ಪಾಕಿಸ್ತಾನ ವಿರುದ್ಧ ಸರಣಿ ಗೆದ್ದು ಬೀಗಿದ ಬಾಂಗ್ಲಾ – 15 ರನ್‌ಗೆ 5 ವಿಕೆಟ್ ಕಳೆದುಕೊಂಡು ಕೆಟ್ಟ ದಾಖಲೆ ಬರೆದ ಪಾಕ್

ಪಾಕಿಸ್ತಾನ ವಿರುದ್ಧ ಸರಣಿ ಗೆದ್ದು ಬೀಗಿದ ಬಾಂಗ್ಲಾ – 15 ರನ್‌ಗೆ 5 ವಿಕೆಟ್ ಕಳೆದುಕೊಂಡು ಕೆಟ್ಟ ದಾಖಲೆ ಬರೆದ ಪಾಕ್

ಢಾಕಾದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 20 ಓವರ್​ಗಳಲ್ಲಿ 133 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 125 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ 8 ರನ್​ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಕರುಣ್ OUT.. ಸುದರ್ಶನ್ IN? – ಪಂತ್ ಗಾಯಕ್ಕೆ ಕೀಪರ್ KL ಮದ್ದು?

ಬಾಂಗ್ಲಾ ವಿರುದ್ಧ ಸರಣಿ ಸೋತ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಹೀನಾಯ ದಾಖಲೆ ಬರೆದಿದೆ. 134 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಪವರ್​ಪ್ಲೇನಲ್ಲೇ ಪವರ್​ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗರಾದ ಫಖರ್ ಝಮಾನ್ (8) ಹಾಗೂ ಸೈಮ್ ಅಯ್ಯೂಬ್ (1) ಬಂದ ವೇಗದಲ್ಲೇ ಹಿಂತಿರುಗಿದರೆ, ಆ ಬಳಿಕ ಮೊಹಮ್ಮದ್ ಹ್ಯಾರಿಸ್ (0) ಸೊನ್ನೆ ಸುತ್ತಿದರು. ಇನ್ನು ಹಸನ್ ನವಾಝ್ (0) ಹಾಗೂ ಮೊಹಮ್ಮದ್ ನವಾಝ್ (0) ಶೂನ್ಯಗಳೊಂದಿಗೆ ಪೆವಿಲಿಯನ್​ಗೆ ಹೆಜ್ಜೆಹಾಕಿದರು. ಈ ಮೂಲಕ ಕೇವಲ 15 ರನ್​ಗಳಿಗೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ಪಾಕಿಸ್ತಾನ್ ತಂಡವು ತನ್ನ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭ ಪಡೆದುಕೊಂಡಿತು.

ಇದಕ್ಕೂ ಮುನ್ನ 2024 ರಲ್ಲಿ ಬ್ರಿಸ್ಬೇನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ 16 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಅತ್ಯಂತ ಕೆಟ್ಟ ದಾಖಲೆಯಾಗಿತ್ತು.

Sulekha