U-19ನಲ್ಲೂ ಬಾಲ ಬಿಚ್ಚಿದ ಬಾಂಗ್ಲಾ – ಕುಣಿಯಲು ಬಾರದೇ ನೆಲ ಡೊಂಕು
ICCಯಿಂದಲೇ ವಿಶ್ವಕಪ್ ಸೋತ್ರಾ?

ಐಸಿಸಿ ವಿಶ್ವಕಪ್ನಲ್ಲಿ ಗಾಂಚಾಲಿ ತೋರಿಸಿ ಟೂರ್ನಿಯಿಂದಲೇ ಹೊರಬಿದ್ದಿರೋ ಬಾಂಗ್ಲಾದೇಶ ಈಗ ಅಂಡರ್ 19 ವಿಶ್ವಕಪ್ನಲ್ಲೂ ಹೊಸ ಕ್ಯಾತೆ ತೆಗೆದಿದೆ. ಆನ್ ಫೀಲ್ಡ್ನಲ್ಲಿ ಗೆಲ್ಲೋಕೆ ಆಗದೇ ಇದ್ರೂ ಆಫ್ ದಿ ಫೀಲ್ಡ್ನಲ್ಲಿ ಐಸಿಸಿ ನಮಗೆ ಮೋಸ ಮಾಡ್ತು ಅಂತಾ ಬೊಂಬಡ ಹೊಡೆದುಕೊಳ್ತಿದ್ದಾರೆ. ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಹಾಗೇ ಟೂರ್ನಿಯಲ್ಲಿ ಬಾಂಗ್ಲಾದೇಶದ ಅಭಿಯಾನ ಕೂಡ ಕೊನೆಗೊಂಡಿದೆ. ಪಂದ್ಯಗಳ ಸೋಲಿಗೆ ಹಾಗೇ ವಿಶ್ವಕಪ್ನಿಂದ ಹೊರ ಬಿದ್ದಿದ್ದಕ್ಕೆ ಆಟಗಾರರ ಕಳಪೆ ಪ್ರದರ್ಶನ ಅನ್ನೋದನ್ನ ಒಪ್ಪಿಕೊಳ್ಳೋಕೆ ರೆಡಿ ಇಲ್ಲದ ಬಾಂಗ್ಲಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೇಲೆ ಗೂಬೆ ಕೂರಿಸಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ಹೀರೋ ವಿಲನ್ ಆಗಿದ್ರಾ? – ಗೌರವ ಸಿಗದೇ ಕ್ರಿಕೆಟ್ ಗೇ ಗುಡ್ ಬೈ
ವೇಳಾಪಟ್ಟಿಯಲ್ಲಿ ಮೋಸ ಆಗಿದೆ ಎಂದ ಬಾಂಗ್ಲಾ!
ಟಿ20 ವಿಶ್ವಕಪ್‌ಗಾಗಿ ಸೀನಿಯರ್ಸ್ ತಂಡವನ್ನ ಭಾರತಕ್ಕೆ ಕಳುಹಿಸದಿರುವ ನಿರ್ಧಾರದ ಬಳಿಕ ಐಸಿಸಿಯೊಂದಿಗೆ ಬಾಂಗ್ಲಾ ಸಾಕಷ್ಟು ಭಿನ್ನಾಭಿಪ್ರಾಯಗಳನ್ನ ಹೊಂದಿದೆ. ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ಗೆ ಅವಕಾಶ ನೀಡಿದ್ದಕ್ಕೆ ಕುದ್ದು ಹೋಗಿದ್ದಾರೆ. ಈಗ, ಬಿಸಿಬಿಯ ಅಭಿವೃದ್ಧಿ ಸಂಯೋಜಕ ಹಬೀಬುಲ್ ಬಶರ್ ಗಂಭೀರ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶ ತನ್ನ ಆರಂಭಿಕ ಎರಡು ಪಂದ್ಯಗಳನ್ನ ಬುಲವಾಯೊದಲ್ಲಿ ಆಡಿತ್ತು. ಜನವರಿ 17 ರಂದು ಭಾರತದ ವಿರುದ್ಧ ಆಡಿತ್ತು. ಌಂಡ್ ಈ ಪಂದ್ಯವನ್ನ 18 ರನ್ಗಳಿಂದ ಸೋತಿದ್ರು. ಆ ನಂತ್ರ ಎರಡನೇ ಪಂದ್ಯವನ್ನು ಜನವರಿ 20 ರಂದು ನ್ಯೂಜಿಲೆಂಡ್ ವಿರುದ್ಧ ಆಡಿತ್ತು. ಮಳೆ ಕಾರಣಕ್ಕೆ ಪಂದ್ಯ ರದ್ದಾಗಿತ್ತು. ಜನವರಿ 23 ರಂದು ಹರಾರೆಯಲ್ಲಿ ನಡೆದಿದ್ದ ಬಿ ಗುಂಪಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ, ಯುಎಸ್‌ಎ ತಂಡವನ್ನು ಮಣಿಸಿತ್ತು. ಆ ಮೂಲಕ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶ ಮಾಡಿತ್ತು. ನಂತರ ಬಾಂಗ್ಲಾ, ಈ ವಾರ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲು ಬುಲವಾಯೊಗೆ ಮರಳಿತ್ತು. ಈ ಪಂದ್ಯದಲ್ಲಿ ಬಾಂಗ್ಲಾ ಸೋಲು ಅನುಭವಿ ಟೂರ್ನಿಯಿಂದ ಎಲಿಮಿನೇಟ್ ಆಗಿದೆ. ಟೂರ್ನಿಯಿಂದ ಹೊರ ಬಿದ್ದಿದ್ದಕ್ಕೆ ಐಸಿಸಿ ಶೆಡ್ಯೂಲೇ ಕಾರಣ ಎಂದಿದ್ದಾರೆ.
