ಬಾಂಗ್ಲಾದಲ್ಲಿ ರೊಚ್ಚಿಗೆದ್ದ ಸ್ಟೂಡೆಂಟ್ಸ್ – ಅಧಿಕಾರಿಗಳಿಗೆ ಯೂನಸ್ ಖಡಕ್ ಎಚ್ಚರಿಕೆ!
ನಿಲ್ಲುತ್ತಾ ಹಿಂದೂಗಳ ಮೇಲಿನ ದಾಳಿ?
ದೊಡ್ಡ ಪ್ರತಿಭಟನೆಯಿಂದ ಬಾಂಗ್ಲಾದೇಶ ಮತ್ತೆ ನಡುಗಿ ಹೋಗಿದೆ. ಯೂನುಸ್ ಅವರ ನಿವಾಸದ ಆವರಣದಲ್ಲಿ ಪ್ರತಿಭಟನಾ ಘೋಷಣೆಗಳು ಮೊಳಗಿವೆ. ಬಾಂಗ್ಲಾದೇಶದಲ್ಲಿ ಮತ್ತೆ ಪ್ರತಿಭಟನೆಗಳು. ಹೊಸದಾಗಿ ವಿದ್ಯಾರ್ಥಿ ಆಂದೋಲನ ಮತ್ತೆ ಶುರುವಾಗಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರ ಮನೆಯ ಮುಂದೆ ಭಾರಿ ವಿದ್ಯಾರ್ಥಿ ಪ್ರತಿಭಟನೆ ನಡೆಯುತ್ತಿದೆ. ಯೂನುಸ್ ಸರ್ಕಾರ ರಚನೆಗೆ ಸಹಾಯ ಮಾಡಿದ್ದಾರೆ ಎಂದು ಹೇಳಲಾದ ಬಾಂಗ್ಲಾದೇಶದ ಅಸಮಾನತೆ ವಿರೋಧಿ ಪ್ರತಿಭಟನಾಕಾರರ ಗುಂಪೊಂದು ಅವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಹಿಂದೂಗಳ ಮೇಲಿನ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೂನುಸ್ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಹಿಂದೂಗಳ ಮೇಲಿನ ದಾಳಿ ನಿಲ್ಲುತ್ತಾ?
ಶೇಖ್ ಹಸೀನಾ ಅವರ ರಾಜೀನಾಮೆಯ ನಂತರ, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ. ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಲ್ಪ ಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾದಂತೆ, ದೇಶದ ಜಾಗತಿಕ ಖ್ಯಾತಿಗೆ ಧಕ್ಕೆಯಾಗಿ, ಅಂತರರಾಷ್ಟ್ರೀಯ ಸಮುದಾಯದಿಂದ ಟೀಕೆಗಳು ಬಂದಿದ್ವು. ಶೇಖ್ ಹಸೀನಾ ಅವರ ರಾಜೀನಾಮೆಯ ನಂತರ ಪರಿಸ್ಥಿತಿ ಹದಗೆಟ್ಟು ದೇವಾಲಯಗಳ ಮೇಲಿನ ದಾಳಿಗಳು, ಮನೆಗಳಿಗೆ ಬೆಂಕಿ ಹಚ್ಚುವುದು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ.
ಹೀಗಾಗಿ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಂತಿಮವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸೋಮವಾರ, ಯೂನಸ್ ಭದ್ರತಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿ, ಹಿಂಸಾಚಾರವನ್ನು ನಿಲ್ಲಿಸಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲವಾದರೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಪ್ರತಿಷ್ಠೆಗೆ ತೀವ್ರ ಹಾನಿಯಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.
Full Gfx: ಬಾಂಗ್ಲಾದಲ್ಲಿ ವಿಶೇಷ ಕಮಾಂಡ್ ಸೆಂಟರ್ ಸ್ಥಾಪನೆ
ದೇಶಾದ್ಯಂತ ಮೇಲ್ವಿಚಾರಣೆಗಾಗಿ ವಿಶೇಷ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಯಾವುದೇ ಹಿಂಸಾಚಾರ ನಡೆಯುತ್ತಿದೆ ಅಂದ್ರೆ ಅದನ್ನ ತಡೆಯೋಕೆ ತಂತ್ರಜ್ಞಾನ ಬಳಕೆಯ ಜೊತೆಗೆ ಪೊಲೀಸ್ ಮತ್ತು ಭದ್ರತಾ ಪಡೆಗಳ ನಡುವಿನ ಸಮನ್ವಯದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ದೇವಾಲಯಗಳ ಮೇಲೆ ಹೆಚ್ಚುತ್ತಿರುವ ದಾಳಿಗಳು
ಬಾಂಗ್ಲಾದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿ ನಡೆಯುತ್ತಿದೆ. ಇದ್ರಿಂದ ಬಾಂಗ್ಲಾದಲ್ಲಿ ಜನ ಭಯದಲ್ಲಿ ಬದುಕುತ್ತಿದ್ದಾರೆ. ಸಾಕಷ್ಟು ಜನ ದಾಳಿ ಆದ್ರು ಮೇಲೆ ಎಚ್ಚೆತ್ತ ಬಾಂಗ್ಲಾ ಸರ್ಕಾರ ಈಗ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ.. ಈಗ ಕಣ್ಣು ಒರೆಸುವ ಕೆಲಸ ಮಾಡುತ್ತಿರೋ ಯೂನಸ್ ಸರ್ಕಾರ ಎಲೆಕ್ಷನ್ಗೆ ತಯಾರಿ ಮಾಡಿಕೊಳ್ಳುತ್ತಿದೆ ಅನಿಸುತ್ತಿದೆ. ಈಗ ನಾವು ಅಲ್ಪ ಸಂಖ್ಯಾತರ ಪರವಾಗಿ ಇದ್ದೇವೆ ಅನ್ನೋದು ತೋರಿಸಿದ್ರೆ ಈ ವರ್ಷದ ಕೊನೆಯಲ್ಲ ಅಥವಾ ಮುಂದಿನ ವರ್ಷ ಆರಂಭದಲ್ಲಿ ನಡೆಯೋ ಬಾಂಗ್ಲಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯೋ ಪ್ಲ್ಯಾನ್ ಯೂನಸ್ ಪಡೆ ಮಾಡಿದಂತೆ ಕಾಣುತ್ತಿದೆ. ಒಟ್ನಲ್ಲಿ ಅವರವರ ಲಾಭಕ್ಕೆ ಅಮಾಯಕರನ್ನ ಬಲಿ ಕೊಡುತ್ತಿರುವುದಂತು ಸತ್ಯ..