆಗೆ ಬಂದಿದ್ದು ರಾಜಕೀಯ ಪಕ್ಷಗಳಲ್ಲಿ ಒಮ್ಮತದ ಕೊರತೆಯಿಂದಾಗಿ ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ ಎಂದು ಯೂನಸ್ ಹೇಳಿಕೊಂಡಿದ್ದಾರೆ ಅನ್ನೋ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್‌ – ಈ ಮಾರ್ಗದಲ್ಲಿ ಸಂಚಾರ ವ್ಯತ್ಯಾಯ!

ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾದ ಕಾರಣ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳೇ ರೂಪಿಸಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ ಸಂಚಾಲಕ ನಹಿದ್ ಇಸ್ಲಾಂ ತಿಳಿಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.

ಮೊಹಮ್ಮದ್ ಯೂನಸ್ ಅವರ ರಾಜೀನಾಮೆ ಸುದ್ದಿ ಕೇಳಿ ಬರುತ್ತಿದೆ. ಇದೇ ವಿಚಾರದ ಬಗ್ಗೆ ಚರ್ಚಿಸಲು ನಾನು ಅವರನ್ನು ಭೇಟಿ ಮಾಡಿದ್ದೆ. ಸದ್ಯದ ಪರಿಸ್ಥಿತಿಗೆ ಅಧರಿಸಿ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದರು, ವಿಶ್ವಾಸ- ಭರವಸೆಯ ಸ್ಥಾನ ಅವರಿಗೆ ಸಿಗದಿದ್ದರೆ ಅವರು ಏಕೆ ಅಲ್ಲಿಯೇ ಇರುತ್ತಾರೆ?” ಎಂದು ನಹಿದ್ ಇಸ್ಲಾಂ ಪ್ರಶ್ನಿಸಿದ್ದಾರೆ.

ದೇಶದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರದ ಹೊರತು ನಾನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೂನಸ್ ತಿಳಿಸಿರುವುದಾಗಿ ಎನ್‌ಸಿಪಿ ಸಂಚಾಲಕ ಹೇಳಿದ್ದಾರೆ. ದೇಶದ ಭದ್ರತೆ ಮತ್ತು ಭವಿಷ್ಯದ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸುವುದರ ಜತೆಗೆ ಸಹಕಾರ ನೀಡುವ ಭರವಸೆ ಇದೆ ಎಂದು ಯೂನಸ್ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಇಸ್ಲಾಂ ತಿಳಿಸಿದ್ದಾರೆ.

ದೇಶದಲ್ಲಿ ನಡೆದ ಸಾಮೂಹಿಕ ದಂಗೆಯ ಬಳಿಕ ದೇಶದಲ್ಲಿ ಬದಲಾವಣೆ ಮತ್ತು ಸುಧಾರಣೆಗಾಗಿ ಯೂನಸ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ಕರೆತರಲಾಯಿತು. ಆದರೆ ಈಗ, ವಿವಿಧ ರಾಜಕೀಯ ಪಕ್ಷಗಳು ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಇದರಿಂದ ಯೂನಸ್ ಅವರ ಕೈಗೆ ಕೋಳ ಹಾಕಲ್ಪಟ್ಟಂತಾಗಿದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಅವರದ್ದಾಗಿದೆ. ಆದರೂ ರಾಜೀನಾಮೆ ನಿರ್ಧಾರ ಕೈಗೊಳ್ಳುವ ಮೊದಲು ಒಮ್ಮೆ ಯೋಚಿಸಿ ಎಂದು ನಹಿದ್ ಇಸ್ಲಾಂ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

 

 

Kishor KV

Leave a Reply

Your email address will not be published. Required fields are marked *