ಪದೇ ಪದೆ ಪ್ರಯಾಣವೇ ಸೋಲಿಗೆ ಕಾರಣ ಎಂದು ನೆಪ!
ಟೂರ್ನಿಯಲ್ಲಿನ ಸೋಲನ್ನ ಒಪ್ಪಿಕೊಳ್ಳದ ಬಶರ್ ಟ್ರಾವೆಲ್ ಹಿಸ್ಟರಿಯನ್ನೇ ನೆಪ ಮಾಡಿಕೊಂಡಿದ್ದಾರೆ. ಟೂರ್ನಿಗೂ ಮುನ್ನ ಬಾಂಗ್ಲಾದೇಶ ತಂಡವು ನಾಲ್ಕು ದಿನಗಳ ಅವಧಿಯಲ್ಲಿ ಮಾಸ್ವಿಂಗೊ (ಜನವರಿ 10) ಮತ್ತು ಹರಾರೆ (ಜನವರಿ 13) ಯಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತ್ತು. ಮೂರು ದಿನಗಳ ನಂತರ ಬುಲವಾಯೊದಲ್ಲಿ ಭಾರತದ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನು ಆಡಬೇಕಾಗಿತ್ತು. ಹರಾರೆಯಿಂದ ಬುಲವಾಯೊಗೆ ಬಸ್‌ನಲ್ಲಿ ಸುಮಾರು ಒಂಬತ್ತು ಗಂಟೆಗಳ ಪ್ರಯಾಣ ಮಾಡಬೇಕಾಯಿತು. ಆಟಗಾರರ ವಿಶ್ರಾಂತಿ ದೃಷ್ಟಿಯಿಂದ ಬಸ್ ಪ್ರಯಾಣ ಕೈಬಿಡ್ಡು ವಿಮಾನದಲ್ಲಿ ನಮ್ಮ ಕೈಯಿಂದ ಹಣ ಕೊಟ್ಟು ಪ್ರಯಾಣ ಮಾಡಿದ್ವು. ಯಾಕಂದ್ರೆ ಇಲ್ಲಿ ನೇರವಾಗಿ ಬುಲವಾಯೊಗೆ ತೆರಳುವ ವಿಮಾನಗಳು ಕಡಿಮೆ. ಆರಂಭದಲ್ಲಿ, ಬಾಂಗ್ಲಾದೇಶ ತನ್ನ ಎರಡೂ ಪಂದ್ಯಗಳನ್ನು ಮಾಸ್ಟಿಂಗೊದಲ್ಲಿ ಆಡಲು ನಿರ್ಧರಿಸಲಾಗಿತ್ತು ಆದರೆ ಐಸಿಸಿ ಇದ್ದಕ್ಕಿದ್ದಂತೆ ಸ್ಥಳಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ವೇಳಾಪಟ್ಟಿಯ ಕುರಿತು ಐಸಿಸಿಗೆ ತಿಳಿಸಲಾಯಿತು, ಆದರೆ ಅದನ್ನು ಅವರು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹಬಿಬುಲ್ ಬಶರ್ ಆರೋಪ ಮಾಡಿದ್ದಾರೆ. ಟೂರ್ನಮೆಂಟ್ ಆರಂಭಕ್ಕೂ ಮೊದಲೇ ಹೇಳಿದ್ರೂ ಐಸಿಸಿ ನಿರ್ಲಕ್ಷ್ಯ ಮಾಡಿತು. ಅಂಡರ್ 19 ವಿಶ್ವಕಪ್ ನಲ್ಲಿ ಬಾಂಗ್ಲಾ ಸೋಲಿಗೆ ರೆಸ್ಟ್ಲೆಸ್ ಪ್ರಯಾಣವೇ ಕಾರಣ ಎಂದಿದ್ದಾರೆ.

ನೋಡಿರಿ

