ಹುಡುಗಿ ಅಂದ ನೋಡಲು ಮೇಕಪ್ ಉಜ್ಜಿ, ಸೀರೆ ಬಿಚ್ಚಿದ ಗಂಡಿನ ಕಡೆಯವರು! – ವಧುವನ್ನು ಅಳೆಯಲು ಹೋಗಿ ಬೆತ್ತಲಾದ ವರ!

ಈಗೀಗ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ ಅನ್ನೋ ತಲೆನೋವು. ಕೈಯಲ್ಲಿ ಕೆಲ್ಸ ಇದೆ.. ದುಡ್ಡು ಇದೆ.. ಜಮೀನು ಇದೆ.. ಆದ್ರೂ ಹೆಣ್ಣು ಕೊಡ್ತಿಲ್ಲ ಅನ್ನೋದು ಯುವಕರ ಗೋಳು.. ಆದ್ರೆ ಇಲ್ಲೊಂದು ಕಡೆ ಯುವಕನಿಗೆ ಹೆಣ್ಣು ನೋಡಲು ಹೋಗಿ ಹುಡುಗಿಗೆ ಅವಮಾನ ಮಾಡಿದ್ದಾರೆ. ಹುಡುಗಿಯ ಮೇಕಲ್ ಉಜ್ಜಿ ಕಲರ್ ಚೆಕ್ ಮಾಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಕರ್ನಾಟಕದ ಮತ್ತೊಂದು ಕ್ಷೇತ್ರದಲ್ಲಿ ಮತಗಳ್ಳತನ – ಚುನಾವಣಾ ಆಯೋಗದ ಮೇಲೆ ರಾಹುಲ್ ಗಾಂಧಿ ಹೊಸ ಬಾಂಬ್
ಸಾಮಾನ್ಯವಾಗಿ ಹೆಣ್ಣು ನೋಡಲು ಬಂದ್ರೆ ಗಂಡಿನ ಕಡೆಯವರು ಹೋದ್ರೆ ಹುಡುಗಿ ಎಷ್ಟು ಓದಿದ್ದಾಳೆ. ಅಡುಗೆ ಬರುತ್ತಾ? ಗಂಡು ಇಷ್ಟ ಆಗಿದ್ದಾನಾ ಎಂದು ಕೇಳುತ್ತಾರೆ. ಆದ್ರೆ ಇಲ್ಲೊಂದು ಕಡೆ ಹುಡುಗಿ ನೋಡಲು ಬಂದವರು ಹುಡುಗಿಯ ಗುಣನಡತೆಯ ಬಗ್ಗೆ ಮೌಲ್ಯಮಾಪನ ಮಾಡುವ ಬದಲು ಆಕೆಯ ಬಣ್ಣದ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಬರೀ ಇಷ್ಟೇ ಆಗಿದ್ದರೆ ಅದೇನು ದೊಡ್ಡ ಅನಾಹುತವಾಗುತ್ತಿರಲಿಲ್ಲ. ಯುವತಿಯ ಮೇಕಪನ್ನು ಕೈಯಲ್ಲಿ ಉಜ್ಜಿ ಉಜ್ಜಿ ನೋಡಿದ್ದಾರೆ. ಬರೀ ಇಷ್ಟೇ ಆಗಿದ್ರೆ ಏನೂ ಆಗ್ತಿರ್ಲಿಲ್ಲ.. ಗಂಡಿನ ಕಡೆಯವರು ಯುವತಿಯ ಸೀರೆಯನ್ನು ಕೂಡ ಅರೆಬರೆ ಬಿಚ್ಚಿ ಆಕೆಯ ಆಕಾರ ಹೇಗಿದೆ ಎಂದು ನೋಡಲು ಮುಂದಾಗಿದ್ದಾರೆ. ವರನ ಕಡೆಯವರ ಈ ವರ್ತನೆಯಿಂದ ಸಿಟ್ಟಾದ ಹೆಣ್ಣಿನ ಕಡೆಯವರು ಈ ಗಂಡಿನ ಕಡೆಯವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.
ವಧುವನ್ನು ಅಳೆಯಲು ಹೋಗಿ ಬೆತ್ತಲಾದ ವರ!
ತಮ್ಮ ಮನೆಯ ಹೆಣ್ಣಿಗೆ ಅವರು ಹೇಗೆ ಅವಮಾನ ಮಾಡಿದರೋ ಅದೇ ರೀತಿ ಹುಡುಗಿ ನೋಡಲು ಬಂದ ವರನಿಗೂ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದಾರೆ. ಮೊದಲಿಗೆ ಆ ವ್ಯಕ್ತಿಯ ಟೀಶರ್ಟ್ನ್ನು ಹುಡುಗಿ ಕಡೆಯವರು ಬಿಚ್ಚಿಸಿದ್ದಾರೆ. ಆತನ ದೇಹಾಕಾರ ಹೇಗಿದೆ ಎಂಬುದನ್ನು ಪರೀಕ್ಷಿಸಿದ್ದಾರೆ. ಬರೀ ಇಷ್ಟೇ ಅಲ್ಲ ಆತನ ಪ್ಯಾಂಟನ್ನು ಬಿಚ್ಚಿದ್ದಾರೆ ನಂತರ ಆತನ ಬಳಿ ಏನು ಇಲ್ಲ ಎಂದು ಹೇಳಿ ಎಲ್ಲರೆದುರು ಹಾಸ್ಯ ಮಾಡಿ ಹೀಯಾಳಿಸಿ ನಕ್ಕಿದ್ದಾರೆ. ಇದರಿಂದ ಮದುವೆ ಮುರಿದು ಬಿದ್ದಿದ್ದಲ್ಲದೇ ಅಲ್ಲಿ ದೊಡ್ಡ ಗದ್ದಲ ಸೃಷ್ಟಿಯಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಕೆಲ ಮೂಲದ ಪ್ರಕಾರ ಇದು ಬಾಂಗ್ಲಾದೇಶದ ವೀಡಿಯೋ ಆಗಿದೆ ಮತ್ತೆ ಕೆಲವು ಇದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದೀಗ ವಿಡಿಯೋ ನೋಡಿದ ಅನೇಕರು ಹೆಣ್ಣಿಗೆ ಅವಮಾನ ಮಾಡುವ, ಹೆಣ್ಣಿನ ಮನೆಯವರ ಮೇಲೆ ದರ್ಪ ತೋರುವ ಗಂಡಿನ ಕಡೆಯವರಿಗೆ ಹೀಗೆ ಮಾಡಬೇಕು. ಇನ್ನಾದ್ರೂ ಇವರು ಬುದ್ದಿ ಕಲಿಯಲೇಬೇಕು ಅಂತ ಕಾಮೆಂಟ್ ಮಾಡಿದ್ದಾರೆ.
View this post on Instagram

ನೋಡಿರಿ

