ಭಾರತಕ್ಕೆ ಬೆದರಿಸುತ್ತಿದ್ಯಾ ಬಾಂಗ್ಲಾ? ಗಡಿಯಲ್ಲಿ TB-2 ಬೆರಾಕ್ತಾರ್ ಡ್ರೋನ್
ಯೂನಸ್ ಕಳ್ಳಾಟದ ಹಿಂದೆ ಪಾಕ್,ಚೀನಾ?

ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಮುಸ್ಲಿಂ ರಾಷ್ಟ್ರಗಳಿಗೆ ಹತ್ತಿರವಾಗಲು ಪ್ರಾರಂಭಿಸಿದೆ. ಬಾಂಗ್ಲಾದೇಶ ಸರ್ಕಾರವು ಪಾಕಿಸ್ತಾನಿ ಸೇನೆ ಮತ್ತು ಸರ್ಕಾರದೊಂದಿಗೆ ತನ್ನ ಸಂಬಂಧವನ್ನ ಚೆನ್ನಾಗಿ ಬೆಳಸುತ್ತಿದೆ. ಈಗ ಟರ್ಕಿಯೊಂದಿಗಿನ ಸಂಬಂಧಗಳನ್ನು ಸಹ ಸುಧಾರಿಸಲಾಗುತ್ತಿದೆ.
ಬಾಂಗ್ಲಾದೇಶವು ಟಿಬಿ -2 ಡ್ರೋನ್‌ಗಳನ್ನು ಬಳಸಿಕೊಂಡು ಭಾರತ ಮತ್ತು ಬಾಂಗ್ಲಾ ಗಡಿಯನ್ನು ಮೇಲ್ವಿಚಾರಣೆ ಮಾಡುವ ಕಣ್ಗಾವಲು ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹಲವು ಸಂದರ್ಭಗಳಲ್ಲಿ, ಈ ಡ್ರೋನ್‌ಗಳು 20 ಗಂಟೆಗಳವರೆಗೆ ಹಾರಾಡುತ್ತಿರುವುದು ಕಂಡುಬಂದಿದೆ. ಬಾಂಗ್ಲಾದೇಶದ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡಲು, ಭಾರತೀಯ ಸೇನೆಯು ರಾಡಾರ್‌ಗಳನ್ನು ಸ್ಥಾಪಿಸಿದ್ದು, ಅಂತಹ ಉಪಕರಣಗಳನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆ ಇದೆ.
ಪಾಕಿಸ್ತಾನ ಮತ್ತು ಚೀನಾಗಳ ಬಳಿ ಇರೋ ಡ್ರೋನ್‌ಗಿಂತ ಬಾಂಗ್ಲಾ ಖರೀದಿ ಮಾಡಿರೋ ಟಿಬಿ-2 ಬೆರಾಕ್ತಾರ್ ತಂಬಾ ಅಡ್ವಾನ್ಸ್ ಆಗಿದೆ. ಭಾರತದ ಜೊತೆ ಕಿರಿಕ್ ಆಗುತ್ತಿದ್ದಂತೆ ಬಾಂಗ್ಲಾ ತನ್ನ ಸೇನೆ ಸಮರ್ಥವನ್ನ ಹೆಚ್ಚುಗೆ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಗಡಿಯಲ್ಲಿ ಟರ್ಕಿ ನಿರ್ಮಿತ ಬೇರಕ್ತರ್ ಟಿಬಿ2 ಡ್ರೋನ್ ಅನ್ನು ನಿಯೋಜಿಸಿದೆ. ವಿವಿಧ ಜಾಗತಿಕ ಸಂಘರ್ಷಗಳಲ್ಲಿ ಬಳಸುವುದಕ್ಕಾಗಿ ಪ್ರಾಮುಖ್ಯತೆಯನ್ನು ಪಡೆದಿರುವ ಈ ಡ್ರೋನ್ ಸಾಕಷ್ಟು ಡೇಂಜರ್ ಆಗಿದೆ.
