ಭಾರತಕ್ಕೆ ತಲೆ ಬಾಗಿದ ಬಾಂಗ್ಲಾ – IPL ಪ್ರಸಾರ ಬ್ಯಾನ್ ಯು ಟರ್ನ್
BCCI ಪವರ್ ಸೊಕ್ಕು ಇಳಿಸಿತಾ?

ಭಾರತಕ್ಕೆ ತಲೆ ಬಾಗಿದ ಬಾಂಗ್ಲಾ – IPL ಪ್ರಸಾರ ಬ್ಯಾನ್ ಯು ಟರ್ನ್BCCI ಪವರ್ ಸೊಕ್ಕು ಇಳಿಸಿತಾ?

ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಬಿಸಿಸಿಐ ವಿರುದ್ಧ ಸಿಡಿದು ನಿಂತಿದ್ದ ಬಾಂಗ್ಲಾದೇಶ ಟೂರ್ನಿಯನ್ನೇ ಬಹಿಷ್ಕರಿಸಿತ್ತು. ಜೊತೆಗೆ ನಮ್ಮ ದೇಶದಲ್ಲಿ ಐಪಿಎಲ್​ನೂ ಪ್ರಸಾರ ಮಾಡಲ್ಲ ಬ್ಯಾನ್ ಮಾಡ್ತೇವೆ ಅಂತಾ ಆದೇಶನೂ ಹೊರಡಿಸಿದ್ರು. ಹೀಗೆ ಬಿಲ್ಡಪ್ ಕೊಟ್ಟು ತಿಂಗಳು ಕಳೆದಿದೆ ಅಷ್ಟೇ. ಅಷ್ಟ್ರಲ್ಲಾಗ್ಲೇ ಬಿಸಿಬಿ ಯು ಟರ್ನ್ ಹೊಡೆದಿದೆ. ಬಿಸಿಸಿಐ ಪವರ್ ಮುಂದೆ ಮಂಡಿಯೂಡಿದೆ. ಕ್ರಿಕೆಟ್ ಅಂತಾ ಬಂದಾಗ ಅಲ್ಲಿ ಯಾವತ್ತಿದ್ರೂ ಬಿಸಿಸಿಐನೇ ಬಾಸ್. ಪವರ್, ಪಾಪ್ಯುಲಾರಿಟಿ, ಫೈನಾನ್ಶಿಯಲ್ ಹೀಗೆ ಎಲ್ಲದ್ರಲ್ಲೂ ಭಾರತವೇ ದೊಡ್ಡಣ್ಣ. ಐಪಿಎಲ್​ನಲ್ಲೇ ಮಿಲಿಯನ್​ಗಟ್ಟಲೆ ವಹಿವಾಟು ನಡೆಸುತ್ತೆ. ಜಗತ್ತಿನ ಮೂಲೆ ಮೂಲೆಯಲ್ಲೂ ಐಪಿಎಲ್ ಫ್ಯಾನ್ಸ್ ಇದ್ದಾರೆ. ಹೀಗಿದ್ರೂ ಬಿಲ್ಡಪ್ ಕೊಟ್ಕೊಂಡು ಬಾಂಗ್ಲಾದೇಶ ಐಪಿಎಲ್ ಪ್ರಸಾರವನ್ನೇ ನಿಷೇಧ ಮಾಡಿತ್ತು. ಆದ್ರೀಗ ತನ್ನದೇ ಆದೇಶದಿಂದ ಉಲ್ಟಾ ಹೊಡೆಯೋ ಪರಿಸ್ಥಿತಿಗೆ ಬಂದಿದೆ.

ಇದನ್ನೂ ಓದಿ : ಸಿಎಸ್‌ಕೆಯ 14 ಕೋಟಿ ಆಟಗಾರ ಪ್ರಶಾಂತ್ ವೀರ್ ಆಟಕ್ಕೆ ಧೋನಿ ಫಿದಾ

ಐಪಿಎಲ್ ಪ್ರಸಾರಕ್ಕೆ ಅನುಮತಿ ನೀಡಲು ಮುಂದಾದ ಬಾಂಗ್ಲಾ!

