ಭಾರತದ ವಿರುದ್ಧ ಒಂದಾದ ಕ್ರಿಮಿಗಳು! – ಚೀನಾ, ಪಾಕ್ ಜೊತೆ ಬಾಂಗ್ಲಾ ಮೈತ್ರಿ!
ಕುತಂತ್ರಿಗಳನ್ನ ಬಗ್ಗಿಸುತ್ತಾ ಭಾರತ..?

ಭಾರತದ ವಿರುದ್ಧ ಒಂದಾದ ಕ್ರಿಮಿಗಳು! – ಚೀನಾ, ಪಾಕ್ ಜೊತೆ ಬಾಂಗ್ಲಾ ಮೈತ್ರಿ!ಕುತಂತ್ರಿಗಳನ್ನ ಬಗ್ಗಿಸುತ್ತಾ ಭಾರತ..?

ಬಾಂಗ್ಲಾ ದೇಶ ತನ್ನ ನರಿ ಬುದ್ಧಿ ತೋರಿಸಲೇ ಇದೆ.. ಭಾರತ ಮುಂದೆ ನೆಟ್ಟಗೆ ನಿಲ್ಲೋಕೆ ಶಕ್ತಿ ಇಲ್ಲದಿದ್ದರು, ಗಾಂಚಾಲಿಗೇನು ಕಮ್ಮಿ ಇಲ್ಲ.. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೇವಸ್ಥಾನಗಳ ಮೇಲೆ ದಿನ ನಿತ್ಯ ದಾಳಿ ನಡೆಯುತ್ತಲೇ ಇದ್ದು, ಭಾರತ ಬಾಂಗ್ಲಾ ಸಂಬಂಧ ಹಳಸಿ ಹೋಗಿದೆ.. ಒಂದು ದಶಕಗಳಿಗೂ ಹೆಚ್ಚು ಕಾಲ ಎರಡೂ ದೇಶಗಳ ನಡುವೆ ಇದ್ದ ಗಟ್ಟಿ ಮೈತ್ರಿ ಹಾಳಾಗಿ ಹೋಗೋಕೆ ಕಾರಣ  ಮೆಲ್ನೋಟಕ್ಕೆ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವೆಂದು ಕಂಡ್ರೂ ಇದಕ್ಕೆ ಬೇರೆಯದ್ದೇ ಕಾರಣವಿದ್ಯಾ ಅನ್ನೋ ಅನುಮಾನ ಶುರುವಾಗಿದೆ.. ಹಾಗಿದ್ರೆ ಆ ಅನುಮಾನಯೇನು, ಬಾಂಗ್ಲಾ ಭಾರತದ ಶತ್ರು ರಾಷ್ಟ್ರದ ಜೊತೆ ಸೇರಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹಗ್ಗಾಜಗ್ಗಾಟ – ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಎಫೆಕ್ಟ್!

ಬಾಂಗ್ಲಾದಲ್ಲಿ ಹೆಚ್ಚಾಗುತ್ತಿದೆ ಹಿಂದೂಗಳ ಮೇಲೆ ದಾಳಿ

ಭಾರತ ವಿರೋಧಿ ಶಕ್ತಿಗಳು ಆಯಾ ದೇಶದ ಅಧಿಕಾರ  ಹಿಡಿಯುವಲ್ಲಿ ಪೆಲ್ಯೂರ್ ಆಗುತ್ತಿವೆ.. ಹಾಗೇ  ಭಾರತ ಸ್ನೇಹಿ ಶಕ್ತಿಗಳು ಅಧಿಕಾರಕ್ಕೆ ಬರುತ್ತಿವೆ. ಇದು ಇಸ್ಲಾಂ ಮೂಲಭೂತವಾದಿಗಳು ಮತ್ತು ಪಾಕಿಸ್ತಾನ ಬೆಂಬಲದ ಶಕ್ತಿಗಳಿಗೆ ನುಂಗಲಾರದ ತುತ್ತಾಗಿದೆ.. ಸದ್ಯ ಭಾರತ ಪರವಾದಿ ಷೇಕ್ ಹಸೀನಾ ಪಲಾಯನಮಾಡಿದ್ದು, ತಮ್ಮ ಬೆಂಬಲದ ಹೊಸ ಸರ್ಕಾರ ಬಂದಿರುವುದು ಇಸ್ಲಾಮಿಕ್ ಶಕ್ತಿಗಳಿಗೆ ಹೊಸ ಚೈತನ್ಯ ತಂದಂತಿದೆ. ಹೊಸ ಸರ್ಕಾರ ರಚನೆಯೊಂದಿಗೆ ಭಾರತ ಮತ್ತು ಹಿಂದೂ ವಿರೋಧಿ ದ್ವೇಷ ಬಾಂಗ್ಲಾದೇಶದಲ್ಲಿ ಬೆಂಕಿಯಂತೆ ಹಬ್ಬಿದೆ. ಹಸೀನಾ ಪಲಾಯನ ಮಾಡಿದ ದಿನದಿಂದ ಈವರೆಗೆ ಹಿಂದೂಗಳ ಮೇಲೆ  88 ದಾಳಿ ನಡೆದಿದ್ದು,  650 ಮಂದಿ ಸತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಸ್ಥೆ ವರದಿಮಾಡಿದೆ. ನೂರಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ. ಅನೇಕ ಪ್ರಾರ್ಥನಾ ಮಂದಿರಗಳನ್ನು ನಾಶಮಾಡಲಾಗಿದೆ ಎಂದು ಹಿಂದೂಗಳು ರಚಿಸಿದ ತನಿಖಾ ಆಯೋಗವೊಂದು ವರದಿ ಮಾಡಿದೆ. ದಿನ ನಿತ್ಯವೂ ಹಿಂದೂ ದೇವಸ್ಥಾನ ಮತ್ತು ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ನಡುವೆ ಬಾಂಗ್ಲಾ ಜೊತೆ ಚೀನಾ ಮತ್ತು ಪಾಕಿಸ್ತಾನ ದೋಸ್ತಿ ಮಾಡೋಕೆ ಪ್ಲ್ಯಾನ್ ಮಾಡಿವೆ.

