ಸಸ್ಯಕಾಶಿಯಲ್ಲಿ ಬೆಂಗಳೂರಿನ ಇತಿಹಾಸ ಹೇಳಲಿವೆ ಪುಷ್ಪಗಳು – ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋಗೆ ಭರದ ಸಿದ್ಧತೆ

ಸಸ್ಯಕಾಶಿಯಲ್ಲಿ ಬೆಂಗಳೂರಿನ ಇತಿಹಾಸ ಹೇಳಲಿವೆ ಪುಷ್ಪಗಳು – ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋಗೆ ಭರದ ಸಿದ್ಧತೆ

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ದಿನದಂದು ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನದಲ್ಲಿ ಜನರಿಗೆ ಶೈಕ್ಷಣಿಕ ಅನುಭವ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದ್ದು, ಬೆಂಗಳೂರು ಇತಿಹಾಸವನ್ನು ಥೀಮ್ ಆಗಿ ಬಳಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ ಬೆಂಗಳೂರಿನ ಇತಿಹಾಸವನ್ನು ಥೀಮ್ ಆಗಿ ತೆಗೆದುಕೊಳ್ಳಲಿದ್ದು, ಸುಮಾರು ಕ್ರಿಸ್ತಶಕ 1,500 ರಿಂದ ವಿವಿಧ ರಾಜವಂಶಗಳ ಆಳ್ವಿಕೆಯಲ್ಲಿ ನಗರ ಹೇಗೆ ಬೆಳೆಯಿತು ಹಾಗೂ ಹೇಗೆ ರೂಪುಗೊಂಡಿತು ಎಂಬುದನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನ ವಿವರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿ – ಸದ್ಯದಲ್ಲೇ ಶುರುವಾಗಲಿದೆ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ

ಈ ಕುರಿತು ಮಾತನಾಡಿದ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ‘ಫಲಪುಷ್ಪ ಪ್ರದರ್ಶನ ಥೀಮ್-ವೈಸ್ ಹಾಗೂ ಕಿಂಗ್ಡಮ್-ವೈಸ್ ಆಗಿರುತ್ತದೆ. ಅವುಗಳ ಬಗ್ಗೆ ಟಿಪ್ಪಣಿಯನ್ನು ನೀಡಲಾಗಿರುತ್ತದೆ. ಈ ಬಾರಿ ಎಲ್ಲಾ ಪ್ರವಾಸಿಗರಿಗೆ ಫಲಪುಷ್ಪ ಪ್ರದರ್ಶನವು ಶೈಕ್ಷಣಿಕ ಪ್ರವಾಸವಾಗಲಿದೆ . ಇದು ಗ್ಲಾಸ್ ಹೌಸ್‌ಗಷ್ಟೇ ಇದು ಸೀಮಿತವಾಗುವುದಿಲ್ಲ. ಉದ್ಯಾನವನದಾದ್ಯಂತ ಇತಿಹಾಸ ಹೇಳುವ ಪ್ರಯತ್ನ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ಫಲಪುಷ್ಪ ಪ್ರದರ್ಶನಕ್ಕೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಪುಣೆಯ ಅಪರೂಪದ ಹೂವುಗಳು ಸೇರಿದಂತೆ 97 ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಬಳಸಲಾಗುತ್ತಿದೆ. ಮೊದಲ ಬಾರಿಗೆ, ಗ್ಲಾಸ್ ಹೌಸ್ ಹೊರಭಾಗವನ್ನು ಪ್ರದರ್ಶನದ ಮುಖ್ಯ ಥೀಮ್ ಆಗಿ ಬಳಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ, ನಾವು ಒಬ್ಬ ವ್ಯಕ್ತಿ ಅಥವಾ ವಿಷಯವನ್ನು ತೆಗೆದುಕೊಳ್ಳುತ್ತಿದ್ದೆವು. ಈ ಬಾರಿ ಬೆಂಗಳೂರಿನ ಬೆಳವಣಿಗೆಯನ್ನು ತೋರಿಸುತ್ತೇವೆ ಎಂದು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

suddiyaana