ಬಂಗಾರಮ್ಮನ ಪಾತ್ರಕ್ಕೆ ವಿದಾಯ – ಪುಟ್ಟಕ್ಕನ ಜೊತೆ ಕಂಠಿಯ ಕಣ್ಣೀರು
ಧಾರಾವಾಹಿಯಿಂದ ಹೊರ ನಡೆದ ನಟಿ ಮಂಜುಭಾಷಿಣಿ - ಕೊನೆಯಾಯ್ತು ಬಂಗಾರಮ್ಮನ ಪಾತ್ರ

ಬಿಗ್ಬಾಸ್ ರಿಯಾಲಿಟಿ ಶೋಗೋಸ್ಕರ ನಟಿ ಮಂಜುಭಾಷಿಣಿ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು’ ಸೀರಿಯಲ್ನಿಂದ ಹೊರಬಂದಿದ್ದರು. ಹೀಗಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಬಂಗಾರಮ್ಮನ ಪಾತ್ರವೇ ಕೊನೆಗೊಂಡಿದೆ.
ನಟಿ ಮಂಜು ಭಾಷಿಣಿ ಬಿಗ್ಬಾಸ್ಗಾಗಿ ಧಾರಾವಾಹಿಯಿಂದ ಹೊರಬಂದ ಕಾರಣ ಕಥೆಯೇ ಬದಲಾಗಿದೆ. ಕಥೆಯಲ್ಲಿ ಮಂಜುಭಾಷಿಣಿ ಬಂಗಾರಮ್ಮ ಪಾತ್ರವನ್ನು ಮಾಡುತ್ತಿದ್ದರು. ಇದೀಗ ಸೀರಿಯಲ್ ಕಥೆಯಲ್ಲಿ ಬಂಗಾರಮ್ಮನ ಬದುಕು ಅಂತ್ಯಕಂಡಿದೆ. ಸೀರಿಯಲ್ನಲ್ಲಿ ತಮ್ಮ ಪಾತ್ರ ಮುಗಿಯುವ ಮೊದಲೇ ಮಂಜು ಭಾಷಿಣಿ ಔಟ್ ಆಗಿದ್ದರು. ಸಹನಾಳನ್ನು ಅಪಹರಣ ಮಾಡಲಾಗಿರುತ್ತದೆ. ಸಹನಾ ರಕ್ಷಣೆಗೆ ಪುಟ್ಟಕ್ಕ ಮತ್ತು ಬಂಗಾರಮ್ಮ ಮುಂದಾಗಿರುತ್ತಾರೆ. ರೌಡಿಗಳ ಸಂಘರ್ಷದ ವೇಳೆ ಬಂಗಾರಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬಂಗಾರಮ್ಮನ ಪಾತ್ರ ಕೊನೆಯಾಗಿರೋದನ್ನು ಸೋಮವಾರ ರಿಲೀಸ್ ಆಗಿರುವ ಪ್ರೋಮೋದಲ್ಲಿ ತೋರಿಸಲಾಗಿದೆ.
ಮೂರು ವರ್ಷಗಳಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರಸಾರವಾಗುತ್ತಿದೆ. ಝೀ ಕನ್ನಡ ವಾಹಿನಿಯಲ್ಲಿ ಪುಟ್ಟಕ್ಕನ ಮಕ್ಕಳು ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಇದೀಗ ಈ ಸೀರಿಯಲ್ ನಲ್ಲಿ ಖಡಕ್ ಪಾತ್ರಧಾರಿ, ಪುಟ್ಟಕ್ಕನ ಸ್ನೇಹಿತೆ ಬಂಗಾರಮ್ಮನ ಪಾತ್ರ ಅಂತ್ಯವಾಗಿದೆ. ಮೊದಲು ಸೀರಿಯಲ್ ನಲ್ಲಿ ಸ್ನೇಹ ಪಾತ್ರವನ್ನು ಕೂಡಾ ಸಾವಿನಲ್ಲಿಯೇ ಅಂತ್ಯ ಮಾಡಲಾಗಿತ್ತು. ಇದೀಗ ಬಂಗಾರಮ್ಮನ ಪಾತ್ರ ಕೂಡಾ ಸಾವಿನಲ್ಲಿಯೇ ಅಂತ್ಯಗೊಳಿಸಲಾಗಿದೆ. ಇನ್ನು ಈ ಸೀರಿಯಲ್ನಲ್ಲಿ ಬರೀ ಸಾವೇ ನೋಡಬೇಕಾ?, ಆದಷ್ಟು ಬೇಗ ಸೀರಿಯಲ್ ಕೊನೆಗೊಳಿಸಿ ಅಂತಾ ವೀಕ್ಷಕರು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇನ್ನೂ ಒಂದು ವಿಚಾರ ಏನಂದರೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಬಿಟ್ಟು ಮಂಜುಭಾಷಿಣಿ ಬಿಗ್ಬಾಸ್ ಗೆ ಎಂಟ್ರಿಕೊಟ್ಟಿದ್ದರು. ಆದರೆ, ಬಿಗ್ಬಾಸ್ನಿಂದ ಈಗಾಗಲೇ ಮಂಜುಭಾಷಿಣಿ ಹೊರಬಿದ್ದಿದ್ದಾರೆ. ಇತ್ತ ಧಾರಾವಾಹಿಯಲ್ಲೂ ಮಂಜುಭಾಷಿಣಿ ಪಾತ್ರ ಬಂಗಾರಮ್ಮ ಕೂಡಾ ಅಂತ್ಯಗೊಂಡಿದೆ. ಅತ್ತ ಬಿಗ್ಬಾಸ್ ಮನೆಯಲ್ಲೂ ಇಲ್ಲ, ಇತ್ತ ಪಾತ್ರವೂ ಕೊನೆಯಾಗಿದೆ. ಇದರಿಂದ ಮಂಜುಭಾಷಿಣಿ ಅಭಿಮಾನಿಗಳು ನಿರಾಶರಾಗಿದ್ದಾರೆ. ಯಾಕೆಂದರೆ, ಬಂಗಾರಮ್ಮನ ಪಾತ್ರಕ್ಕೆ ನಟಿ ಮಂಜುಭಾಷಿಣಿ ತುಂಬಾನೇ ಜೀವ ತುಂಬಿದ್ದರು. ಹಳ್ಳಿಸೊಗಡಿನ ಭಾಷೆ. ಬಂಗಾರಮ್ಮನ ಗತ್ತು, ಮೈತುಂಬಾ ಧರಿಸುವ ಆಭರಣ, ಮುಖದಲ್ಲಿ ಕಂಡುಬರುವ ಬಂಗಾರದ ಕಳೆ ನಿಜಕ್ಕೂ ಪ್ರೇಕ್ಷಕರ ಮನ ಸೆಳೆದಿತ್ತು. ಇದೀಗ ಬಂಗಾರಮ್ಮನ ಪಾತ್ರ ಕೊನೆಗೊಂಡಿರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಅಭಿಮಾನಿಗಳಿಗೆ ಬೇಸರ ತಂದಿದೆ.

ನೋಡಿರಿ