ಬಾಂಗ್ಲಾದ ಹಿಂದಿನ ಸರ್ಕಾರ ಭಾರತಕ್ಕೆ ಅನುಕೂಲಕರವಾಗಿ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬಾಂಗ್ಲಾ ದೇಶದಲ್ಲಿ ಈಗ ಇರುವುದು ತಾತ್ಕಾಲಿಕ ಸರ್ಕಾರ. ಇನ್ನೂ ಶಾಶ್ವತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.  2025ರ ಕೊನೆಯಲ್ಲಿ ಅಥವಾ2026 ರ ಆರಂಭದಲ್ಲಿ ಚುನಾವಣೆ ನಡೆಯಲಿದೆ.  ಬಾಂಗ್ಲಾ ದೇಶದಿಂದ ಪಲಾಯನ ಮಾಡಿದ ಪ್ರಧಾನಿ ಷೇಖ್ ಹಸೀನಾಗೆ ಭಾರತ ಆಶ್ರಯ ನೀಡಿರುವುದು ಭಾರತ ವಿರೋಧಿಗಳನ್ನು ಕೆರಳಿಸಿದೆ. ಅವರನ್ನು ತಮ್ಮ ದೇಶಕ್ಕೆ ಒಪ್ಪಿಸಬೇಕೆಂದು ಉಸ್ತುವಾರಿ ಪ್ರಧಾನಿ ಯೂನಸ್ ಅವರೇ ಒತ್ತಾಯಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಕಾಲದಲ್ಲಿ ನಡೆದ ಅಕ್ರಮಗಳು ಮತ್ತು ಅನ್ಯಾಯಗಳ ಬಗ್ಗೆ ತನಿಖೆ ನಡೆಸಲು ಹಸೀನಾ ಅವರನ್ನು ಬಾಂಗ್ಲಾ ದೇಶಕ್ಕೆ ಒಪ್ಪಿಸುವುದು ಅಗತ್ಯ ಎಂದು ಒತ್ತಾಯಿಸಲಾಗುತ್ತಿದೆ. ಈ ವಿಚಾರದಲ್ಲಿಯೂ ಎರಡೂ ದೇಶಗಳ ನಡುವೆ ವೈಮನಸ್ಯ ಉಂಟಾಗಿದೆ. ಭಾರತ ಮತ್ತು ಬಾಂಗ್ಲಾ ದೇಶದ ನಡುವಣ ಬಾಂಧವ್ಯ ಕೆಡುತ್ತಿರುವ ಸಂದರ್ಭವನ್ನು ಬಳಸಿಕೊಳ್ಳಲು ಚೀನಾ ಮತ್ತು ಪಾಕಿಸ್ತಾನ ಮುಂದಾಗಿರುವುದು ಈಗ ಕಂಡುಬರುತ್ತಿದೆ. ಹಸೀನಾ ಅವರು ಅಧಿಕಾರದಲ್ಲಿ ಇದ್ದಾಗಲೇ ಬಾಂಗ್ಲಾ ದೇಶದ ಜೊತೆ ಉತ್ತಮ ವಾಣಿಜ್ಯ ಬಾಂಧವ್ಯ ಇಟ್ಟುಕೊಳ್ಳಲು ಚೀನಾ ಪ್ರಯತ್ನ ನಡೆಸಿತ್ತು. ಅನೇಕ ಯೋಜನೆಗಳಿಗೆ ಹಣ ಹೂಡುವ ಸಲಹೆ ಮುಂದಿಟ್ಟು ಮಾತುಕತೆ ನಡೆಸಿತ್ತು. ಆದರೆ ಹಸೀನಾ ಭಾರತಪರವಾದ ನಿಲುವು ತಳೆದು ಚೀನಾದ ಜೊತೆ ಅತಿ ಸ್ನೇಹ ಹೊಂದಿರಲಿಲ್ಲ. ಈಗ ಹಸೀನಾ ಅಧಿಕಾರದಲ್ಲಿ ಇಲ್ಲದೆ ಇರುವುದರಿಂದ ಮತ್ತೆ ಚೀನಾ ಕುತಂತ್ರಿ ಬುದ್ಧಿ ತೋರಿಸುತ್ತಿದೆ. ಚೀನಾದಂತೆಯೇ ಪಾಕಿಸ್ತಾನವೂ ಈಗಿನ ಬಾಂಗ್ಲಾ ಆಡಳಿತಗಾರರ ಜೊತೆ ಹೆಚ್ಚು ಬಾಂಧವ್ಯ ಬೆಳೆಸಲು ಯತ್ನಿಸುತ್ತಿದೆ. ಒಟ್ನಲ್ಲಿ ಬಾಂಗ್ಲಾ ಮತ್ತು ಭಾರತದ ಸಂಬಂಧ ಹಳಸಿ ಹೋಗುತ್ತಿದೆ ಅನ್ನೋದನ್ನ ತಿಳಿದ ಚೀನಾ ಮತ್ತು ಪಾಕ್ ಬಾಂಗ್ಲಾಕ್ಕೆ ಹತ್ತಿರ ಆಗುತ್ತಿರುವುದಂತು ಸತ್ಯ.

Shwetha M