ಬಾಂಗ್ಲಾದೇಶ ಸಶಸ್ತ್ರ ಪಡೆಗಳು ಈ ವರ್ಷದ ಆರಂಭದಲ್ಲಿ ಆರಂಭಿಕ 12 ಬೇರಕ್ತಾರ್ TB2 ಡ್ರೋನ್‌ಗಳಲ್ಲಿ ಆರು ಡ್ರೋನ್‌ಗಳನ್ನು ಪಡೆದುಕೊಂಡಿವೆ ಎಂದು DTB ವರದಿ ಮಾಡಿದೆ. ಟಿಬಿ-2 ಬೆರಾಕ್ತಾರ್ ಮಧ್ಯಮ ಎತ್ತರದಲ್ಲಿ ದೀರ್ಘಾವಧಿಯ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಟರ್ಕಿಯ ರಕ್ಷಣಾ ಉದ್ಯಮದ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಇದು ಮಾನವರಹಿತ ವಿಮಾನವಾಗಿದ್ದು, ಗಾಳಿಯಿಂದ ನೆಲಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಜಾಗತಿಕ ಸಂಘರ್ಷಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗಿದೆ. ಟಿಬಿ2 ಡ್ರೋನ್, ಉಕ್ರೇನ್ ಯುದ್ಧದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಜಾಗತಿಕ ಬೇಡಿಕೆಯನ್ನು ಗಳಿಸಿದೆ. ಈ ಡ್ರೋನ್ ಗೇಮ್-ಚೇಂಜರ್ ಆಗಿದ್ದು, 25,000 ಅಡಿ ಎತ್ತರದಲ್ಲಿ ಹಾರುವ ಮತ್ತು ಲೇಸರ್-ಗೈಡೆಡ್ ಬಾಂಬ್‌ಗಳನ್ನು ಬಳಸಿಕೊಂಡು ನಿಖರವಾದ ದಾಳಿಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಟ್ಯಾಂಕ್‌ಗಳು ಮತ್ತು ಫಿರಂಗಿಗಳ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿದೆ, ಸಂಘರ್ಷದ ಸಮಯದಲ್ಲಿ ರಷ್ಯಾದ ಪಡೆಗಳ ಮೇಲೆ ಗಣನೀಯ ಹಾನಿಯನ್ನುಂಟುಮಾಡಿದೆ. ಹೀಗಾಗಿ ಈ ಡ್ರೋನ್ ಸಖತ್ ಡೇಂಜರ್ ಆಗಿದೆ.
ಟರ್ಕಿಶ್ ಡ್ರೋನ್ ಕಾಣುತ್ತಿದ್ದಂತೆ ಭಾರತ ಅಲರ್ಟ್
ಬಾಂಗ್ಲಾದೇಶವು ಟರ್ಕಿಶ್ ಡ್ರೋನ್‌ಗಳನ್ನು ಗಡಿಯ ಬಳಿ ನಿಯೋಜಿಸುತ್ತಿರುವುದರಿಂದ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಬಾಂಗ್ಲಾದೇಶ ಸೇನೆಯು ತನ್ನ ಸೂಕ್ಷ್ಮ ಗಡಿ ಪ್ರದೇಶಗಳ ಬಳಿ ಟರ್ಕಿಶ್ ಬೈರಕ್ತರ್ ಟಿಬಿ-2 ಡ್ರೋನ್‌ಗಳನ್ನು ನಿಯೋಜಿಸುವುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಾನವರಹಿತ ವೈಮಾನಿಕ ವಾಹನಗಳು ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ. ಭಾರತದ ಗಡಿಯುದ್ದಕ್ಕೂ ಬಾಂಗ್ಲಾದೇಶದ ವಾಯುಪ್ರದೇಶದಲ್ಲಿ ಡ್ರೋನ್‌ಗಳು ಹಾರಾಟ ನಡೆಸುತ್ತಿರುವುದನ್ನು ಗಮನಿಸಲಾಗಿದೆ. ಕೆಲವು ಕಾರ್ಯಾಚರಣೆಗಳು 20 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿವೆ ಎಂದು ಮೂಲಗಳು ಸೂಚಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಏಜೆನ್ಸಿಗಳು ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಿವೆ. ಡ್ರೋನ್ ಚಟುವಟಿಕೆಗಳನ್ನು ಪತ್ತೆಹಚ್ಚಲು ರಾಡಾರ್‌ಗಳು ಮತ್ತು ಇತರ ಕಾರ್ಯ ವಿಧಾನಗಳನ್ನು ನಿಯೋಜಿಸಿವೆ. ಟರ್ಕಿ ಮತ್ತು ಪಾಕಿಸ್ತಾನದೊಂದಿಗೆ ಬಾಂಗ್ಲಾದೇಶದ ಬೆಳೆಯುತ್ತಿರುವ ಮಿಲಿಟರಿ ಸಹಕಾರ ಆತಂಕ ಹುಟ್ಟುಹಾಕಿದೆ. ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಆತಂಕ ಹೆಚ್ಚಾಗಿದೆ. ಇದು ಭಾರತದಲ್ಲಿ ಆತಂಕವನ್ನ ಹುಟ್ಟುಹಾಕಿದ್ದು, ಶತ್ರುಗಳ ದೇಶ ಪ್ಲ್ಯಾನ್‌ಗಳನ್ನ ಉಲ್ಟಾ ಮಾಡೋಕೆ ಭಾರತ ಕೂಡ ರೆಡಿಯಾಗಿದೆ..