ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಸಾಧನೆ – 1,303 ದಿನಗಳಿಂದ ಟೆಸ್ಟ್ ಗೆಲ್ಲದ ಪಾಕ್ ಗೆ ತೀವ್ರ ಮುಖಭಂಗ

ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಸಾಧನೆ –  1,303 ದಿನಗಳಿಂದ ಟೆಸ್ಟ್ ಗೆಲ್ಲದ ಪಾಕ್ ಗೆ ತೀವ್ರ ಮುಖಭಂಗ

ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಗೆಲುವಿನೊಂದಿಗೆ ಬಾಂಗ್ಲಾ ಟೀಮ್ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಬಾಂಗ್ಲಾ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡ ದಾಖಲೆ ಬರೆದಿದೆ. ಪಾಕಿಸ್ತಾನ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ್ ತಂಡವು 10 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ..

ಇದನ್ನೂ ಓದಿ: ಸ್ಪಿನ್ನರ್ ಶ್ರೇಯಾಂಕಾ ಯಾರಿಗೂ ಬೇಡ್ವಾ? – ಬಿಗ್​ ಬ್ಯಾಶ್ ಟೂರ್ನಿಯಲ್ಲಿ UNSOLD

3 ವರ್ಷಗಳಿಂದ ಗೆಲುವನ್ನೇ ಕಂಡಿಲ್ಲ ಪಾಕಿಸ್ತಾನ. ಹೌದು. ಪಾಕ್ ಟೀಮ್ ಕಳೆದ 3 ವರ್ಷಗಳಲ್ಲಿ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೋಲು ಕಂಡಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳ ವಿರುದ್ಧ ಪಾಕಿಸ್ತಾನ್ ತಂಡ ಸೋಲನುಭವಿಸಿತ್ತು. ಅಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಬರೋಬ್ಬರಿ 1,303 ದಿನಗಳೇ ಕಳೆದಿವೆ.

ಝಿಂಬಾಬ್ವೆ ಕ್ರಿಕೆಟ್ ಟೀಮ್ ಹೆಸರಿನಲ್ಲಿದ್ದ ದಾಖಲೆಯನ್ನ ಅಳಿಸಿ ತನ್ನ ಹೆಸರಿಗೆ ಕೆಟ್ಟ ದಾಖಲೆಯನ್ನು ಬರೆದುಕೊಳ್ಳಲು ಪಾಕ್ ತಂಡ ರೆಡಿಯಾಗ್ತಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಸತತ ಸೋಲುಗಳನ್ನು ಅನುಭವಿಸಿದ ಅತ್ಯಂತ ಕೆಟ್ಟ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಝಿಂಬಾಬ್ವೆ ತಂಡವು ತವರಿನಲ್ಲಿ ಗೆದ್ದು 4002 ದಿನಗಳೇ ಕಳೆದಿವೆ. ಇದೀಗ ಪಾಕಿಸ್ತಾನ್ ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಈ ಮೂಲಕ ತವರಿನಲ್ಲಿ ದೀರ್ಘಕಾಲದವರೆಗೆ ಟೆಸ್ಟ್ ಪಂದ್ಯ ಗೆಲ್ಲದ ಕೆಟ್ಟ ದಾಖಲೆ ಪಟ್ಟಿಯಲ್ಲಿ ಪಾಕ್ ಪಡೆ ದ್ವಿತೀಯ ಸ್ಥಾನ ಅಲಂಕರಿಸಿದೆ.

 

suddiyaana