ಇತಿಹಾಸ ಸೃಷ್ಟಿಸಿದ ಬಾಂಗ್ಲಾ ಹುಲಿಗಳು – ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ

ಇತಿಹಾಸ ಸೃಷ್ಟಿಸಿದ ಬಾಂಗ್ಲಾ ಹುಲಿಗಳು – ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ

ಕ್ರಿಕೆಟ್ ಲೋಕದಲ್ಲಿ ಇತಿಹಾಸವೊಂದು ಸೃಷ್ಟಿಯಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಬಾಂಗ್ಲಾ ದೇಶ ಚರಿತ್ರೆ ಸೃಷ್ಟಿಸಿದೆ. ಆಸ್ಟ್ರೇಲಿಯಾವನ್ನು ಸೋಲಿಸಿ ಏಕದಿನ ಸರಣಿ ಗೆದ್ದು ಬೀಗಿದೆ ಬಾಂಗ್ಲಾದೇಶ.

ಇದನ್ನೂ ಓದಿ:ಸೋಲಿನ ಸುಳಿಯಲ್ಲಿ ಸೊಕ್ಕಿನ AUS – ಕಾಂಗರೂಗಳ ಕಾಲು ಮುರಿದ ಬಾಂಗ್ಲಾ

ಆಸ್ಟ್ರೇಲಿಯಾ ತಂಡವು ಇದೇ ಮೊದಲ ಬಾರಿಗೆ ಬಾಂಗ್ಲಾ ನೆಲದಲ್ಲಿ ಸರಣಿ ಸೋತು ಭಾರೀ ಅವಮಾನ ಎದುರಿಸಿದೆ. ಆದರೆ, ಬಾಂಗ್ಲಾ ದೇಶ ಮೊಟ್ಟ ಮೊದಲ ಬಾರಿಗೆ ಆಸೀಸ್ ವಿರುದ್ಧ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ಪ್ರವಾಸ ಮಾಡಿದೆ. ಈಗಾಗಲೇ ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಆತಿಥೇಯ ಬಾಂಗ್ಲಾದೇಶದ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಬಾಂಗ್ಲಾದೇಶಕ್ಕೆ ಬರುವ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಸರಣಿಯನ್ನಾಡಿದ್ದ ಆಸೀಸ್ ಪಡೆ ಅಲ್ಲೂ ಸಹ ಏಕದಿನ ಸರಣಿಯನ್ನು ಸೋತಿತ್ತು. ಇದೀಗ ಬಾಂಗ್ಲಾದೇಶದಲ್ಲೂ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಳೆದುಕೊಂಡಿದೆ.

ಇತ್ತ ಬಾಂಗ್ಲಾದೇಶ ತಂಡ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಏಕದಿನ ಸರಣಿಯಲ್ಲಿ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸರಣಿಯಲ್ಲಿ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ.

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಆಸ್ಟ್ರೇಲಿಯಾ. ಆದರೆ, ಪಂದ್ಯ ಮತ್ತು ಸರಣಿ ಗೆದ್ದು ಬೀಗಿದ್ದು ಬಾಂಗ್ಲಾದೇಶ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ187 ರನ್ ಗಳಿಸಿತ್ತು. ಜೊತೆಗೆ ಆಸೀಸ್ ತಂಡದ ಅರ್ಧದಷ್ಟು ಆಟಗಾರರು 65 ರನ್‌ಗಳ ಒಳಗೆ ಪೆವಿಲಿಯನ್ ಸೇರಿಕೊಂಡಿದ್ದರು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶದ ಇನ್ನಿಂಗ್ಸ್ ಆರಂಭಕ್ಕೂ ಮಳೆ ಅಡ್ಡಿಪಡಿಸಿತು. ಬಾಂಗ್ಲಾದೇಶ 35 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಭರ್ಜರಿ ಜಯ ಸಾಧಿಸಿದೆ. ಜೊತೆಗೆ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

Sulekha

Leave a Reply

Your email address will not be published. Required fields are marked *