ಭಾರತ ಮತ್ತು ಬಾಂಗ್ಲಾ ನಡುವೆ ಕಳೆದೊಂದು ವರ್ಷದಿಂದ ಹೊತ್ತಿದ್ದ ಸಣ್ಣ ಕಿಡಿ ಕಳೆದ 2 ತಿಂಗಳಲ್ಲಿ ಜ್ವಾಲೆಯಾಗಿ ಹೊತ್ತಿ ಉರಿದಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗ್ತಿದ್ದಂತೆ ಐಪಿಎಲ್​ ಟೀಂ ಕೆಕೆಆರ್​ನಿಂದ ಮುಸ್ತಫಿಜುರ್ ರೆಹಮಾನ್​ರನ್ನ ಕೈಬಿಡಲಾಗಿತ್ತು. ಇದಾದ ಬೆನ್ನಲ್ಲೇ ಸಿಟ್ಟಾಗಿದ್ದ ಬಾಂಗ್ಲಾದೇಶ ನಾವು ಭಾರತದಲ್ಲಿ ಟಿ-20 ವಿಶ್ವಕಪ್ ಪಂದ್ಯಗಳನ್ನ ಆಡಲ್ಲ ಲಂಕಾಗೆ ಶಿಫ್ಟ್ ಮಾಡಿ ಅಂದಿದ್ರು. ಆದ್ರೆ ಇದಕ್ಕೆ ಒಪ್ಪದ ಐಸಿಸಿ ಭಾರತದಲ್ಲಿ ಆಡಿದ್ರೆ ಆಡಿ ಬಿಟ್ರೆ ಬಿಡಿ ಅಂದಿದ್ರು. ಕೊನೆಗೆ ಬಾಂಗ್ಲಾ ಟೂರ್ನಿಯಿಂದಲೇ ಹಿಂದೆ ಸರಿದಿತ್ತು. ಬಾಂಗ್ಲಾ ಸರ್ಕಾರದ ಈ ನಿರ್ಧಾರ ಐಸಿಸಿಗಾಗಲಿ ಅಥವಾ ಬಿಸಿಸಿಐಗಾಗಲಿ ಯಾವುದೇ ನಷ್ಟವನ್ನುಂಟು ಮಾಡಲಿಲ್ಲ. ಆದರೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟ ಉಂಟಾಯಿತು. ಸರ್ಕಾರದ ಈ ನಡೆಯನ್ನು ಬಾಂಗ್ಲಾ ಆಟಗಾರರೇ ವಿರೋಧಿಸಿದ್ದರು. ಅದೇ ಸಿಟ್ಟಲ್ಲೇ ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರದ ಮೇಲೆ ನಿಷೇಧ ಹೇರಿತ್ತು. ಆದ್ರೆ ಅದೇ ಐಪಿಎಲ್ ಪ್ರಸಾರಕ್ಕೆ ಬಾಂಗ್ಲಾ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿವೆ. ಬಾಂಗ್ಲಾದೇಶದ ಮೀಡಿಯಾಗಳೇ ರಿಪೋರ್ಟ್ ಮಾಡಿರೋ ಹಾಗೇ ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್, ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಐಪಿಎಲ್ ಬ್ಯಾನ್ ನಿರ್ಧಾರವನ್ನು ಮರುಪರಿಶೀಲಿಸುವ ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

ಭಾರತದೊಂದಿಗೆ ಸ್ನೇಹ ಸಂಬಂಧಕ್ಕಾಗಿ ತಲೆ ಬಾಗಿದ ಬಾಂಗ್ಲಾ!

