ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಸ್ಟಾರ್ ಕ್ರಿಕೆಟರ್ – ವಿಡಿಯೋ ಎಲ್ಲೆಡೆ ವೈರಲ್

ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಸ್ಟಾರ್ ಕ್ರಿಕೆಟರ್ – ವಿಡಿಯೋ ಎಲ್ಲೆಡೆ ವೈರಲ್

ಯಾವುದೇ ಕೆಲಸ ಇರಲಿ, ಎಂತಹ ಸಾಧನೆಯೇ ಆಗಲಿ ಏಕಾಗ್ರತೆ ಇದ್ದಾಗ ಮಾತ್ರವೇ ಬದುಕಿನಲ್ಲಿ ಏನನ್ನಾದರೂ ಸಾಧಿಸೋಕೆ ಸಾಧ್ಯ. ಮನಸ್ಸು ಚಂಚಲವಾದರೆ ಗುರಿ ಸಾಧನೆಯೂ ಕೂಡ ಅರ್ಧಕ್ಕೆ ನಿಲ್ಲುತ್ತದೆ. ಏಕಾಗ್ರತೆ ಎಂಬುದು ಹುಟ್ಟುತ್ತಿದ್ದಂತೆ ಎಲ್ಲರಿಗೂ ಇರುವಂತಹ ಸಾಧಾರಣ ಸಾಮರ್ಥ್ಯವೇ. ಸಣ್ಣ ಮಗುವೂ ಕೂಡ ತನ್ನ ಗಮನವನ್ನು ಅನುದ್ದೇಶದಿಂದ ವಿವಿಧ ವಸ್ತುಗಳ ಕಡೆಗೆ ಹರಿಸುತ್ತಿರುತ್ತದೆ. ಇದೀಗ ಏಕಾಗ್ರತೆ ಸಾಧಿಸಲು ಬಾಂಗ್ಲಾದ ಸ್ಟಾರ್ ಕ್ರಿಕೆಟಿಗನೊಬ್ಬ ಬೆಂಕಿಯ ಮೇಲೆ ನಡೆದು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ  : ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆ – ಸೂರ್ಯಕುಮಾರ್ ಯಾದವ್‌ಗೆ ಅಗ್ರಸ್ಥಾನ, ಗಿಲ್‌ಗೆ 25ನೇ ಶ್ರೇಯಾಂಕ

ಏಕಾಗ್ರತೆ ಎನ್ನುವುದು ಜೀವನದ ಪ್ರತಿಯೊಂದು ಘಟ್ಟದಲ್ಲೂ ಅಗತ್ಯವಾಗಿರುವುದು. ಕಲಿಕೆಯಿಂದ ಹಿಡಿದು ಆಟದ ತನಕ ಪ್ರತಿಯೊಂದರಲ್ಲೂ ಏಕಾಗ್ರತೆಯು ಬೇಕೇಬೇಕು. ಏಕಾಗ್ರತೆ ಇಲ್ಲದೆ ಹೋದರೆ ಆಗ ಯಾವುದೇ ಕಲಿಕೆ ಅಥವಾ ಆಟವು ಪೂರ್ತಿಯಾಗದು. ಇದೀಗ ಏಷ್ಯಾ ಕಪ್ 2023 ಹಾಗೂ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಟಗಾರರ ನೂತನ ಮಾದರಿಯ ತರಬೇತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬಾಂಗ್ಲಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ನಯಿಮ್ ಶೇಖ್ (Mohammad Naim) ಬೆಂಕಿಯ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಹುತೇಕ ತಂಡಗಳು ಏಷ್ಯಾ ಕಪ್ 2023ರ ಪಂದ್ಯಗಳಿಗಾಗಿ ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಹೊತ್ತಿನಲ್ಲಿ ನಯಿಮ್ ಶೇಖ್ ಅವರ ಉರಿಯುವ ಕೆಂಡದ ಮೇಲಿನ ನಡಿಗೆಯ ವೀಡಿಯೋ ಬಾರೀ ಸದ್ದು ಮಾಡಿದೆ.  ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್‍ನಲ್ಲಿ ಪಾಕ್ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಘರ್ಷಣೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಂತರದ ಹಂತದಲ್ಲಿ ಸೆ.4 ರಂದು ಭಾರತವು ನೇಪಾಳವನ್ನು ಎದುರಿಸಲಿದೆ. ಪಾಕಿಸ್ತಾನವು ಮೂರು ಗ್ರೂಪ್ ಹಂತದ ಪಂದ್ಯಗಳು ಮತ್ತು ಸೂಪರ್ ಫೋರ್ ಹಂತದ ಪಂದ್ಯವನ್ನು ಆಯೋಜಿಸುತ್ತದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ ಫೋರ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಮ್ಮೆ ಆಡುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ.

suddiyaana