ಅಷ್ಟಕ್ಕೂ ಇಲ್ಲಿ ಬಾಂಗ್ಲಾದೇಶ ಹೀಗೆ ಉಲ್ಟಾ ಹೊಡೆಯೋಕೆ ಕಾರಣವೇ ಭಾರತದ ಪವರ್. ಆರ್ಥಿಕವಾಗಿ, ಕ್ರಿಕೆಟ್ ನಲ್ಲಾಗ್ಲಿ ಬಾಂಗ್ಲಾದೇಶಕ್ಕಿಂತ ಭಾರತ ತುಂಬಾನೇ ಸ್ಟ್ರಾಂಗ್ ಆಗಿದೆ. ಹೀಗಾಗಿ ಭಾರತದ ವಿರೋಧವನ್ನ ಕಟ್ಟಿಕೊಂಡು ಸರ್ವೈವ್ ಆಗೋದು ಅಷ್ಟು ಸುಲಭದ ಮಾತಲ್ಲ. ಹೀಗಾಗೇ ಸಚಿವ ಅಮೀನುಲ್ ಹಕ್ ಕ್ರೀಡೆಗಳನ್ನು ರಾಜಕೀಯಗೊಳಿಸಬಾರದು ಮತ್ತು ಬದಲಾಗಿ ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬೇಕು ಎಂದಿದ್ದಾರೆ. ಹಾಗೇ ಐಪಿಎಲ್​ನ ಯಾಕೆ ಬ್ಯಾನ್ ಮಾಡಿದ್ರು ಅದನ್ನ ತಿಳಿಸಿಕೊಂಡು ನಿರ್ಧಾರ ಕೈಗೊಳ್ತೇವೆ ಅನ್ನೋ ಮೂಲಕ ಬ್ಯಾನ್ ತೆರವಿನ ಹಿಂಟ್ ಕೊಟ್ಟಿದ್ದಾರೆ. ಅದೂ ಅಲ್ದೇ ಐಪಿಎಲ್ ಬಾಂಗ್ಲಾದೇಶದಲ್ಲಿ ಜನಪ್ರಿಯವಾಗಿದೆ. ಅಲ್ಲಿನ ಹೆಚ್ಚಿನ ಜನಸಂಖ್ಯೆಯು ಕೆಕೆಆರ್ ಸಪೋರ್ಟ್ ಮಾಡ್ತಾರೆ.  ಈಡನ್ ಗಾರ್ಡನ್ಸ್ ಢಾಕಾದಿಂದ ಹೆಚ್ಚು ದೂರದಲ್ಲಿಲ್ಲ. ಅಲ್ದೇ ಶಕೀಬ್ ಅಲ್ ಹಸನ್ ಸೇರಿದಂತೆ ಬಾಂಗ್ಲಾದೇಶಿ ತಾರೆಯರ ಇತಿಹಾಸವನ್ನು ಫ್ರಾಂಚೈಸಿ ಹೊಂದಿದೆ. ಇನ್ನು ಬಾಂಗ್ಲಾದೇಶ ಇಲ್ಲಿ ಯೂಟರ್ನ್ ಹೊಡೆಯೋಕೆ ಇನ್ನೊಂದು ಕಾರಣವೂ ಇದೆ.

ಭಾರತದ ಜೊತೆ ಸರಣಿಗೆ ಎದುರು ನೋಡ್ತಿದೆ ಬಾಂಗ್ಲಾ!

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಕಳೆದ ವರ್ಷವೇ ಭಾರತ ಬಾಂಗ್ಲಾ ಪ್ರವಾಸ ಕೈಗೊಳ್ಬೇಕಿತ್ತು. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಏಕದಿನ ಮತ್ತು ಟಿ-20ಐ ಸರಣಿ ಆಡ್ಬೇಕಿತ್ತು. ಆದ್ರೆ ಬಾಂಗ್ಲಾದಲ್ಲಿ ಉದ್ವಿಘ್ನ ಸ್ಥಿತಿಯಿಂದಾಗಿ ಈ ವರ್ಷಕ್ಕೆ ಮುಂದೂಡಿಕೆ ಮಾಡ್ಲಾಗಿತ್ತು. ಈ ವರ್ಷ ಭಾರತ ವಿರುದ್ಧ ಪಂದ್ಯಗಳನ್ನು  ಆಡೋದಾಗಿ ಬಿಸಿಬಿ ಹೇಳ್ತಿದೆ. ಆದ್ರೆ ಇದನ್ನ ಬಿಸಿಸಿಐ ಒಪ್ಪಿಕೊಳ್ಳುತ್ತಾ ಅನ್ನೋ ಅನುಮಾನವೂ ಇದೆ. ಯಾಕಂದ್ರೆ ಕಳೆದೊಂದು ವರ್ಷದಲ್ಲಿ ಭಾರತ ಮತ್ತು ಬಾಂಗ್ಲಾ ನಡುವೆ ಸಾಕಷ್ಟು ಏರುಪೇರುಗಳಾಗಿವೆ. ಈಗ ಮತ್ತೆ ಬಾಂಗ್ಲಾಗೆ ತೆರಳಿ ಸರಣಿಗಳನ್ನ ಆಡಲು ಬಿಸಿಸಿಐ ಮುಂದಾಗುತ್ತಾ ಹಾಗೇ ಇದಕ್ಕೆ ಭಾರತ ಸರ್ಕಾರ ಒಪ್ಪುತ್ತಾ ಅನ್ನೋ ಚರ್ಚೆಗಳೂ ಇವೆ. ಒಟ್ನಲ್ಲಿ ಭಾರತದ ಎದುರು ಹಾರಾಡಿದ್ದ ಬಾಂಗ್ಲಾ ಕೊನೆಗೂ ಬಾಲ ಮುದುರಿ ಕೊಂಡಿದೆ.

Shantha Kumari